ETV Bharat / sports

ದಶಕದ ಬಳಿಕ ಕೊಹ್ಲಿ-ರೋಹಿತ್​ ಜೋಡಿಯ ಅಧಿಪತ್ಯ ಕೊನೆಗಾಣಿಸಿದ ಕನ್ನಡಿಗ ರಾಹುಲ್

author img

By

Published : Dec 2, 2020, 3:27 PM IST

ಕಳೆದ 10 ವರ್ಷಗಳಲ್ಲಿ ವಿರಾಟ್​ ಕೊಹ್ಲಿ 2010,11,12, 13,14,15,17 ಮತ್ತು 2018ರಲ್ಲಿ ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು. 2015 ಮತ್ತು 2019ರಲ್ಲಿ ರೋಹಿತ್ ಶರ್ಮಾ ಗರಿಷ್ಠ ರನ್​ ದಾಖಲೆ ತಮ್ಮದಾಗಿಸಿಕೊಂಡಿದ್ದರು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಸಿಡ್ನಿ: ಭಾರತ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ಗಳಾದ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಕ್ಯಾಲೆಂಡರ್​ ವರ್ಷದಲ್ಲಿ 2010ರ ಬಳಿಕ ಮೊದಲ ಬಾರಿಗೆ ಭಾರತದ ಪರ ಗರಿಷ್ಠ ರನ್​ ಸಿಡಿಸಿದ ಬ್ಯಾಟ್ಸ್​ಮನ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ವಿರಾಟ್​ ಕೊಹ್ಲಿ 2010,11,12,13,14,15,17 ಮತ್ತು 2018ರಲ್ಲಿ ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು. 2015 ಮತ್ತು 2019ರಲ್ಲಿ ರೋಹಿತ್ ಶರ್ಮಾ ಗರಿಷ್ಠ ರನ್​ ದಾಖಲೆ ತಮ್ಮದಾಗಿಸಿಕೊಂಡಿದ್ದರು.

ಆದರೆ 2020ರಲ್ಲಿ ಕನ್ನಡಿಗ ಕೆ.ಎಲ್.ರಾಹುಲ್​ ಭಾರತದ ಪರ ಗರಿಷ್ಠ ರನ್​ ಬಾರಿಸಿದ ಬ್ಯಾಟ್ಸ್​ಮನ್ ಆಗಿದ್ದಾರೆ. ಅವರು 8 ಪಂದ್ಯಗಳಿಂದ 1 ಶತಕ ಹಾಗೂ 3 ಅರ್ಧಶತಕ ಸಹಿತ 438 ರನ್ ​ಗಳಿಸಿದ್ದಾರೆ. 2ನೇ ಸ್ಥಾನದಲ್ಲಿ ಕೊಹ್ಲಿಯಿದ್ದು, 8 ಪಂದ್ಯಗಳಿಂದ 368 ರನ್​ಗಳಿಸಿ 2ನೇ ಸ್ಥಾನಗಳಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭಾರತದ ಪರ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್‌ಗಳಿವರು:

  • 2010- ವಿರಾಟ್​ ಕೊಹ್ಲಿ - 996 ರನ್​(25 ಪಂದ್ಯ)
  • 2011- ವಿರಾಟ್ ಕೊಹ್ಲಿ- 1381(34)
  • 2012- ವಿರಾಟ್ ಕೊಹ್ಲಿ- 1026(17)
  • 2013-ವಿರಾಟ್ ಕೊಹ್ಲಿ- 1268(34)
  • 2014- ವಿರಾಟ್ ಕೊಹ್ಲಿ- 1054(21)
  • 2015-ರೋಹಿತ್​ ಶರ್ಮಾ- 815(17)
  • 2016- ವಿರಾಟ್ ಕೊಹ್ಲಿ- 739(10)
  • 2017- ವಿರಾಟ್ ಕೊಹ್ಲಿ- 1460(26)
  • 2018- ವಿರಾಟ್ ಕೊಹ್ಲಿ- 1202(14)
  • 2019- ರೋಹಿತ್ ಶರ್ಮಾ- 1377(28)
  • 2020- ಕೆ.ಎಲ್.ರಾಹುಲ್- 438(8)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.