ETV Bharat / sports

ಪಂತ್​ ಆತ್ಮ ವಿಶ್ವಾಸದಿಂದ ಆಡಿದ ದಿನ, ತುಂಬಾ ಅಪಾಯಕಾರಿ : ಯುವ ವಿಕೆಟ್​ ಕೀಪರ್​ ಬೆನ್ನಿಗೆ ನಿಂತ ಸ್ಟಾರ್​ ವೇಗಿ

author img

By

Published : Apr 16, 2020, 2:50 PM IST

ಶಮಿ ಪಂತ್​ ಜೊತೆಗೆ ಕನ್ನಡಿಗ ಕೆಎಲ್​ ರಾಹುಲ್​ ಬಗ್ಗೆಯೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆತ ಅತ್ಯುತ್ತಮ ಫಾರ್ಮ್​ನಲ್ಲಿರುವ ಬ್ಯಾಟ್ಸ್​ಮನ್​. ಪ್ರತಿಯೊಂದು ಕ್ರಮಾಂಕದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಠಾಣ್​ ರಾಹುಲ್​ ಅವರ ಫಾರ್ಮ್​ ' ನಂಬಲಸಾಧ್ಯ' ಎಂದು ಹೇಳಿದ್ದಾರೆ.

ರಿಷಭ್ ಪಂತ್​
ರಿಷಭ್ ಪಂತ್​

ಮುಂಬೈ: ಯುವ ವಿಕೆಟ್​ ಕೀಪರ್​ ರಿಷಭ್ ಪಂತ್​ ಅತ್ಯುತ್ತಮ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಆಗಿದ್ದಾರೆ. ಆದರೆ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಕಾಡುತ್ತಿದೆ ಎಂದು ಇರ್ಫಾನ್ ಪಠಾಣ್​ ಜೊತೆ ನಡೆಸಿದ ಇನ್​​ಸ್ಟಾಗ್ರಾಂ​ ಲೈವ್​ನಲ್ಲಿ ತಿಳಿಸಿದ್ದಾರೆ,

" ರಿಷಭ್​ ಪಂತ್ ಒಬ್ಬ ಅದ್ಭುತ ಪ್ರತಿಭೆ, ಆತನ ನನ್ನ ಸ್ನೇಹಿತ ಎಂದು ನಾನು ಈ ಮಾತನ್ನು ಹೇಳುತ್ತಿಲ್ಲ. ಇದು ಕೇವಲ ಆತ್ಮವಿಶ್ವಾಸದ ವಿಷಯವಾಗಿದೆ. ಯಾವತ್ತು ಅವರು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಾರೋ ಅಂದು ಅವರು ತುಂಬಾ ಅಪಾಯಕಾರಿ ಆಟಗಾರನಾಗಲಿದ್ದಾರೆ" ಎಂದು ಶಮಿ ಲೈವ್​ ವೇಳೆ ತಿಳಿಸಿದ್ದಾರೆ.

Mohammed Shami praises Rishabh Pant,
ಮೊಹಮ್ಮದ್​ ಶಮಿ

ಅವರು ಈಗಾಗಲೆ ಸಾಕಷ್ಟು ರನ್​ಗಳಿಸಿದ್ದಾರೆ. ಅವರ ಪ್ರಸ್ತುತ ಫಾರ್ಮ್​ ವೃತ್ತಿ ಜೀವನದಲ್ಲೇ ಶ್ರೇಷ್ಠವಾದದ್ದಾಗಿದೆ, ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದರೂ ಉತ್ತಮವಾಗಿ ಆಡುತ್ತಿದ್ದಾರೆ. ಅವರ ವೃತ್ತಿ ಜೀವನ ಹಿಗೇ ಮುಂದುವರಿಯಲಿ ಎಂದು ಭಾವಿಸುತ್ತೇನೆ ಎಂದು ಶಮಿ ಹೇಳಿದ್ದಾರೆ.

ಇದೇ ವೇಳೆ, ಹಾರ್ದಿಕ್​ ಪಾಂಡ್ಯರನ್ನು ಅತ್ಯುತ್ತಮ ಆಲ್​ರೌಂಡರ್​ ಎಂದಿರುವ ಶಮಿ, ಯಾರಾದರೂ ಆಲ್​ರೌಂಡರ್​ ಆಗಬೇಕೆಂದರೆ ಹಾರ್ದಿಕ್​ರಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ನಿಮಗಿಷ್ಟವಾದ ಕ್ರಿಕೆಟ್ ವಿಭಾಗ ಯಾವುದು ಎಂದು ಪಠಾಣ್​ ಕೇಳಿದ್ದಕ್ಕೆ ಉತ್ತರಿಸಿರುವ ಶಮಿ ಮನರಂಜನೆಗಾದರೆ ಟಿ-20 ಕ್ರಿಕೆಟ್​, ನನಗಿಷ್ಟವಾದ ವಿಭಾಗವೆಂದರೆ ಟೆಸ್ಟ್​ ಕ್ರಿಕೆಟ್​ ಎಂದಿದ್ದಾರೆ.

ವಿಶ್ವಕಪ್​ನಲ್ಲಿ ಕೊನೆಯ ಓವರ್​ನಲ್ಲಿ ಅಫ್ಘಾನಿಸ್ತಾನಕ್ಕೆ 16 ರನ್​ಗಳ ಅಗತ್ಯವಿತ್ತು. ಈ ವೇಳೆ ಶಮಿ ಬೌಲಿಂಗ್​ ಮಾಡಿ ಕೇವಲ 4 ರನ್ ನೀಡಿ ಹ್ಯಾಟ್ರಿಕ್​ ವಿಕೆಟ್​ ಪಡೆದು ಭಾರತಕ್ಕೆ 11 ರನ್​ಗಳ ರೋಚಕ ಗೆಲುವು ತಂದುಕೊಟ್ಟಿದ್ದರು.

ನಾನು ಕೇವಲ 3 ಸ್ಟಂಪ್​ಗಳನ್ನು ಮಾತ್ರ ಗಮನಿಸುತ್ತಿದ್ದೆ. ಅಲ್ಲದೆ 140ರ ವೇಗದಲ್ಲಿ ಬೌಲಿಂಗ್​ ಮಾಡಲು ನಿರ್ಧರಿಸಿದ್ದೆ, ಮೊದಲ ಎರಡು ವಿಕೆಟ್​ ಪಡೆದ ಮೇಲೆ ಮೂರನೇ ವಿಕೆಟ್​ಗೂ ಯಾರ್ಕರ್​ ಪ್ರಯೋಗಿಸುವ ಆಲೋಚನೆಯಲ್ಲಿದ್ದ ನನಗೆ ಧೋನಿ ಬಾಯ್​ ಕೂಡ ಅದೇ ಸಲಹೆ ನೀಡಿದರು. ಇದರಿಂದ ನಾನು ಹ್ಯಾಟ್ರಿಕ್​ ವಿಕೆಟ್​ ಪಡೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.