ETV Bharat / sports

2019ರಲ್ಲಿ ಗರಿಷ್ಠ ವಿಕೆಟ್.. ODIನಲ್ಲಿ ಮೊಹಮ್ಮದ್‌ ಶಮಿ, ಟೆಸ್ಟ್​ ಕ್ರಿಕೆಟ್​ನಲ್ಲಿ ಪ್ಯಾಟ್​ ಕಮ್ಮಿನ್ಸ್‌ ಟಾಪರ್ಸ್​.. - ರೋಹಿತ್​ ಶರ್ಮಾರ 5 ಶತಕಗಳು

2019ರಲ್ಲಿ ಮೊಹಮ್ಮದ್​ ಶಮಿ ಹಾಗೂ ಪ್ಯಾಟ್​ ಕಮ್ಮಿನ್ಸ್​ ಕ್ರಮವಾಗಿ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್ಸ್​ ಎನಿಸಿಕೊಂಡಿದ್ದಾರೆ.

Mohammad Shami Pat Cummins
Mohammad Shami Pat Cummins
author img

By

Published : Dec 29, 2019, 6:47 PM IST

ಮುಂಬೈ: 2019ರಲ್ಲಿ ಭಾರತ ತಂಡದ ವೇಗದ ಬೌಲರ್​ ಮೊಹಮ್ಮದ್​ ಶಮಿ ಹಾಗೂ ಆಸ್ಟ್ರೇಲಿಯಾದ ವೇಗಿ ಪ್ಯಾಟ್​ ಕಮ್ಮಿನ್ಸ್​ ಕ್ರಮವಾಗಿ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಪಡೆದಿದ್ದ ಮೊಹಮ್ಮದ್​ ಶಮಿ 2019ರಲ್ಲಿ ಭಾರತದ ಪರ 21 ಪಂದ್ಯಗಳಾಡಿದ್ದು, 42 ವಿಕೆಟ್ ಪಡೆಯುವ ಮೂಲಕ ಈ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ನ ಟ್ರೆಂಟ್​ ಬೌಲ್ಟ್​ ಇದ್ದು, ಅವರು 20 ಪಂದ್ಯಗಳಿಂದ 38 ವಿಕೆಟ್​​ ಪಡೆದಿದ್ದಾರೆ. 3ನೇ ಸ್ಥಾನದಲ್ಲಿ ಲೂಕಿ ಫರ್ಗ್ಯುಸನ್​(35), 4ನೇ ಸ್ಥಾನದಲ್ಲಿ ಬಾಂಗ್ಲಾದೇಶದ ಮುಸ್ತಫೀಜುರ್​ ರಹಮಾನ್​(34) 5ನೇ ಸ್ಥಾನದಲ್ಲಿ ಭುವನೇಶ್ವರ್​ ಕುಮಾರ್​(33) ವಿಕೆಟ್​ ಪಡೆದಿದ್ದಾರೆ.

ಐಪಿಎಲ್​ ಬರೋಬ್ಬರಿ 15.5 ಕೋಟಿ ಪಡೆದಿರರುವ ಆಸ್ಟ್ರೇಲಿಯಾದ ಪ್ಯಾಟ್​ ಕಮ್ಮಿನ್ಸ್​ 12 ಪಂದ್ಯಗಳಿಂದ 59 ವಿಕೆಟ್​ ಪಡೆಯುವ ಮೂಲಕ 2019ರಲ್ಲಿ ಅತಿ ಹೆಚ್ಚು ​ಟೆಸ್ಟ್​ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಇಂಗ್ಲೆಂಡ್​ನ ಸ್ಟುವರ್ಟ್​ ಬ್ರಾಡ್​(43), ತೃತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಿಚೆಲ್​ ಸ್ಟಾರ್ಕ್​(42), 4ನೇ ಸ್ಥಾನದಲ್ಲಿ ಕಿವೀಸ್​ನ ನೈಲ್​ ವ್ಯಾಗ್ನರ್(42) 5ನೇ ಸ್ಥಾನದಲ್ಲಿ ನಥನ್​ ಲಿಯಾನ್​(41) ಇದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ನೇಪಾಳದ ಕೆಸಿ ಕರಣ್,ಸಂದೀಪ್​ ಲೆಮಿಚ್ಛಾನೆ ಹಾಗೂ ನೆದರ್ಲೆಂಡ್​ನ ಗ್ಲೋವರ್ ಬಿ ಡಿ 28 ವಿಕೆಟ್​ ಪಡೆದು ಅಗ್ರಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಐರ್ಲೆಂಡ್​ನ ಮಾರ್ಕ್​ ಅದಿರ್​(27), 3ನೇ ಸ್ಥಾನದಲ್ಲಿ ನೆದರ್ಲೆಂಡ್​ನ ವಾನ್​ ಮೀಕರೆನ್​(27) ಇದ್ದಾರೆ.

ಭಾರತದ ಪರ ಟೆಸ್ಟ್​ ಕ್ರಿಕೆಟ್​ನಲ್ಲೂ ಮೊಹಮ್ಮದ್​ ಶಮಿ 33 ವಿಕೆಟ್​ ಪಡೆದು ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.