ETV Bharat / sports

ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿ: ಮೊಟೆರಾ ಕ್ರೀಡಾಂಗಣದಲ್ಲಿ ನಾಕೌಟ್ ಪಂದ್ಯಗಳು

author img

By

Published : Dec 17, 2020, 2:14 PM IST

ಮೊಟೆರಾ ಕ್ರೀಡಾಂಗಣದಲ್ಲಿ ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳು ನಡೆಯಲಿದ್ದು, ಗುಂಪು ಹಂತದ ಪಂದ್ಯಗಳ ನಂತರ 8 ತಂಡಗಳು ಅಹಮದಾಬಾದ್​ಗೆ ಪ್ರಯಾಣಿಸಲಿವೆ.

Motera Stadium to host knockout matches of Syed Mushtaq Ali Trophy
ಮೊಟೆರಾ ಕ್ರೀಡಾಂಗಣದಲ್ಲಿ ನಾಕೌಟ್ ಪಂದ್ಯಗಳು

ನವದೆಹಲಿ: ಮುಂಬರುವ ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.

ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಕ್ವಾರ್ಟರ್ ಫೈನಲ್ (ಜನವರಿ 26-27), ಸೆಮಿಫೈನಲ್ (ಜನವರಿ 29), ಮತ್ತು ಫೈನಲ್ (ಜನವರಿ 31) ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಂಗಸಂಸ್ಥೆಗಳಿಗೆ ತಿಳಿಸಿದೆ.

ಬೆಂಗಳೂರು, ಕೋಲ್ಕತ್ತಾ, ವಡೋದರಾ, ಇಂದೋರ್ ಮತ್ತು ಮುಂಬೈನಲ್ಲಿ ಕ್ರಮವಾಗಿ ಐದು ಗುಂಪುಗಳ ಪಂದ್ಯಗಳು ನಡೆಯಲಿವೆ. ಚೆನ್ನೈ, ಪ್ಲೇಟ್ ಗ್ರೂಪ್ ಪಂದ್ಯಗಳಿಗೆ (plate group games) ಆತಿಥ್ಯ ವಹಿಸಲಿದೆ.

ಕಳೆದ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದ ಕರ್ನಾಟಕ ತಂಡ ಜನವರಿ 10 ರಂದು ಜಮ್ಮು ಮತ್ತು ಕಾಶ್ಮೀರ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಜನವರಿ 2ರ ಒಳಗೆ ತಂಡದ ಹೋಟೆಲ್​ಗೆ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಹಾಜರಿರಬೇಕು. ಜನವರಿ 2, 4 ಮತ್ತು 6 ರಂದು ಆಯಾ ತಂಡದ ಹೋಟೆಲ್‌ಗಳಲ್ಲಿ ಕೋವಿಡ್-19 ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ಕೋವಿಡ್ ಸೋಂಕು ಕಂಡುಬರದಿದ್ದರೆ, ಜನವರಿ 8 ರಿಂದ ಅಭ್ಯಾಸ ಪ್ರಾರಂಭಿಸಬಹುದು ಎಂದು ಬಿಸಿಸಿಐ ತಿಳಿಸಿದೆ.

ಓದಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಫೈನಲ್ ಪ್ರವೇಶಿಸಲು ಭಾರತಕ್ಕಿದೆ ದೊಡ್ಡ ಸವಾಲು

ಗುಂಪು ಹಂತದ ಪಂದ್ಯಗಳು ಪೂರ್ಣಗೊಂಡ ನಂತರ, ಎಂಟು ತಂಡಗಳು ಜನವರಿ 19 ರಂದು ಅಹಮದಾಬಾದ್‌ಗೆ ಪ್ರಯಾಣಿಸಲಿದ್ದು, ಜನವರಿ 20 ಮತ್ತು 22 ರಂದು ಎರಡು ಕೋವಿಡ್ -19 ಪರೀಕ್ಷೆಗಳಿಗೆ ಒಳಗಾಗಲಿದೆ.

ಕೋವಿಡ್​-19ನಿಂದ ಮೊಟಕುಗೊಂಡಿರುವ ದೇಶಿ ಋತುವನ್ನು ಮುಂದಿನ ವರ್ಷ ಜನವರಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ20 ರಾಷ್ಟ್ರೀಯ ಚಾಂಪಿಯನ್​ಶಿಪ್​ ಆಯೋಜನೆ ಮೂಲಕ ಆರಂಭಿಸಲು ಬಿಸಿಸಿಐ ನಿರ್ಧರಿಸಿದ್ದು, ಜನವರಿ 10 ರಿಂದ 31ರ ವರೆಗೆ ಪಂದ್ಯಗಳು ನಡೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.