ಮುಂಬೈ: ತಮ್ಮ ಮೇಲೆ ದಾಖಲಾಗಿರುವ ವಂಚನೆ ಪ್ರಕರಣವನ್ನು ಅಲ್ಲಗೆಳೆದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಸುಳ್ಳು ಆರೋಪ ಮಾಡಿ ಎಫ್ಐಆರ್ ದಾಖಲಿಸುವವರ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈನ ಟ್ರಾವೆಲ್ಸ್ ಏಜೆನ್ಸಿಗೆ 20 ಲಕ್ಷ ಹಣ ವಂಚನೆ ಮಾಡಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಮೂವರ ವಿರುದ್ಧ ವಿರುದ್ಧ ಔರಂಗಬಾದ್ನಲ್ಲಿ ಬುಧವಾರ ಎಫ್ಐಆರ್ ದಾಖಲಾಗಿತ್ತು. ಅಲ್ಲದೇ ವಂಚನೆ ಮಾಡಿದ ಹಣವನ್ನ ಹಿಂತಿರುಗಿಸುವಂತೆ ಆರೋಪಿಗಳಿಗೆ ಹೇಳಿದ್ದರು. ಒಂದು ವೇಳೆ ಹಣ ಹಿಂದಿರುಗಿಸದಿದ್ದಲ್ಲಿ ಮೂವರನ್ನು ಬಂಧಿಸಲಾಗುವುದು ಎಂದು ವಾರ್ನಿಂಗ್ ಕೊಟ್ಟಿದ್ದರು.
-
I strongly rubbish the false FIR filed against me in Aurangabad. I’m consulting my legal team, and would be taking actions as necessary pic.twitter.com/6XrembCP7T
— Mohammed Azharuddin (@azharflicks) January 22, 2020 " class="align-text-top noRightClick twitterSection" data="
">I strongly rubbish the false FIR filed against me in Aurangabad. I’m consulting my legal team, and would be taking actions as necessary pic.twitter.com/6XrembCP7T
— Mohammed Azharuddin (@azharflicks) January 22, 2020I strongly rubbish the false FIR filed against me in Aurangabad. I’m consulting my legal team, and would be taking actions as necessary pic.twitter.com/6XrembCP7T
— Mohammed Azharuddin (@azharflicks) January 22, 2020
ಪ್ರಕರಣದ ಹಿನ್ನಲೆ: ಮಹಾರಾಷ್ಟ್ರದ ಔರಂಗಬಾದ್ನಲ್ಲಿರುವ ದಾನೀಶ್ ಟೂರ್ಸ್ ಅಂಡ್ ಟ್ರಾವಲ್ಸ್ ಏಜೆನ್ಸಿಯಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ಅಜರುದ್ದೀನ್ ಅವರ ಆಪ್ತ ಸಹಾಯಕ ಮುಜೀಬ್ ಖಾನ್ 20 .96 ಲಕ್ಷ ರೂಗಳ ಹಲವು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ಗಳನ್ನು ಬುಕ್ ಮಾಡಿದ್ದರು. ಹಣ ಆನ್ ಲೈನ್ನ ಮೂಲಕ ನೀಡುತ್ತೇನೆ ಎಂದಿದ್ದರು. ಆದರೆ ಹಣ ನೀಡಿಲ್ಲ. ಮುಜೀಬ್ 10.6 ಲಕ್ಷ ಹಣವನ್ನು ವರ್ಗಾಯಿಸಿದ್ದೇನೆ ಎಂದು ಇಮೇಲ್ ಕಳುಹಿಸಿದ್ದಾರೆ. ಆದರೆ ಆ ಹಣವೂ ತಮಗೆ ಸಿಕ್ಕಿಲ್ಲ ಎಂದು ಏಜೆನ್ಸಿಯ ಮಾಲೀಕ ಮೊಹಮ್ಮದ್ ಶಹಾಬ್ ದೂರಿನಲ್ಲಿ ತಿಳಿಸಿದ್ದರು.