ETV Bharat / sports

ಲಕ್ಷ ಲಕ್ಷ ಸಂಪಾದಿಸುತ್ತಿದ್ದ ಈ ಕ್ರಿಕೆಟಿಗ: ಜೀವನದ ಬಂಡಿ ಸಾಗಿಸಲು ಈಗ ಡ್ರೈವರ್ ಆದ! - ಪಿಸಿಬಿ ವಿರುದ್ಧ ಹಫೀಜ್​ ಅಸಮಧಾನ

ಪಾಕಿಸ್ತಾನ ಪ್ರಥಮ ದರ್ಜೆ ಕ್ರಿಕೆಟಿಗನೋರ್ವ ಜೀವನ ನಿರ್ವಹಣೆಗಾಗಿ ಚಾಲಕನಾಗಿ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್​ ಆಗುತ್ತಿದೆ. ಈ ವಿಡಿಯೋಗೆ ಪಾಕ್​ನ ಹಿರಿಯ ಆಟಗಾರ ಮೊಹಮ್ಮದ್​ ಹಫೀಜ್​ ಪ್ರತಿಕ್ರಿಯಿಸಿದ್ದು, ಪಿಸಿಬಿ ವಿರುದ್ಧ ಕಿಡಿಕಾರಿದ್ದಾರೆ.

cricketer
author img

By

Published : Oct 15, 2019, 5:19 PM IST

ಲಾಹೋರ್​: ಪಾಕಿಸ್ತಾನ ಪರ ದೇಶಿ ಕ್ರಿಕೆಟ್​ ಆಡುತ್ತಿದ್ದ ಕ್ರಿಕೆಟಿಗನೋರ್ವ ಜೀವನೋಪಾಯಕ್ಕಾಗಿ ಪಿಕ್​ಅಪ್​ ವ್ಯಾನ್​ ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಫಜಲ್ ಸುಭಾನ್ ಎಂಬ ಪ್ರತಿಭಾನ್ವಿತ ಕ್ರಿಕೆಟಿಗ ಜೀವನ ನಿರ್ವಹಣೆಗಾಗಿ ಬಾಡಿಗೆ ವ್ಯಾನ್ ಓಡಿಸುತ್ತಿದ್ದಾರೆ. ಇವರು ಪಾಕಿಸ್ತಾನ ದೇಶಿ ಕ್ರಿಕೆಟ್​ ಆಟಗಾರನಾಗಿದ್ದು, 40 ಪ್ರಥಮ ದರ್ಜೆ ಮತ್ತು 29 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. ಅಂಡರ್​ 19 ತಂಡದಲ್ಲೂ ಆಡಿರುವುದಾಗಿ ಪತ್ರಕರ್ತರೊಬ್ಬರು ನಡೆಸಿದ ಸಂದರ್ಶನದಲ್ಲಿ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ.

31 ವರ್ಷದ ಫಜಲ್ ತನ್ನ ಪ್ರಸ್ತುತ ಸ್ಥಿತಿಗತಿ ಕುರಿತು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಕ್ರಿಕೆಟ್​ ಆಡುತ್ತಿದ್ದಾಗ ಲಕ್ಷಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದೆ. ಆದರೆ ಈಗ ತಿಂಗಳಿಗೆ 30 ರಿಂದ 35 ಸಾವಿರಾರು ರೂಪಾಯಿ ಸಂಪಾದಿಸುವುದು ಕಷ್ಟವಾಗಿದೆ. ವಾಹನ ಓಡಿಸುವುದರಿಂದ ಬರುವ ಹಣದಲ್ಲೇ ಜೀವನದ ಬಂಡಿ ಸಾಗಿಸಬೇಕು. ಅದು ಕೆಲವು ಸೀಸನ್​ಗಳಲ್ಲಿ ಬಾಡಿಗೆ ಸಿಗುತ್ತದೆ, ಒಮ್ಮೊಮ್ಮೆ 10 ದಿನಗಳವರೆಗೂ ಬಾಡಿಗೆ ಸಿಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

  • SAD STORY OF 🇵🇰 🏏

    Fazal Subhan was the player of HBL, he has played U19 & A side cricket for Pakistan, he was contender of Pak Test team,
    After closing of Departmental cricket he is driving drive
    “BHARE KE SUZUKI”

    His salary was 1 lac & now earning is less then 40k
    😭 😭 😭 pic.twitter.com/nq22vPY55v

    — Shoaib Jatt (@Shoaib_Jatt) October 11, 2019 " class="align-text-top noRightClick twitterSection" data=" ">

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಾಕಿಸ್ತಾನ ಕ್ರಿಕೆಟ್​ ಮಂಡಳಿಯನ್ನು ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಹಿರಿಯ ಕ್ರಿಕೆಟಿಗ ಮೊಹಮ್ಮದ್​ ಹಫೀಜ್​ ಕೂಡ ಪ್ರತಿಕ್ರಿಯಿಸಿದ್ದು, ಹೊಸ ನಿಯಮದ ಪ್ರಕಾರ, ಕೇವಲ 200 ಕ್ರಿಕೆಟಿಗರು ಮಾತ್ರ ಮಂಡಳಿಯ ಸೌಲಭ್ಯಗಳನ್ನ ಅನುಭವಿಸಲಿದ್ದಾರೆ. ಈ ನಿಯಮದಿಂದ ಸಾವಿರಾರು ಕ್ರಿಕೆಟಿಗರು, ಕೋಚ್​ಗಳು ಮತ್ತು ಮ್ಯಾನೇಜ್​ಮೆಂಟ್ ಸಿಬ್ಬಂದಿ ಬೀದಿ ಪಾಲಾಗಿದ್ದಾರೆ. ಈ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳಲಿದ್ದಾರೆ ಅನ್ನೋದು ಗೊತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುಭಾನ್​ 40 ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 2301 ರನ್​ ಗಳಿಸಿದ್ದಾರೆ. 29 ಲಿಸ್ಟ್​ ಎ ಪಂದ್ಯಗಳಿಂದ 659 ರನ್ ದಾಖಲಿಸಿದ್ದಾರೆ.

  • So sad Really , Like him & Many others r suffering, New system wil look after 200 players but 1000s of crickters & management staff r Unemployed bcos of this new model , I dont know who wil take the responsibility of this unemployment of cricket fraternity, 🤲🏼 for all the victims https://t.co/SaQfAKVFU2

    — Mohammad Hafeez (@MHafeez22) October 12, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.