ದುಬೈ: ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ತಮ್ಮ 50 ನೇ ಅರ್ಧಶತಕ(50+) ಪೂರೈಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಡ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಬೈರ್ಸ್ಟೋವ್ 160 ರನ್ಗಳ ಜೊತೆಯಾಟ ನೀಡಿದ್ದರು.
ಬೈರ್ಸ್ಟೋವ್ 97 ರನ್ಗಳಿಗೆ ಔಟಾದರೆ, ಡೇವಿಟ್ ವಾರ್ನರ್ 40 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 52 ರನ್ಗಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಬಾರಿ 50 ಅಥವಾ 50ಕ್ಕಿಂತ ರನ್ಗಳನ್ನು 50 ನೇ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು.
132 ಪಂದ್ಯಗಳನ್ನಾಡಿರುವ ವಾರ್ನರ್ 46 ಅರ್ಧಶತಕ ಹಾಗೂ 4 ಶತಕ ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 42( 37 ಅರ್ಧಶತಕ, 5 ಶತಕ) ಸುರೇಶ್ ರೈನಾ 39 (38 ಅರ್ಧಶತಕ ಹಾಗೂ 1 ಶತಕ), ರೋಹಿತ್ ಶರ್ಮಾ 39( 38 ಅರ್ಧಶತಕ ಹಾಗೂ 1 ಶತಕ) ನಂತರದ ಸ್ಥಾನದಲ್ಲಿದ್ದಾರೆ.