ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಂಬೈ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ನಿನ್ನೆಯ ಪಂದ್ಯದಲ್ಲಿ ಎದುರು ಬದರಾಗಿ ಗುರಾಯಿಸಿದ ಫೋಟೋ ವೈರಲ್ ಆಗುತ್ತಿದ್ದು, ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ಗೆ ಯತ್ನಿಸಿದರು ಎಂಬ ಅನುಮಾನ ಕೂಡಾ ವ್ಯಕ್ತವಾಗುತ್ತಿದೆ.
ಆರ್ಸಿಬಿ ನೀಡಿದ 165 ರನ್ಗಳ ಗುರಿಯನ್ನ ಬೆನ್ನಟ್ಟಿದ ಮುಂಬೈ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಸೂರ್ಯಕುಮಾರ್ ಯಾದವ್ ಮಾತ್ರ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿ ಪಂದ್ಯ ಗೆಲ್ಲಿಸಿಕೊಟ್ಟರು. ಏಕಾಂಗಿಯಾಗಿ ಹೋರಾಡಿದ ಯಾದವ್ 49 ಎಸೆತಗಳಲ್ಲಿ 79 ರನ್ಗಳಿಸಿ ಗೆಲುವಿನ ರೂವಾರಿಯಾಗಿದ್ದರು.
ಆದರೆ, ಪಂದ್ಯದ 13ನೇ ಓವರ್ನ ಕೊನೆಯ ಎಸೆತವನ್ನು ಹೊಡೆದ ಚೆಂಡು ವಿರಾಟ್ ಕೊಹ್ಲಿ ಕೈ ಸೇರಿತು. ಈ ಸಂದರ್ಭದಲ್ಲಿ ಕೊಹ್ಲಿ ನೇರವಾಗಿ ಕ್ರೀಸ್ಗೆ ಆಗಮಿಸುತ್ತಿದ್ದರು. ಈ ವೇಳೆ ಯಾದವ್ ಮತ್ತು ಕೊಹ್ಲಿ ಒಬ್ಬರನ್ನೊಬ್ಬರು ಗುರಾಯಿಸುತ್ತ ಬಂದರು. ಕೊಹ್ಲಿ ಹತ್ತಿರ ಬಂದು ನಿಂತ ತಕ್ಷಣ ಯಾದವ್ ಕ್ರೀಸ್ ಬಿಟ್ಟು ಹೊರಟರು.
-
#BCCIpolitics
— ---- (@panchamrata) October 29, 2020 " class="align-text-top noRightClick twitterSection" data="
Captain of National team. Sledging youngsters that too uncapped player.
Got what he deserved... #ViratKohli #IPL2020 #MI #MIvsRCB pic.twitter.com/7axXIZ7AAO
">#BCCIpolitics
— ---- (@panchamrata) October 29, 2020
Captain of National team. Sledging youngsters that too uncapped player.
Got what he deserved... #ViratKohli #IPL2020 #MI #MIvsRCB pic.twitter.com/7axXIZ7AAO#BCCIpolitics
— ---- (@panchamrata) October 29, 2020
Captain of National team. Sledging youngsters that too uncapped player.
Got what he deserved... #ViratKohli #IPL2020 #MI #MIvsRCB pic.twitter.com/7axXIZ7AAO
ಆದರೆ, ಈ ವಿಡಿಯೋ ಹಾಗೂ ಫೋಟೋಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ವಿರಾಟ್ ಕೊಹ್ಲಿ ಯಾದವ್ ಅವರನ್ನು ಸ್ಲೆಡ್ಜಿಂಗ್ ಮಾಡಲು ಪ್ರಯತ್ನಿಸಿದ್ರಾ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಒಟ್ಟಾರೆ, ಈ ಕ್ಷಣವನ್ನು ಪಂದ್ಯದ ಅತ್ಯುತ್ತಮ ಕ್ಷಣ ಎಂದು ಹಲವಾರಿ ಅಭಿಮಾನಿಗಳು ಕೊಹ್ಲಿ ಕಾಲೆಳೆಯುತ್ತಿದ್ದಾರೆ. ಜೊತೆಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ನೋವಿನಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಯಾದವ್ ಪರ ಕೆಲವರು ಟ್ವೀಟ್ ಮಾಡುತ್ತಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ದೇವದತ್ ಪಡಿಕ್ಕಲ್ ಸಿಡಿಸಿದ 74 ರನ್ಗಳ ನೆರವಿನಿಂದ 164 ರನ್ಗಳಿಸಿತ್ತು. ಈ ಮೊತ್ತವನ್ನು ಮುಂಬೈ 19.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತ್ತು.