ಬ್ರಿಸ್ಬೇನ್: ಆಸ್ಟ್ರೇಲಿಯಾ ತಂಡದ ಸ್ಪಿನ್ ಬೌಲರ್ ಆ್ಯಡಂ ಜಂಪಾ ಬಿಗ್‌ಬ್ಯಾಷ್ ಪಂದ್ಯದ ವೇಳೆ ಅಶ್ಲೀಲ ಪದ ಪ್ರಯೋಗಿಸಿದ ಆರೋಪದ ಮೇಲೆ ಒಂದು ಬಿಬಿಎಲ್ ಪಂದ್ಯ ಹಾಗೂ 2500 ಡಾಲರ್ ಮೊತ್ತವನ್ನು ದಂಡವಾಗಿ ತೆತ್ತಿದ್ದಾರೆ.
ಮಂಗಳವಾರ ಸಿಡ್ನಿ ಥಂಡರ್ ನಡುವಿನ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಈ ಘಟನೆ ನಡೆದಿದೆ. ಆದರೆ ಜಂಪಾ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 12 ತಿಂಗಳೊಳಗೆ ಇದು ಅವರ ಎರಡನೇ ಉಲ್ಲಂಘನೆಯಾಗಿದೆ. ಹಾಗಾಗಿ ಶನಿವಾರ ನಡೆಯುವ ಹೋಬರ್ಟ್ ಹರಿಕೇನ್ಸ್ ವಿರುದ್ಧದ ಪಂದ್ಯದಲ್ಲಿ ಜಂಪಾ ಕಣಕ್ಕಿಳಿಯುತ್ತಿಲ್ಲ. ಇವರ ಬದಲು ನೇಪಾಳಿ ಯುವ ಬೌಲರ್ ಸಂದೀಪ್ ಲೆಮಿಚ್ಛಾನೆ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
-
The revolving door of senior Melbourne Stars players has continued to spin after Adam Zampa copped a one-game BBL suspension #BBL10 https://t.co/Xn2bNBvpNu
— cricket.com.au (@cricketcomau) December 31, 2020 " class="align-text-top noRightClick twitterSection" data="
">The revolving door of senior Melbourne Stars players has continued to spin after Adam Zampa copped a one-game BBL suspension #BBL10 https://t.co/Xn2bNBvpNu
— cricket.com.au (@cricketcomau) December 31, 2020The revolving door of senior Melbourne Stars players has continued to spin after Adam Zampa copped a one-game BBL suspension #BBL10 https://t.co/Xn2bNBvpNu
— cricket.com.au (@cricketcomau) December 31, 2020
ಇದನ್ನು ಓದಿ:ಅಪಾಯವೆಂದು ಗೊತ್ತಿದ್ದರೂ ಫಿಟ್ ಇಲ್ಲದ ವಾರ್ನರ್ ಕಣಕ್ಕಿಳಿಸುತ್ತಿದೆ ಆಸೀಸ್!
ಥಂಡರ್ಸ್ ವಿರುದ್ಧ 16ನೇ ಓವರ್‌ನಲ್ಲಿ ವೈಡ್ ಎಸೆದ ಜಂಪಾ ವಿಕೆಟ್‌ನ ಹಿಂಭಾಗಕ್ಕೆ ಬಂದು ಅಶ್ಲೀಲವಾದ ಪದ ಪ್ರಯೋಗಿಸಿದ್ದರು. ಇದು ವಿಕೆಟ್ ಹಿಂದಿನ ಮೈಕ್‌ನಲ್ಲಿ ರೆಕಾರ್ಡ್ ಆಗಿತ್ತು