ETV Bharat / sports

ಶಿಖರ್​ ಧವನ್ ಅರ್ಧಶತಕದ ಬಲ: ಮುಂಬೈಗೆ 163 ರನ್​ಗಳ ಟಾರ್ಗೆಟ್ ನೀಡಿದ ಡೆಲ್ಲಿ - ಡೆಲ್ಲಿ ಹಾಗೂ ಮುಂಬೈ ಡ್ರೀಮ್ ಇಲೆವೆನ್ ಟೀಮ್

​ ಶಿಖರ್​ ಧವನ್​ ಸಿಡಿಸಿದ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡ162 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಮುಂಬೈಗೆ 163 ರನ್​ಗಳ ಟಾರ್ಗೆಟ್ ನೀಡಿದ ಡೆಲ್ಲಿ

author img

By

Published : Oct 11, 2020, 9:26 PM IST

ಅಬುಧಾಬಿ: ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಸಿಡಿಸಿದ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡ162 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ತೋರಿದ್ದ ಶಿಖರ್​ ಧವನ್​ ಈ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದ್ದಲ್ಲದೆ 52 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 69 ರನ್​ಗಳಿಸಿದರು. ಆದರೆ ಇವರ ಜೊತೆ ಇನ್ನಿಂಗ್ಸ್​ ಆರಂಭಿಸಿದ ಪೃಥ್ವಿ ಶಾ ಕೇವಲ 4 ರನ್​ಗಳಿಗೆ ವಿಕೆಟ್​ ಒಪ್ಪಿಸಿದರೆ, ಇಂದೇ ಮೊದಲ ಪಂದ್ಯವನ್ನಾಡಿದ ಅಜಿಂಕ್ಯಾ ರಹಾನೆ 15 ರನ್​ಗಳಿಸಿ ಔಟಾದರು.

ರಹಾನೆ ನಂತರ ಬಂದ ನಾಯಕ ಶ್ರೇಯಸ್​ ಅಯ್ಯರ್​ 33 ಎಸೆತಗಳಲ್ಲಿ 5 ಬೌಂಡರಿ ಸಹಿತ 42 ರನ್​ಗಳಿಸಿದರು. ಅಯ್ಯರ್​ 4ನೇ ವಿಕೆಟ್​ಗೆ ಧವನ್​ ಜೊತೆ ಸೇರಿ 85 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಅಯ್ಯರ್​ ಔಟಾದ ನಂತರ ಬಂದ ಸ್ಟೋಯ್ನಿಸ್​ 13, ಹಾಗೂ ಅಲೆಕ್ಸ್​ ಕ್ಯಾರಿ 9 ಎಸೆತಗಳಲ್ಲಿ 14 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಮುಂಬೈ ಇಂಡಿಯನ್ಸ್ ಪರ ಸ್ಪಿನ್ನರ್​ ಕೃನಾಲ್ ಪಾಂಡ್ಯ 4 ಓವರ್​ಗಳಲ್ಲಿ 26 ರನ್​ ನೀಡಿ 2 ವಿಕೆಟ್​ ಪಡೆದರೆ, ಬೌಲ್ಟ್​ 36 ರನ್​ ನೀಡಿ ಒಂದು ವಿಕೆಟ್ ಪಡೆದರು. ಬುಮ್ರಾ ವಿಕೆಟ್​ ಪಡೆಯದಿದ್ದರೂ 26 ರನ್​ ನೀಡಿ ರನ್​ಗೆ ಕಡಿವಾಣವಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.