ಮ್ಯಾಂಚೆಸ್ಟರ್: ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತದ ಗೆಲುವಿನ ನಾಗಾಲೋಟ ಮುಂದುವರೆದಿದೆ. ನಿನ್ನೆಯ ಪಂದ್ಯದಲ್ಲೂ ಸಾಂಪ್ರದಾಯಿಕ ಎದುರಾಳಿ ಎದುರು ಕೊಹ್ಲಿ ಪಡೆ 89 ರನ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ.
ಇದೇ ವಿಷಯವನ್ನಿಟ್ಟುಕೊಂಡು ಪಾಕ್ ತಂಡದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಸಹ ಆಟಗಾರರ ಮೇಲೆ ಕೆಂಡಕಾರಿದ್ದಾರೆ. ತಾವು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ, ಇತರ ಬೌಲರ್ಗಳು ಹೇಳಿಕೊಳ್ಳುವಂತಹ ಬೌಲಿಂಗ್ ಮಾಡಿಲ್ಲ. ನಮ್ಮ ಸೋಲಿಗೆ ಇದೇ ಕಾರಣವಾಗಿದ್ದು, ಈ ಸೋಲಿನ ಜವಾಬ್ದಾರಿ ನಾನು ಹೊರುವುದಿಲ್ಲ ಎಂದು ಹೇಳಿದ್ದಾರೆ.
ಆರಂಭದಲ್ಲಿ ಆರು ಓವರ್ ಎಸೆದ ಅಮೀರ್ ಕೇವಲ 18ರನ್ ಮಾತ್ರ ನೀಡಿದ್ದರು. ಆದರೆ, ಇವರಿಗೆ ಸಾಥ್ ನೀಡದ ಇತರ ಬೌಲರ್ ಹೆಚ್ಚಿನ ರೀತಿಯಲ್ಲಿ ರನ್ ಬಿಟ್ಟುಕೊಟ್ಟರು. ಹೀಗಾಗಿ ತಂಡ 300ಗಡಿ ದಾಟುವಂತಾಯಿತು. ಇದೇ ವಿಷಯವನ್ನಿಟ್ಟುಕೊಂಡು ತಂಡ ಸೋಲು ಕಾಣುತ್ತಿದ್ದಂತೆ ಮೈದಾನದಲ್ಲಿ ಆಕ್ರೋಶಗೊಂಡು, ಡ್ರೆಸ್ಸಿಂಗ್ ರೂಂ ಕಡೆ ಹೆಜ್ಜೆ ಹಾಕಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಮಿಂಚಿದ್ದ ಅಮೀರ್ ಕೇವಲ 30ರನ್ ನೀಡಿ 5ವಿಕೆಟ್ ಪಡೆದುಕೊಂಡಿದ್ದರು. ನಿನ್ನೆಯ ಪಂದ್ಯದಲ್ಲೂ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯರಂತಹ ಪ್ರಮುಖರ ವಿಕೆಟ್ ಪಡೆದುಕೊಂಡು ಸಖತ್ ಪ್ರದರ್ಶನ ನೀಡಿದ್ದರು. ಆದರೂ ಉಳಿದ ಆಟಗಾರರ ನೀರಸ ಪ್ರದರ್ಶನದಿಂದ ಪಂದ್ಯದಲ್ಲಿ ತಂಡ ಸೋಲು ಕಂಡಿತ್ತು. ಹೀಗಾಗಿ ತಾವು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರೂ ಸಹ ಆಟಗಾರರು ತಮಗೆ ಸಾಥ್ ನೀಡುತ್ತಿಲ್ಲ ಎಂಬುದು ಮೊಹಮ್ಮದ್ ಅಮೀರ್ ಅವರ ಅಸಮಾಧಾನವಾಗಿದೆ.