ETV Bharat / sports

ಟೆಸ್ಟ್‌ ಕ್ರಿಕೆಟ್​ನಲ್ಲೂ ಪಂತ್​-ಅಗರ್​ವಾಲ್‌ರಿಂದ ಟಿ20 ಅಬ್ಬರ ​: 3 ದಿನಗಳ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ!

author img

By

Published : Feb 16, 2020, 1:00 PM IST

ಮೊದಲ ಇನ್ನಿಂಗ್ಸ್​ನಲ್ಲಿ ಅಗರ್​ವಾಲ್​ 1 ರನ್​ಗೆ ಹಾಗೂ ಪಂತ್​ 7 ರನ್​ಗೆ ವಿಕೆಟ್‌ ಒಪ್ಪಿಸಿ ನಿರಾಶೆ ಅನುಭವಿಸಿದ್ದರು. ಇದರ ಬೆನ್ನಲ್ಲೇ ಟೀಕೆಗೂ ಗುರಿಯಾಗಿದ್ದರು. ಆದರೆ, 2ನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದ ಈ ಇಬ್ಬರು ಟೆಸ್ಟ್​ ಪಂದ್ಯದಲ್ಲೂ ಟಿ20ಯಂತೆ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದಾರೆ.

Practice match
ಪಂತ್​- ಅಗರ್​ವಾಲ್​ ಅರ್ಧಶತಕ

ಹ್ಯಾಮಿಲ್ಟನ್​: ಟೆಸ್ಟ್​ ಸರಣಿಗೂ ಮುನ್ನ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಇಲೆವೆನ್​ ವಿರುದ್ಧ ಕನ್ನಡಿಗ ಅಗರ್​ವಾಲ್​ ಹಾಗೂ ರಿಷಭ್​ ಪಂತ್​ ಸ್ಫೋಟಕ ಆಟ ನಡೆಸಿ ಫಾರ್ಮ್​ಗೆ ಮರಳಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಅಗರ್​ವಾಲ್​ 1 ರನ್​ಗೆ ಹಾಗೂ ಪಂತ್​ 7 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಶೆ ಅನುಭವಿಸಿದ್ದರು. ಇದರ ಬೆನ್ನಲ್ಲೇ ಟೀಕೆಗೂ ಗುರಿಯಾಗಿದ್ದರು. ಆದರೆ, 2ನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದ ಈ ಇಬ್ಬರು ಟೆಸ್ಟ್​ ಪಂದ್ಯದಲ್ಲೂ ಟಿ20ಯಂತೆ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ 28 ರನ್​ಗಳ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್​ ಕಳೆದುಕೊಂಡು 152 ರನ್​ಗಳಿಸಿತು.​ ಆರಂಭಿಕರಾದ ಮಯಾಂಕ್​(81) ಹಾಗೂ ಪೃಥ್ವಿ ಶಾ ಮೊದಲ ವಿಕೆಟ್​ಗೆ 9.5 ಓವರ್​ಗಳಲ್ಲಿ 72 ರನ್​ ಸೇರಿಸಿ ಸ್ಫೋಟಕ ಆರಂಭ ನೀಡಿದರು. ಯುವ ಬ್ಯಾಟ್ಸ್​ಮನ್ ಶಾ​ 31 ಎಸೆತಗಳಲ್ಲಿ 39 ರನ್​ಗಳಿಸಿ ಔಟಾದರು. ನಂತರ ಬಂದ ಶುಬ್ಮನ್​ ಗಿಲ್ ಕೇವಲ 8 ರನ್‌ಗೆ ವಿಕೆಟ್​ ಒಪ್ಪಿಸಿದರು.

ಆದರೆ, 3ನೇ ವಿಕೆಟ್​ಗೆ ಮಯಾಂಕ್​ ಜೊತೆಯಾದ ಪಂತ್​ 134 ರನ್​ ಸೇರಿಸಿದರು. ಅಗರ್​ವಾಲ್​ 99 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್​ ಸೇರಿ 81 ರನ್​ ಗಳಿಸಿ ನಿವೃತ್ತಿಯಾದರು. ಬೌಂಡರಿ ಸಿಕ್ಸರ್​ ಸುರಿಮಳೆ ಸುರಿಸಿದ ಪಂತ್​ ಕೇವಲ 65 ಎಸೆತಗಳಲ್ಲಿ ತಲಾ 4 ಬೌಂಡರಿ ಸಿಕ್ಸರ್​ ಸಹಿತ 70 ರನ್​ಗಳಿಸಿ ಔಟಾದರು. ಮತ್ತೊಬ್ಬ ವಿಕೆಟ್​ ಕೀಪರ್​ ಸಹ ಔಟಾಗದೆ 30, ಅಶ್ವಿನ್​ ಔಟಾಗದೆ 16 ರನ್​ ಗಳಿಸಿದರು. ನಾಯಕ ಕೊಹ್ಲಿ ಎರಡೂ ಇನ್ನಿಂಗ್ಸ್​ನಲ್ಲೂ ಬ್ಯಾಟಿಂಗ್​ ನಡೆಸಲಿಲ್ಲ.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ವಿಹಾರಿ ಶತಕ(101) ಹಾಗೂ ಪೂಜಾರ ಅವರ 93 ರನ್​ಗಳ ನೆರವಿನಿಂದ 263 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್​ 235 ರನ್​ಗಳಿಗೆ ಆಲೌಟ್​ ಆಗಿತ್ತು. ಉತ್ತಮವಾಗಿ ಬೌಲಿಂಗ್ ನಡೆಸಿದ್ದ ಶಮಿ 3 ವಿಕೆಟ್​, ಬುಮ್ರಾ, ಉಮೇಶ್​ ಯಾದವ್​, ಸೈನಿ ತಲಾ ಎರಡು ವಿಕೆಟ್​ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.