ಇಂದೋರ್: ಪ್ರವಾಸಿ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಆಕರ್ಷಕ ದ್ವಿಶತಕ ಸಿಡಿಸಿದ್ದಾರೆ.
ಪ್ರವಾಸಿ ತಂಡ 150 ರನ್ನಿಗೆ ಸರ್ವಪತನವಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ರೋಹಿತ್ ಪತನದ ಬಳಿಕ ಮಯಾಂಕ್ ಆಸರೆಯಾದರು. ನಿಧಾನವಾಗಿ ರನ್ ಕಲೆ ಹಾಕುತ್ತಾ ಮೊದಲ ದಿನದಂತ್ಯಕ್ಕೆ ಅರ್ಧಶತಕ ಸನಿಹದಲ್ಲಿ(37 ರನ್) ಮಯಾಂಕ್ ಅಜೇಯರಾಗುಳಿದಿದ್ದರು.
-
There is no stopping this fella. @mayankcricket brings up his 2nd Double 💯 with a Maximum 🔥 pic.twitter.com/aI21CyAdYn
— BCCI (@BCCI) November 15, 2019 " class="align-text-top noRightClick twitterSection" data="
">There is no stopping this fella. @mayankcricket brings up his 2nd Double 💯 with a Maximum 🔥 pic.twitter.com/aI21CyAdYn
— BCCI (@BCCI) November 15, 2019There is no stopping this fella. @mayankcricket brings up his 2nd Double 💯 with a Maximum 🔥 pic.twitter.com/aI21CyAdYn
— BCCI (@BCCI) November 15, 2019
ಇಂದಿನ ದಿನದಾಟದ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ ಮಯಾಂಕ್ ಎಂದಿನಂತೆ ಸಮಚಿತ್ತದಿಂದ ಇನ್ನಿಂಗ್ಸ್ ಬೆಳೆಸುತ್ತಾ ಸಾಗಿದರು. ಶತಕದ ಬಳಿಕವೂ ರನ್ ದಾಹ ಮುಂದುವರೆಸಿದ ಕನ್ನಡಿಗ ಅಗರ್ವಾಲ್, ನೋಡು ನೋಡುತ್ತಲೇ 150ರ ಗಡಿ ದಾಟಿ ಎರಡನೇ ದ್ವಿಶತಕವನ್ನೂ ಸಿಡಿಸಿದ್ದಾರೆ.
-
A second Test double century in five innings for Mayank Agarwal 2️⃣0️⃣0️⃣
— ICC (@ICC) November 15, 2019 " class="align-text-top noRightClick twitterSection" data="
What a season he's having 👏#INDvBAN pic.twitter.com/kCPzApFHVU
">A second Test double century in five innings for Mayank Agarwal 2️⃣0️⃣0️⃣
— ICC (@ICC) November 15, 2019
What a season he's having 👏#INDvBAN pic.twitter.com/kCPzApFHVUA second Test double century in five innings for Mayank Agarwal 2️⃣0️⃣0️⃣
— ICC (@ICC) November 15, 2019
What a season he's having 👏#INDvBAN pic.twitter.com/kCPzApFHVU
ಸೆಹ್ವಾಗ್ ಮಾದರಿಯಲ್ಲಿ 196 ರನ್ ಗಳಿಸಿದ್ದಾಗ ಸಿಕ್ಸರ್ ಸಿಡಿಸಿ ದ್ವಿಶತಕ ದಾಖಲಿಸಿದ್ದಾರೆ. ಮಯಾಂಕ್ ಅಗರರ್ವಾಲ್ ಪಾಲಿಗೆ ಇದು 2ನೇ ದ್ವಿಶತಕ. ಮಯಾಂಕ್ 303 ಎಸೆತದಲ್ಲಿ 28 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 243 ರನ್ನಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದ್ದಾರೆ. ಸುದೀರ್ಘ ಕಾಲದ ಬಳಿಕ ಮತ್ತೊಂದು ತ್ರಿಶಕದ ನಿರೀಕ್ಷೆಯಲ್ಲಿದ್ದ ಕೋಟ್ಯಂತರ ಅಭಿಮಾನಿಗಳು ಮಯಾಂಕ್ ಔಟಾಗುತ್ತಲೇ ನಿರಾಸೆಗೊಳಗಾಗಿದ್ದಾರೆ. ದ್ವಿಶತಕ ಸಿಡಿಸಿದ ವೇಳೆ ಡ್ರೆಸ್ಸಿಂಗ್ ರೂಮ್ನಿಂದ ತ್ರಿಶತಕ ಬೇಕು ಎಂದಿದ್ದ ನಾಯಕ ಕೊಹ್ಲಿ ಮಾತನ್ನು ಪಾಲಿಸುವಲ್ಲಿ ಮಯಾಂಕ್ ಸ್ವಲ್ಪದರಲ್ಲೇ ಎಡವಿ ಮೆಹದಿ ಹಸನ್ಗೆ ವಿಕೆಟ್ ಒಪ್ಪಿಸಿದ್ದಾರೆ.