ETV Bharat / sports

ವರಸೆ ಬದಲಿಸಿದ ವಾನ್: ​ಪಿಚ್​ ಬದಲು ಇಂಗ್ಲಿಷ್​ ಬ್ಯಾಟ್ಸ್​ಮನ್​ಗಳ ವಿರುದ್ಧ ಟೀಕೆ - ನರೇಂದ್ರ ಮೋದಿ ಕ್ರೀಡಾಂಗಣ

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್​ ಆಟಗಾರರು ಆರಂಭದಿಂದಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಬೆನ್​ ಸ್ಟೋಕ್ಸ್​ ಮತ್ತು ಲಾರೆನ್ಸ್​ ಹೊರತುಪಡಿಸಿದರೆ ಉಳಿದ ಬ್ಯಾಟ್ಸ್​ಮನ್​ಗಳು ಫ್ಲ್ಯಾಟ್​ ಟ್ರ್ಯಾಕ್​ನಲ್ಲೂ ವೈಫಲ್ಯ ಅನುಭವಿಸಿರುವುದಕ್ಕೆ ವಾನ್ ಕಿಡಿ ಕಾರಿದ್ದಾರೆ.

ಭಾರತ - ಇಂಗ್ಲೆಂಡ್ ಟೆಸ್ಟ್​
ಮೈಕಲ್ ವಾನ್​
author img

By

Published : Mar 4, 2021, 8:06 PM IST

ಅಹ್ಮದಾಬಾದ್​: ಕಳೆದ ಕೆಲವು ದಿನಗಳಿಂದ ಭಾರತೀಯ ಪಿಚ್​ಗಳ ಬಗ್ಗೆ ಟೀಕೆ ಮಾಡುತ್ತಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್​, ಇದೀಗ ಮೊದಲ ಬಾರಿಗೆ ಪಿಚ್​ ಬದಲು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

  • England’s batting so far worse than any of the last few Tests ... This Pitch is a perfect surface to get a big first innings score ... No spin ... Ball coming onto the Bat ... Very poor Batting so far ... #INDvENG

    — Michael Vaughan (@MichaelVaughan) March 4, 2021 " class="align-text-top noRightClick twitterSection" data=" ">

"ಕಳೆದ ಕೆಲವು ಟೆಸ್ಟ್​ ಪಂದ್ಯಗಳಿಗಿಂತ ಈ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ತುಂಬಾ ಕೆಟ್ಟದಾಗಿದೆ. ಈ ಪಿಚ್​ ಮೊದಲ ಇನ್ನಿಂಗ್ಸ್​ನಲ್ಲಿ ದೊಡ್ಡ ಮೊತ್ತ ಗಳಿಸಲು ಉತ್ತಮವಾಗಿದೆ. ಸ್ಪಿನ್​ ಆಗುತ್ತಿಲ್ಲ, ಚೆಂಡು ಚೆನ್ನಾಗಿ ಬ್ಯಾಟ್​ಗೆ ಬರುತ್ತಿದೆ. ಇದು ತುಂಬಾ ಕಳಪೆ ಬ್ಯಾಟಿಂಗ್" ಎಂದು ವಾನ್​ ಟ್ವೀಟ್ ಮಾಡಿದ್ದಾರೆ.​

ಮಾಜಿ ನಾಯಕ ಕೆವಿನ್ ಪೀಟರ್ಸನ್, ಯುವ ಬ್ಯಾಟ್ಸ್​ಮನ್​ಗಳಿಗೆ ಭಾರತ ಅತ್ಯಂತ ಕಠಿಣ ಸ್ಥಳವಾಗಿದೆ. ಎರಡನೇ ಇನ್ನಿಂಗ್ಸ್​ನಲ್ಲಾದರೂ ಉತ್ತಮ ಬ್ಯಾಟಿಂಗ್ ತೋರಿ ಎಂದಿದ್ದು, ಭಾರತೀಯ ಸ್ಪಿನ್ನರ್​ಗಳೂ ನಿಜಕ್ಕೂ ಅತ್ಯುತ್ತಮರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನನ್ನನ್ನು ನಿಂದಿಸಿದ್ದಕ್ಕಾಗಿ ಸ್ಟೋಕ್ಸ್​ ಜೊತೆ ಕೊಹ್ಲಿ ವಾಗ್ವಾದಕ್ಕಿಳಿದರು: ಸಿರಾಜ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.