ಅಬುಧಾಬಿ: ಆರ್ಸಿಬಿ ತಂಡದ ವೇಗಿ ಮೊಹಮ್ಮದ್ ಸಿರಾಜ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎರಡು ಓವರ್ಗಳನ್ನು ಮೇಡನ್ ಮಾಡುವ ದಾಖಲೆ ಬರೆದಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕೆಕೆಆರ್ ತಂಡಕ್ಕೆ ಮೊಹಮ್ಮದ್ ಸಿರಾಜ್ ಮರ್ಮಾಘಾತ ನೀಡಿದ್ದಾರೆ. 2ನೇ ಓವರ್ನಲ್ಲಿ ಬೌಲಿಂಗ್ ಬಂದ ಸಿರಾಜ್ ರಾಹುಲ್ ತ್ರಿಪಾಠಿ ಹಾಗೂ ನಿತೀಶ್ ರಾಣಾ ಅವರನ್ನು ಔಟ್ ಮಾಡುವ ಮೂಲಕ ಮೇಡನ್ ಪಡೆದರು. ನಂತರ 4ನೇ ಓವರ್ನಲ್ಲಿ ಶುಬ್ಮನ್ ಗಿಲ್ ವಿಕೆಟ್ ಪಡೆಯುವ ಮೂಲಕ ಆ ಓವರ್ ಕೂಡ ಮೇಡನ್ ಸಾಧಿಸಿದರು. ಈ ಮೂಲಕ ಐಪಿಎಲ್ನಲ್ಲಿ ಒಂದೇ ಪಂದ್ಯದಲ್ಲಿ 2 ಮೇಡನ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
-
Take a bow, Mohammed Siraj!
— Royal Challengers Bangalore (@RCBTweets) October 21, 2020 " class="align-text-top noRightClick twitterSection" data="
2️⃣ Maiden Wickets!
You've just made history!🔥🔥
One of the best ever spells in Dream11 IPL history!#PlayBold #IPL2020 #WeAreChallengers #Dream11IPL #KKRvRCB
">Take a bow, Mohammed Siraj!
— Royal Challengers Bangalore (@RCBTweets) October 21, 2020
2️⃣ Maiden Wickets!
You've just made history!🔥🔥
One of the best ever spells in Dream11 IPL history!#PlayBold #IPL2020 #WeAreChallengers #Dream11IPL #KKRvRCBTake a bow, Mohammed Siraj!
— Royal Challengers Bangalore (@RCBTweets) October 21, 2020
2️⃣ Maiden Wickets!
You've just made history!🔥🔥
One of the best ever spells in Dream11 IPL history!#PlayBold #IPL2020 #WeAreChallengers #Dream11IPL #KKRvRCB
ಟಿ20 ಕ್ರಿಕೆಟ್ನಲ್ಲಿ ಒಂದೇ ಪಂದ್ಯದಲ್ಲಿ 2 ಮೇಡನ್ ಮಾಡಿರುವ 5ನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು. ಈವರೆಗೂ ಮೊದಲು ಪಂಜಾಬ್ ಪರ ಮನ್ಪ್ರೀತ್ ಗೋನಿ 2012ರಲ್ಲಿ, ಸುಯ್ ನಾರ್ಥನ್ ತಂಡದ ಒಪರ ಸಮೀವುಲ್ಲಾ ಖಾನ್ 2013ರಲ್ಲಿ, ಡಿ ಸಿಲ್ವಾ ಕುಮಾರ್ ಆಂಧ್ರಪ್ರದೇಶದ ಪರ 2014ರಲ್ಲಿ, ಕ್ರಿಸ್ ಮೋರಿಸ್ ಲಯನ್ಸ್ ಪರ 2014ರಲ್ಲಿ, ಮೊಹಮ್ಮದ್ ಇರ್ಫಾನ್ ಬಾರ್ಬಡೋಸ್ ಪರ 2018ರಲ್ಲಿ ಈ ಸಾಧನೆ ಮಾಡಿದ್ದಾರೆ.