ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಮುಂಬೈ ಇಂಡಿಯನ್ಸ್ ತಂಡದ ಕೆಲ ಪ್ಲೇಯರ್ಸ್ ಹಾಗೂ ಸಹಾಯಕ ಸಿಬ್ಬಂದಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಇದೀಗ ಎಲ್ಲರ ವರದಿ ನೆಗೆಟಿವ್ ಬಂದಿದ್ದು, ತಂಡ ನಿಟ್ಟುಸಿರು ಬಿಡುವಂತಾಗಿದೆ.
-
Official Statement:
— Mumbai Indians (@mipaltan) April 6, 2021 " class="align-text-top noRightClick twitterSection" data="
Mumbai Indians’ scout and wicket keeping consultant Mr. Kiran More has tested positive for Covid-19. #MumbaiIndians #MI #OneFamily (1/3) pic.twitter.com/Szoweg0MrZ
">Official Statement:
— Mumbai Indians (@mipaltan) April 6, 2021
Mumbai Indians’ scout and wicket keeping consultant Mr. Kiran More has tested positive for Covid-19. #MumbaiIndians #MI #OneFamily (1/3) pic.twitter.com/Szoweg0MrZOfficial Statement:
— Mumbai Indians (@mipaltan) April 6, 2021
Mumbai Indians’ scout and wicket keeping consultant Mr. Kiran More has tested positive for Covid-19. #MumbaiIndians #MI #OneFamily (1/3) pic.twitter.com/Szoweg0MrZ
ಹಾಲಿ ಚಾಂಪಿಯನ್ ಹಾಗೂ ಐದು ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಸದ್ಯ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದು, ಬರುವ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: ಬಯೋ ಬಬಲ್ ಕಷ್ಟಕರ: ಆದ್ರೆ ಭಾರತೀಯ ಕ್ರಿಕೆಟರ್ಸ್ ಬಳಿ ಹೆಚ್ಚು ತಾಳ್ಮೆ ಎಂದ ಗಂಗೂಲಿ
ಕಳೆದ ಕೆಲ ದಿನಗಳ ಹಿಂದೆ ತಂಡದ ಸೂರ್ಯಕುಮಾರ್ ಯಾದವ್, ವಿಕೆಟ್ ಕೀಪರ್ ಸಲಹೆಗಾರ ಕಿರಣ್ ಮೊರೆ ಸೇರಿದಂತೆ ಅನೇಕರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಆದರೆ, ಇದೀಗ ಎಲ್ಲರ ವರದಿ ನೆಗೆಟಿವ್ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ಪ್ರಕಟಣೆ ಸಹ ಹೊರಡಿಸಿದೆ. ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸುವ ಉದ್ದೇಶದಿಂದ ಇಂದಿನ ತರಬೇತಿ ಶಿಬಿರ ರದ್ದುಗೊಳಿಸಿತ್ತು. ಅದರ ಫಲಿತಾಂಶ ಬಹಿರಂಗಗೊಂಡಿದ್ದು, ಎಲ್ಲರೂ ನೆಗೆಟಿವ್ ಹೊಂದಿದ್ದಾರೆ ಎಂದಿದೆ.
ಕೊರೊನಾ ವೈರಸ್ ಕಾರಣ ಕಳೆದ ವರ್ಷದ ಆವೃತ್ತಿ ಯುಎಇನಲ್ಲಿ ನಡೆದಿತ್ತು. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು.