ETV Bharat / sports

'ಪಂತ್​ ಜೊತೆ ಆಡುವುದನ್ನು ಬಯಸುತ್ತೇನೆಯೇ ಹೊರತು ಅವರ ಪ್ರತಿಸ್ಪರ್ಧಿಯಾಗಿ ಅಲ್ಲ' - Team india wicket keeper slat

ಎಂ.ಎಸ್. ಧೋನಿ​ 2014ರಲ್ಲೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅಂದಿನಿಂದ ಕೆಲವು ವರ್ಷಗಳ ಕಾಲ ವೃದ್ದಿಮಾನ್​ ಸಹಾ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಕೆಟ್ ಕೀಪರ್ ಸ್ಥಾನ ತುಂಬಿದ್ದಾರೆ. ಅದರೆ ಸೀಮಿತ ಓವರುಗಳ ಕ್ರಿಕೆಟ್​ನಲ್ಲಿ ಮಾತ್ರ ಇನ್ನೂ ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.

ಸಂಜು ಸಾಮ್ಸನ್​,-ರಿಷಭ್ ಪಂತ್​
ಸಂಜು ಸಾಮ್ಸನ್​,-ರಿಷಭ್ ಪಂತ್​
author img

By

Published : Jun 9, 2020, 9:51 AM IST

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿಕೆಟ್​ ಕೀಪರ್​ ಎಂ.ಎಸ್. ಧೋನಿ ನಂತರ ವಿಕೆಟ್ ಕೀಪರ್ ಸ್ಥಾನಕ್ಕೆ ಯುವ ವಿಕೆಟ್​ ಕೀಪರ್​ಗಳಿಂದ ತೀವ್ರ ಸ್ಪರ್ಧೆ ಕಂಡುಬರುತ್ತಿದೆ.

ಧೋನಿ​ 2014ರಲ್ಲೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅಂದಿನಿಂದ ಕೆಲವು ವರ್ಷಗಳ ಅವಧಿಗೆ ವೃದ್ಧಿಮಾನ್​ ಸಹಾ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಕೆಟ್ ಕೀಪರ್ ಸ್ಥಾನ ತುಂಬಿದರು. ಅದರೆ ಸೀಮಿತ ಓವರು​ಗಳ ಕ್ರಿಕೆಟ್​ನಲ್ಲಿ ಮಾತ್ರ ಇನ್ನೂ ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.

ಪ್ರಸ್ತುತ ರಿಷಭ್​ ಪಂತ್​ ಅವರನ್ನು ಧೋನಿಯ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಪಂತ್​ ನಿರೀಕ್ಷಿತ ಪ್ರದರ್ಶನ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಕನ್ನಡಿಗ ಕೆ.ಎಲ್.ರಾಹುಲ್​ ಕೆಲವು ಪಂದ್ಯಗಳಲ್ಲಿ ವಿಕೆಟ್​ ಕೀಪರ್​ ಜವಾಬ್ದಾರಿ ನಿರ್ವಹಿಸಿದ್ದಾರೆ. ಆದರೆ ಖಾಯಂ ಕೀಪರ್​ಗೆ ಸಂಜು ಸಾಮ್ಸನ್​, ರಿಷಭ್ ಪಂತ್​ ಹಾಗೂ ರಾಹುಲ್ ನಡುವೆ​ ತುರುಸಿನ ಪೈಪೋಟಿ ಇದೆ. ಆದರೆ ಸಾಮ್ಸನ್​ ಮಾತ್ರ ಪಂತ್​ ನನ್ನ ಸ್ನೇಹಿತನೇ ಹೊರತು ಪ್ರತಿಸ್ಪರ್ಧಿಯಲ್ಲ ಎಂದಿದ್ದಾರೆ.

ಇದೆಲ್ಲಾ ತಂಡದ ಸಂಯೋಜನೆಯ ಆಧಾರದ ಮೇಲೆ ನಿಂತಿರುತ್ತದೆ. ಪಂತ್​ ನನ್ನ ಪ್ರತಿಸ್ಪರ್ಧಿ ಎಂದು ನಾನು ಯೋಚಿಸಲಾರೆ. ನಾನೊಬ್ಬ ಕ್ರಿಕೆಟರ್ ಆಗಿದ್ದುಕೊಂಡು, ತಂಡದಲ್ಲಿ ಅವಕಾಶ ಸಿಗಬೇಕಾದರೆ ಸ್ಪರ್ಧೆ ಮುಖ್ಯ ಎಂದೇ ಭಾವಿಸುತ್ತೇನೆ. ನಮಗೆ ಅವಕಾಶ ಸಿಗಬೇಕಾದರೆ ನಾವು ಇನ್ನೊಬ್ಬರ ಪ್ರದರ್ಶನದ ಮೇಲೆ ಕಣ್ಣಿಡಬೇಕು. ಆದರೆ ನಾನು ಕ್ರಿಕೆಟ್ ಆಡುವ ರೀತಿ ಆ ರೀತಿಯೆಂದು ಭಾವಿಸಿಲ್ಲ ಎಂದು ಸ್ಯಾಮ್ಸನ್‌ ಹೇಳಿದ್ದಾರೆ.

ನಾನು ಮತ್ತು ರಿಷಭ್​ ಪಂತ್​ ಪ್ರತಿಸ್ಪರ್ಧಿಗಳು ಎಂದು ಹೇಳುತ್ತಾರೆ. ಆದರೆ ನಾನು ಪಂತ್​ ಸಾಕಷ್ಟು ಇನ್ನಿಂಗ್ಸ್​ಗಳಲ್ಲಿ ಜೊತೆಯಾಗಿ ಆಡಿದ್ದೇವೆ. ಅಷ್ಟೇ ಅಲ್ಲ, ನಾವಿಬ್ಬರು ಸಾಕಷ್ಟು ತರ್ಲೆ, ತಮಾಷೆ ಮಾಡಿ ಖುಷಿಪಟ್ಟಿದ್ದೇವೆ. ಡೆಲ್ಲಿ ಡೇರ್​ ಡೇವಿಲ್ಸ್​ ಪರ ಆಡುವಾಗ ಬೌಲರ್​ಗಳ ಮೇಲೆ ಪಾರಮ್ಯ ಮೆರೆದಿದ್ದೇವೆ. ಹೀಗಾಗಿ ನಾನು ಅವರ ಜೊತೆಯಾಗಿ ಆಡಲು ಬಯಸುತ್ತೇನೆಯೇ ಹೊರತು ಪ್ರತಿಸ್ಪರ್ಧಿಯಾಗಿ ಅಲ್ಲ ಕೇರಳ ಕ್ರಿಕೆಟಿಗ ಅಭಿಪ್ರಾಯಪಟ್ಟರು.

2015 ರಲ್ಲಿ ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸಂಜು ಆ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. ಆಗ ಅವರು 24 ಎಸೆತಗಳಲ್ಲಿ ಕೇವಲ 19 ರನ್ ​ಗಳಿಸಿದ್ದರು. ನಂತರ 5 ವರ್ಷಗಳ ಕಾಲ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ 2019ರಲ್ಲಿ ಮತ್ತೆ ಬಾಂಗ್ಲಾದೇಶದ ವಿರುದ್ಧ ಅವಕಾಶ ಪಡೆದರಾದರೂ ಒಂದೂ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ನಂತರ ವಿಂಡೀಸ್ ವಿರುದ್ಧದ ಸರಣಿಯಿಂದಲೇ ಹೊರದಬ್ಬಲಾಗಿತ್ತು. ಈ ನಿರ್ಧಾರದಿಂದ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಆಯ್ಕೆ ಸಮಿತಿ ತುತ್ತಾಗಿತ್ತು.

ನಂತದ ಭಾರತ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದ್ದ ವೇಳೆ ಟಿ20 ಸರಣಿಗೆ ಅವಕಾಶ ನೀಡಿತ್ತಾದರೂ, ಸಿಕ್ಕ ಅವಕಾಶವನ್ನು ಸಂಜು ಬಾಚಿಕೊಳ್ಳುವುದರಲ್ಲಿ ವಿಫಲರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.