ಲಂಡನ್: ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ನಲ್ಲಿ ಸಾಧಿಸಿದ ಗೆಲುವು ವರ್ಣಬೇಧದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಹೆಚ್ಚಿನ ಪ್ರೇರಣೆ ನೀಡಿದೆ ಎಂದು ವಿಂಡೀಸ್ ತಂಡದ ಮಾಜಿ ನಾಯಕ ಡರೇನ್ ಸಾಮಿ ಹೇಳಿಕೆ ನೀಡಿದ್ದಾರೆ.
ಸೌತಾಂಪ್ಟನ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ 4 ವಿಕೆಟ್ಗಳಿಂದ ಮಣಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
" ಕಪ್ಪು ವರ್ಣಿಯರು ನ್ಯಾಯಾಂಗನಿಂದನೆಯ ವಿರುದ್ದ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಕಪ್ಪು ವರ್ಣಿಯರ ತಂಡ ಇಂಗ್ಲೆಂಡ್ ಬಂದಿದೆ. ಎಲ್ಲ ಸರಿಯಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಈ ಗೆಲುವು ಹೋರಾಟಕ್ಕೆ ಹೆಚ್ಚಿನ ಪ್ರೇರಣೆ ತಂದುಕೊಟ್ಟಿದೆ " ಎಂದು ವಿಂಡೀಸ್ ತಂಡಕ್ಕೆ 2 ವಿಶ್ವಕಪ್ ತಂದುಕೊಟ್ಟಿರುವ ಸಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಕ್ರಿಕೆಟ್ ದೀರ್ಘಸಮಯದ ಬಳಿಕ ಸರಿಯಾದ ಸನ್ನಿವೇಶದಲ್ಲಿ ಕ್ರಿಕೆಟ್ ಹಿಂತಿರುಗಿದೆ. ಕ್ರೀಡೆಯ ನಡೆಯದೇ ಇದ್ದ ಸಂದರ್ಭ ಮುಗಿದ ಬಳಿಕ ಟಿವಿಯಲ್ಲಿ ಕಪ್ಪು ತಂಡವನ್ನು ಅಭಿಮಾನಿಗಳು ನೋಡುತ್ತಿರುವುದು ವೆಸ್ಟ್ ಇಂಡೀಸ್ ತಂಡಕ್ಕೆ ಹೆಚ್ಚಿ ಬಲ ತಂದುಕೊಟ್ಟಿದೆ ಎಂದು 36 ವರ್ಷ ಆಲ್ರೌಂಡರ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಮೇರಿಕಾದಲ್ಲಿ ಪೊಲೀಸರಿಂದ ಕಪ್ಪು ವರ್ಣೀಯ ಸಾವಿಗೀಡಾದ ನಂತರ ವಿಶ್ವದಾದ್ಯಂತ ಕಪ್ಪು ವರ್ಣಿಯರ ಹೋರಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕ್ರಿಕೆಟ್ನಲ್ಲೂ ವರ್ಣಬೇಧ ನೀತಿ ನಡೆಯುತ್ತಿದೆ ಎಂದು ಧ್ವನಿಯತ್ತಿದ್ದ ಡರೇನ್ ಸಾಮಿ ಬ್ಲಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದರು.