ETV Bharat / sports

ಸರ್ಫರಾಜ್​ರನ್ನು ಕೆಳಗಿಳಿಸಿ ಈ ಇಬ್ಬರನ್ನು ಪಾಕ್​ ತಂಡದ ನಾಯಕರನ್ನಾಗಿ ನೇಮಿಸಲು ಕೋಚ್ ಶಿಫಾರಸು! - ಸರ್ಫರಾಜ್​ ನಾಯಕತ್ವದಿಂದ ಕೆಳಗಿಳಿಸಲು ಮಿಕಿ ಆರ್ಥರ್​ ಸೂಚನೆ

ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್​ ತಲುಪಲೂ ಕೂಡ ವಿಫಲವಾದ ಬೆನ್ನಲ್ಲೇ ಸ್ವತಃ ಪಾಕಿಸ್ತಾನದ ಮುಖ್ಯ ಕೋಚ್​ ಮಿಕಿ ಆರ್ಥರ್​ ಸರ್ಫರಾಜ್​ರನ್ನು ನಾಯಕತ್ವದಿಂದ ಕೆಳಗಿಳಿಸುವಂತೆ ಪಿಸಿಬಿ ಮುಂದೆ ಆಗ್ರಹ ಪಡಿಸಿದ್ದಾರೆ.

sarfaraz ahmed
author img

By

Published : Aug 5, 2019, 6:50 PM IST

ಲಾಹೋರ್‌ : ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್​ ತಲುಪಲೂ ಕೂಡ ವಿಫಲವಾದ ಬೆನ್ನಲ್ಲೇ ಸ್ವತಃ ಪಾಕಿಸ್ತಾನದ ಮುಖ್ಯ ಕೋಚ್​ ಮಿಕಿ ಆರ್ಥರ್​ ಸರ್ಫರಾಜ್​ರನ್ನು ನಾಯಕತ್ವದಿಂದ ಕೆಳಗಿಳಿಸುವಂತೆ ಪಿಸಿಬಿ ಮುಂದೆ ಆಗ್ರಹ ಪಡಿಸಿದ್ದಾರೆಂದು ತಿಳಿದುಬಂದಿದೆ.

ಸರ್ಫರಾಜ್​ ಖಾನ್​ ಭಾರತದೆದುರಿನ ಪಂದ್ಯದಲ್ಲಿ ಟಾಸ್​ ಗೆದ್ದರೆ ಬ್ಯಾಟಿಂಗ್​ ನಡೆಸುವಂತೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮೊದಲೇ ತಿಳಿಸಿದ್ದರೂ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದ್ದರು. ಇದರ ಪರಿಣಾಮ ಭಾರತದೆದುರು ಪಾಕ್ 89 ರನ್​ಗಳಿಂದ ಹೀನಾಯ ಸೋಲುಕಂಡಿತ್ತು. ನಂತರ ಕೆಲವು ನಿರ್ಧಾರಗಳಿಂದ ಪಾಕಿಸ್ತಾನ ತಂಡದ ಹಿನ್ನಡೆಗೆ ಸರ್ಫರಾಜ್​ ಕಾರಣರಾಗಿದ್ದರು. ಅಲ್ಲದೆ ಪಂದ್ಯದ ನಡುವೆ ನಿರಾಶೆಯಿಂದ ಕೂಡಿರುತ್ತಿದ್ದು ಅವರ ನಾಯಕತ್ವದ ಮೇಲೆ ಪರಿಣಾಮ ಬೀರಿದೆ.

pak captainship
ಪಾಕ್‌ ಕ್ರಿಕೆಟ್‌ ಕೋಚ್‌ ಮಿಕಿ ಆರ್ಥರ್..​

ಇದರ ಮಧ್ಯೆ ಪಾಕ್​ ಮಾಜಿ ಬೌಲರ್​ ಅಖ್ತರ್​ ಕೂಡ ಸರ್ಫರಾಜ್​ ಫಿಟ್​ನೆಸ್​ ಕುರಿತು ಕಿಡಿ ಕಾರಿದ್ದರು. ಆತನಿಗೆ ಹೊಟ್ಟೆ ಬಂದಿದೆ, ನಾಯಕತ್ವ ಜವಾಬ್ದಾರಿಗೆ ಅಸಮರ್ಥ, ಬುದ್ದಿಹೀನ ನಾಯಕ ಎಂದು ಕಿಡಿಕಾರಿದ್ದರು. ಇದರ ಜೊತೆಗೆ ಸರ್ಫರಾಜ್​ನನ್ನು ನಾಯಕತ್ವದಿಂದ ಕೆಳಗಿಳಿಸಿ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಹ್ಯಾರಿಸ್‌ ಸೊಹೇಲ್​ರನ್ನು, ಟೆಸ್ಟ್​ ತಂಡಕ್ಕೆ ಬಾಬರ್​ ಅಜಂರನ್ನು ನಾಯಕನಾಗಿ ನೇಮಿಸುವಂತೆ ತಿಳಿಸಿದ್ದರು.

pak captainship
ಬಾಬರ್​ ಅಜಂರಿಗೆ ಟೆಸ್ಟ್​ ನಾಯಕತ್ವ ನೀಡಲು ಶಿಫಾರಸು..
ಇದೀಗ ಕೋಚ್​ ಮಿಕಿ ಆರ್ಥರ್​ ಕೂಡ ಅಖ್ತರ್​ ಮಾತಿನಂತೆ ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ್ದು, ಅಗಸ್ಟ್‌ 2ರಂದು ನಡೆದಿದ್ದ ವಿಶ್ವಕಪ್‌ ಟೂರ್ನಿಯ ಪ್ರದರ್ಶನ ಪರಾಮರ್ಶಿಸುವ ಸಭೆಯಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೆ ಸ್ಪಿನ್ನರ್‌ ಶದಾಬ್‌ ಖಾನ್‌ರನ್ನು ಹಾಗೂ ಟೆಸ್ಟ್‌ ತಂಡದ ನಾಯಕನಾಗಿ ಬಾಬರ್‌ ಆಜಂರನ್ನು ನೇಮಕ ಮಾಡುವಂತೆ ಶಿಫಾರಸು ಮಾಡಿದ್ದಾರೆಂದು ಪಾಕ್​ ಮಾಧ್ಯಮಗಳು ವರದಿ ಮಾಡಿವೆ.
pak captainship
ಏಕದಿನ ತಂಡ ನಾಯಕತ್ವಕ್ಕೆ ಶದಾಬ್​ ಖಾನ್​ ಹೆಸರು ಶಿಫಾರಸು..

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.