ಅಬುಧಾಬಿ: ಅಗ್ರಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಯಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮುಂಬೈ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿಯುತ್ತಿದ್ದರೆ, ಆರ್‌ಸಿಬಿ ಇಂದಿನ ಪಂದ್ಯದಲ್ಲಿ ಆ್ಯರೋನ್ ಫಿಂಚ್ ಮತ್ತು ಮೊಯಿನ್ ಅಲಿ ಬದಲಿಗೆ ಡೇಲ್ ಸ್ಟೈನ್ ಮತ್ತು ಜೋಶ್ ಫಿಲಿಪ್ಪೆ ಹಾಗೂ ಗಾಯಾಳು ಸೈನಿ ಬದಲಿಗೆ ಶಿವಂ ದುಬೆ ಅವರನ್ನ ಕಣಕ್ಕಿಳಿಸುತ್ತಿದೆ.
ಮುಂಬೈ ಆಡಿರುವ 11 ಪಂದ್ಯಗಳಲ್ಲಿ 7 ಜಯ ದಾಖಲಿಸಿರುವ ಮುಂಬೈ ಇಂಡಿಯನ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 11ರಲ್ಲಿ 7 ಪಂದ್ಯಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ನೆಟ್ ರನ್‌ರೇಟ್ ಹೆಚ್ಚಿರುವ ಕಾರಣ ಮುಂಬೈ ಅಗ್ರ ಸ್ಥಾನದಲ್ಲಿದೆ.
ಆರ್‌ಸಿಬಿ - ಎಂಐ ಹಿಂದಿನ ಮುಖಾಮುಖಿಗಳ ಅಂಕಿ - ಅಂಶಗಳನ್ನು ಗಮನಿಸಿದರೆ ಮುಂಬೈ ಬಲಿಷ್ಠ ತಂಡವಾಗಿ ಕಾಣಿಸಿದೆ. ಆಡಿರುವ 28 ಪಂದ್ಯಗಳಲ್ಲಿ ಮುಂಬೈ 18ರಲ್ಲಿ ಗೆದ್ದಿದ್ದರೆ, ಬೆಂಗಳೂರು ಕೇವಲ 10ರಲ್ಲಿ ಜಯಶಾಲಿಯಾಗಿದೆ.
-
#MumbaiIndians Captain Kieron Pollard wins the toss and elects to bowl first against #RCB #Dream11IPL pic.twitter.com/m6voxFiOOt
— IndianPremierLeague (@IPL) October 28, 2020 " class="align-text-top noRightClick twitterSection" data="
">#MumbaiIndians Captain Kieron Pollard wins the toss and elects to bowl first against #RCB #Dream11IPL pic.twitter.com/m6voxFiOOt
— IndianPremierLeague (@IPL) October 28, 2020#MumbaiIndians Captain Kieron Pollard wins the toss and elects to bowl first against #RCB #Dream11IPL pic.twitter.com/m6voxFiOOt
— IndianPremierLeague (@IPL) October 28, 2020
ಮುಂಬೈ ಇಂಡಿಯನ್ಸ್ ತಂಡ
ಕ್ವಿಂಟನ್ ಡಿ ಕಾಕ್ (ವಿ.ಕೀ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ (ನಾಯಕ), ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್ಪೆ(ವಿ.ಕೀ’)., ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಗುರ್ಕೀರತ್ ಸಿಂಗ್, ಶಿವಂ ದುಬೆ, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಸ್ಟೈನ್, ಯುಜುವೇಂದ್ರ ಚಾಹಲ್.: