ಅಡಿಲೇಡ್: ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಪರ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಹಸ್ಸಿ ಬ್ಯಾಟಿಂಗ್ ಮಾಡಿದ್ದು, ಭಾರತ ತಂಡದ ಆಡಳಿತ ಮಂಡಳಿ ಯುವ ಆಟಗಾರನಿಗೆ ಬೆಂಬಲ ನೀಡಿ ಎರಡನೇ ಪಂದ್ಯಕ್ಕೇ ಅವಕಾಶ ನೀಡಲಿದೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಎಂಸಿಜಿ ಮೈದಾನ ಅವರ ಬ್ಯಾಟಿಂಗ್ ಸೂಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಶಾ ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆ ಸುತ್ತಿದರೆ, ಎರಡನೇ ಇನ್ನಿಂಗ್ಸ್ನಲ್ಲಿ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಎರಡೂ ಇನ್ನಿಂಗ್ಸ್ಗಳಲ್ಲೂ ಬೌಲ್ಡ್ ಆಗುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಭಾರತ ತಂಡ ಮೊದಲ ಪಂದ್ಯವನ್ನು 8 ವಿಕೆಟ್ಗಳಿಂದ ಸೋಲು ಕಂಡಿತ್ತು.
ಭಾರತ ತಂಡದ ಆಯ್ಕೆಗಾರರು ಪೃಥ್ವಿ ಶಾ ಮೇಲೆ ವಿಶ್ವಾಸ ಇಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹೌದು, ಅದು ಕಠಿಣ ಪಿಚ್ನಲ್ಲಿ ಅತ್ಯುತ್ತಮ ಬೌಲರ್ಗಳನ್ನು ಎದುರಿಸಿದ್ದರಿಂದ ಆತ ಮೊದಲ ಟೆಸ್ಟ್ ಪಂದ್ಯದಲ್ಲಿ ಸಾಕಷ್ಟು ರನ್ಗಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ:ಭಾರತಕ್ಕೆ ಕೊಹ್ಲಿ ಅನುಪಸ್ಥಿತಿ ಕಾಡಲಿದೆ, ಆದರೆ ಪಿತೃತ್ವ ರಜೆಗೆ ಅವರು ಖಂಡಿತ ಅರ್ಹ: ಸ್ಟಿವ್ ಸ್ಮಿತ್
ಜೋ ಬರ್ನ್ಸ್ ಅವರನ್ನು ಉದಾಹರಣೆ ನೀಡಿರುವ ಅವರು. ಬರ್ನ್ಸ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 7ಕ್ಕಿಂತಲೂ ಕಡಿಮೆ ಸರಾಸರಿ ಹೊಂದಿದ್ದರು. ಆದರೂ ಆಯ್ಕೆಗಾರರು ಅವರ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿದರು. ಅವರು ಮೊದಲ ಇನ್ನಿಂಗ್ಸ್ನಲ್ಲಿ ಕಡಿಮೆ ಮೊತ್ತಕ್ಕೆ ಔಟಾದರು, ಆದರೆ, 2ನೇ ಇನ್ನಿಂಗ್ಸ್ನಲ್ಲಿ ಆತ್ಮವಿಶ್ವಾಸ ಪಡೆದು ಆಕರ್ಷಕ ಅರ್ಧಶತಕ ಸಿಡಿಸಿದರ ಎಂದು ಅವರು ಹೇಳಿದ್ದಾರೆ.
ಶಾ ಎರಡೂ ಅಭ್ಯಾಸ ಪಂದ್ಯದಲ್ಲೂ ಅರ್ಧಶತಕ ಸಿಡಿಸಲು ವಿಫಲರಾಗಿದ್ದರು. 4 ಇನ್ನಿಂಗ್ಸ್ಗಳಿಂದ 15.5 ರ ಸರಾಸರಿಯಲ್ಲಿ 62 ರನ್ಗಳಿಸಿದ್ದರು. ಇದೀಗ ಇವರ ಪ್ರತಿಸ್ಪರ್ಧಿಗಳಾದ ರಾಹುಲ್ ಮತ್ತು ಗಿಲ್ ಇತ್ತೀಚಿನ ಪ್ರದರ್ಶನಗಳಲ್ಲಿ ಶಾ ಗಿಂತ ಉತ್ತಮ ಪ್ರದರ್ಶನ ತೋರಿದ್ದಾರೆ. ಗಿಲ್ ಅಭ್ಯಾಸ ಪಂದ್ಯದಲ್ಲಿ 4 ಇನ್ನಿಂಗ್ಸ್ಗಳಿಂದ 31.75 ರ ಸರಾಸರಿಯಲ್ಲಿ 127 ರನ್ಗಳಿಸಿದ್ದರೆ, ರಾಹುಲ್ ಐಪಿಎಲ್ ಮತ್ತು ಸೀಮಿತ ಓವರ್ಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿರುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.