ದುಬೈ: ಐಪಿಎಲ್ನ 51 ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಅಂಕಪಟ್ಟಿಯಲ್ಲಿ 16 ಅಂಕ ಪಡೆದು ಈಗಾಗಲೆ ಪ್ಲೇ ಆಫ್ ಪ್ರವೇಶಿಸಿರುವ ಮುಂಬೈಗೆ ಇಂದಿನ ಪಂದ್ಯ ಹೆಚ್ಚೇನು ಮಹತ್ವದ್ದಾಗಿಲ್ಲವಾದ್ದರಿಂದ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿ ಜಯಂತ್ ಯಾದವ್ಗೆ ಅವಕಾಶ ನೀಡಿದೆ. ಜೊತೆಗೆ ಪ್ಯಾಟಿನ್ಸನ್ ಬದಲಿ ನಥನ್ ಕೌಲ್ಟರ್ ನೈಲ್ಗೆ ಅವಕಾಶ ನೀಡಿದೆ.
-
#MumbaiIndians win the toss and they will bowl first against #DelhiCapitals.#Dream11IPL pic.twitter.com/xLpuPedUUa
— IndianPremierLeague (@IPL) October 31, 2020 " class="align-text-top noRightClick twitterSection" data="
">#MumbaiIndians win the toss and they will bowl first against #DelhiCapitals.#Dream11IPL pic.twitter.com/xLpuPedUUa
— IndianPremierLeague (@IPL) October 31, 2020#MumbaiIndians win the toss and they will bowl first against #DelhiCapitals.#Dream11IPL pic.twitter.com/xLpuPedUUa
— IndianPremierLeague (@IPL) October 31, 2020
ಇತ್ತ ಸತತ 3 ಸೋಲು ಕಂಡು 3ನೇ ಸ್ಥಾನದಲ್ಲಿರುವ ಡೆಲ್ಲಿ ತಂಡ ಈ ಪಂದ್ಯದಲ್ಲಿ 3 ಬದಲಾವಣೆ ಮಾಡಿಕೊಂಡಿದೆ. ಪೃಥ್ವಿ ಶಾ ಹಾಗೂ ಹರ್ಷಲ್ ಪಟೇಲ್ ತಂಡಕ್ಕೆ ಮರಳಿದ್ದರೆ. ಕರ್ನಾಟಕ ತಂಡದ ಪ್ರವೀಣ್ ದುಭೆಗೆ ಐಪಿಎಲ್ನಲ್ಲಿ ಪದಾರ್ಪಣೆ ಮಾಡಿಸುತ್ತಿದೆ. ಇವರಿಗೆ ರಹಾನೆ, ತುಷಾರ್ ದೇಶಪಾಂಡೆ ಹಾಗೂ ಅಕ್ಷರ್ ಪಟೇಲ್ ಜಾಗ ಬಿಟ್ಟುಕೊಟ್ಟಿದ್ದಾರೆ.
ಉಭಯ ತಂಡಗಳು ಇಲ್ಲಿಯವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 13 ಪಂದ್ಯಗಳಲ್ಲಿ ಮುಂಬೈ ತಂಡ ಗೆಲುವು ಕಂಡಿದ್ರೆ, 12 ಪಂದ್ಯಗಳಲ್ಲಿ ಡೆಲ್ಲಿ ತಂಡ ಜಯ ಸಾಧಿಸಿದೆ.