ಮುಂಬೈ: 2021ರ ಜನವರಿಯಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ಗಾಗಿ ಮುಂಬೈ ತಂಡವನ್ನು ಪ್ರಕಟಿಸಿದ್ದು, ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಸೂರ್ಯಕುಮಾರ್ ಯಾದವ್ರನ್ನು ನಾಯಕನನ್ನಾಗಿ ಘೋಷಿಸಿದೆ.
ಶನಿವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್ 20 ಸದಸ್ಯರ ತಂಡವನ್ನು ಘೋಷಣೆ ಮಾಡಿದ್ದು, ಸೂರ್ಯಕುಮಾರ್ ಯಾದವ್ ನಾಯಕ ಹಾಗೂ ಆದಿತ್ಯಾ ತಾರೆಯನ್ನು ಉಪನಾಯಕನನ್ನಾಗಿ ನೇಮಕ ಮಾಡಿದೆ. ಇನ್ನು ತಂಡದಲ್ಲಿ ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಸರ್ಫರಾಜ್ ಖಾನ್, ಸಿದ್ದೇಶ್ ಲಾಡ್, ತುಷಾರ್ ದೇಶಪಾಂಡೆ, ದವಳ್ ಕುಲಕರ್ಣಿ ಅಂತಹ ಐಪಿಎಲ್ ಸ್ಟಾರ್ಗಳು ಅವಕಾಶ ಪಡೆದಿದ್ದಾರೆ.
ರಣಜಿ ಟ್ರೋಫಿಯಲ್ಲಿ 41 ಬಾರಿ ಟ್ರೋಪಿ ಎತ್ತಿ ಹಿಡಿದಿರುವ ಮುಂಬೈ ತಂಡ ಇದುವರೆಗೂ ಒಮ್ಮೆಯೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಟ್ರೋಫಿ ಎತ್ತಿ ಹಿಡಿಯುವ ಕನಸ ಕಾಣುತ್ತಿದೆ.
ಕೋವಿಡ್ 19 ಭೀತಿ ಮಧ್ಯೆ ಟೂರ್ನಿ ನಡೆಯುತ್ತಿರುವುದರಿಂದ ಡಿಸೆಂಬರ್ 29ರಂದು ಬೆಳಗ್ಗೆ ಎಲ್ಲ ಆಟಗಾರರನ್ನು ವಾಂಖೆಡೆಯಲ್ಲಿ ವರದಿ ಮಾಡಿಕೊಳ್ಳಲು ಬೋರ್ಡ್ ತಿಳಿಸಿದೆ. ಈ ಎಲ್ಲಾ ಆಟಗಾರರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಮತ್ತು ನೆಗೆಟಿವ್ ವರದಿ ಪಡೆದಿಕೊಳ್ಳಬೇಕಿದೆ.
ಮುಂಬೈ ತಂಡ ಇಂತಿದೆ
ಸೂರ್ಯಕುಮಾರ್ ಯಾದವ್ (ನಾಯಕ), ಆದಿತ್ಯಾ ತಾರೆ (ಉಪನಾಯಕ),ಶಿವಂ ದುಬೆ, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ಸಿದ್ದೇಶ್ ಲಾಡ್, ತುಷಾರ್ ದೇಶಪಾಂಡೆ, ದವಳ್ ಕುಲಕರ್ಣಿ, ಆಕರ್ಷಿತ್ ಗೋಮಲ್, ಶುಭಂ ರಂಜನೆ, , ಸುಜಿತ್ ನಾಯಕ್, ಸಾಯ್ರಾಜ್ ಪಾಟೀಲ್, ಮಿನದ್ ಮಂಜ್ರೇಕರ್, ಪ್ರತಮೇಶ್ ಡಾಕೆ, ಅಥರ್ವ ಅಂಕೋಲೆಕರ್, ಶಶಾಂಕ್ ಅತರ್ಡೆ, ಶಾಮ್ಸ್ ಮುಲಾನಿ, ಹಾರ್ದಿಕ್ ಟಾಮೋರ್, ಆಕಾಶ್ ಪಾರ್ಕರ್, ಸುಫಿಯಾನ್ ಶೇಕ್