ETV Bharat / sports

ಮಂಗೂಸ್ ಬ್ಯಾಟ್​ ಬಳಸುತ್ತಿದ್ದದ್ದೇಕೆ, ಧೋನಿ ರಿಯಾಕ್ಷನ್ ಹೇಗಿತ್ತು: ದಶಕಗಳ ನೆನಪು ಬಿಚ್ಚಿಟ್ಟ ಹೇಡನ್

author img

By

Published : May 9, 2020, 1:48 PM IST

2010ರಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧದ ಪಂದ್ಯದಲ್ಲಿ ಹೇಡನ್​ ತಮ್ಮ ದೊಡ್ಡದಾದ ಹ್ಯಾಂಡಲ್​ ಹಾಗೂ ಚೆಂಡನ್ನು ಹೊಡೆಯುವ ಭಾಗ ಚಿಕ್ಕದಿರುವ ಬ್ಯಾಟ್​ ಉಪಯೋಗಿಸಿ ಕೇವಲ 43 ಎಸೆತಗಳಲ್ಲಿ 93 ರನ್​ಗಳಿಸಿ ಸಿಎಸ್​ಕೆ 186 ರನ್​ಗಳ ಬೃಹತ್​ ಮೊತ್ತ ಪೇರಿಸಲು ನೆರವಾಗಿದ್ದರು. ಈ ಬಗ್ಗೆ ತಮ್ಮ ನೆನಪು ಹಂಚಿಕೊಂಡಿದ್ದಾರೆ.

ಮ್ಯಾಥ್ಯೂ ಹೇಡನ್-ಧೋನಿ
ಮ್ಯಾಥ್ಯೂ ಹೇಡನ್-ಧೋನಿ

ಚೆನ್ನೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ನ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ಮ್ಯಾಥ್ಯೂ ಹೇಡನ್​ ತಮ್ಮ ವಿಶೇಷ ವಿನ್ಯಾಸ ಮಂಗೂಸ್​ ಬ್ಯಾಟ್​ ಕುರಿತು ಧೋನಿ ನೀಡಿದ್ದ ಪ್ರತಿಕ್ರಿಯೆಯನ್ನು ಬಹಿರಂಗಗೊಳಿಸಿದ್ದಾರೆ.

ದಶಕದ ಹಿಂದೆ ವಿಶ್ವದ ಸ್ಫೋಟಕ ಆಟಗಾರರಲ್ಲಿ ಒಬ್ಬರಾಗಿದ್ದ ಆಸೀಸ್​ ಮ್ಯಾಥ್ಯೂ ಹೇಡನ್​ ತಮ್ಮ ಆಟದ ಜೊತೆಗೆ ತಮ್ಮ ಮಂಗೂಸ್​ ಬ್ಯಾಟ್​ನಿಂದಲೂ ಹೆಚ್ಚು ಪ್ರಸಿದ್ದವಾಗಿದ್ದರು.

2010ರಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧದ ಪಂದ್ಯದಲ್ಲಿ ಹೇಡನ್​ ತಮ್ಮ ದೊಡ್ಡದಾದ ಹ್ಯಾಂಡಲ್​ ಹಾಗೂ ಚೆಂಡನ್ನು ಹೊಡೆಯುವ ಭಾಗ ಚಿಕ್ಕದಿರುವ ಬ್ಯಾಟ್​ ಉಪಯೋಗಿಸಿ ಕೇವಲ 43 ಎಸೆತಗಳಲ್ಲಿ 93 ರನ್​ಗಳಿಸಿ ಸಿಎಸ್​ಕೆ 186 ರನ್​ಗಳ ಬೃಹತ್​ ಮೊತ್ತ ಪೇರಿಸಲು ನೆರವಾಗಿದ್ದರು.

ಆದರೆ, ನಾಯಕ ಎಂಸ್​ ಧೋನಿ ಸೇರಿದಂತೆ ಪ್ರಾಂಚೈಸಿಯ ಅನೇಕ ಸದಸ್ಯರು ಹೇಡನ್ ಮಂಗೂಸ್​ ಬ್ಯಾಟ್​ ಉಪಯೋಗಿಸುವ ಮೊದಲು ಅದರ ಅಭಿಮಾನಿಗಳಾಗಿರಲಿಲ್ಲ ಎಂದು ಆಸೀಸ್​ ದಂತಕತೆ ನಿರೂಪಕಿ ರೂಪ ರಮಣಿ ನಡೆಸಿಕೊಟ್ಟ ಸಿಎಸ್​ಕೆ ಲೈವ್​ ವಿಡಿಯೋದಲ್ಲಿ ತಿಳಿಸಿದ್ದಾರೆ.

ಮಂಗೂಸ್​ ಬ್ಯಾಟ್​ನಲ್ಲಿ ಚೆಂಡನ್ನು ಗ್ರಹಿಕೆ ಮಾಡುವುದು ಕಷ್ಟು ಎಂಬುದನ್ನು ನಾನು ಬಹಳಷ್ಟು ಮಂದಿಯಿಂದ ಕೇಳಿದ್ದೆ. ಈ ಉತ್ಪನ್ನದ ಬಗ್ಗೆ ನಾನು ಹಲವಾರು ಆಟಗಾರರಿಂದ ಸಾಕಷ್ಟು ಪ್ರಶ್ನೆಗಳನ್ನು ಎದುರಿಸಿದ್ದೆ. ಅರ್ಧ ವಿನ್ಯಾಸದ ಬ್ಯಾಟ್​ ಅನ್ನು ಹೇಗೆ ಉಪಯೋಗಿಸುವುದು ಹೇಗೆ ಎಂದು ಕೇಳಿದ್ದರು. ಎಂಎಸ್​ ಧೋನಿಯೂ ಕೂಡ ನೀವು ನಿಮ್ಮ ಜೀವನದಲ್ಲಿ ಬಯಸುವಂತಹದ್ದನ್ನೆಲ್ಲ ನಾನು ಕೊಡುತ್ತೇನೆ, ದಯವಿಟ್ಟು ಈ ಬ್ಯಾಟ್​ ಬಳಸಬೇಡಿ ಎಂದು ಧೋನಿ ಹೇಳಿದ್ದರೆಂದು ಹೇಡನ್​ ಬಹಿರಂಗಪಡಿಸಿದ್ದಾರೆ.

ಆ ಸಂದರ್ಭದಲ್ಲಿ ನಾನು, ಗೆಳೆಯ, ನಾನು ಈ ಬ್ಯಾಟ್​ನಲ್ಲಿ ಒಂದೂವರೆ ವರ್ಷದಿಂದ ನೆಟ್​ನಲ್ಲಿ ಅಭ್ಯಾಸ ಮಾಡಿದ್ದೇನೆ. ನಾನು ಹೇಳುವುದೇನಂದರೆ, ಈ ಬ್ಯಾಟ್​ನ ಮಧ್ಯ ಭಾಗದಿಂದ ಚೆಂಡಿಗೆ ಹೊಡೆದರೂ 20 ಮೀಟರ್​ ದೂರ ಹೋಗುತ್ತದೆ. ಇದು ನಿಜ, ಚೆಂಡುಗಳು ಈ ಬ್ಯಾಟ್​ನಿಂದ ಕಣ್ಮರೆಯಾಗುತ್ತವೆ, ಅದು ಯಾವಾಗಲು ಹಾಗೆ ಇರುತ್ತದೆ ಎಂದು ವಿವರಿಸಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ತಾವೂ ಮಂಗೂಸ್​ ಬ್ಯಾಟ್​ ಏಕೆ ಉಪಯೋಗಿಸುತ್ತೇನೆ ಎಂಬದನ್ನು ಈ ಸಮಯದಲ್ಲಿ ರಿವೀಲ್​​​​ ಮಾಡಿರುವ ಅವರು, ನಾನು ನನ್ನ ಕೆಟ್ಟ ಪ್ರದರ್ಶನದಿಂದ ನನ್ನ ಪ್ರಾಂಚೈಸಿಯನ್ನು ಕಷ್ಟಕ್ಕೆ ದೂಡುವುದನ್ನು ಬಯಸುತ್ತಿರಲಿಲ್ಲ. ಈ ವಸ್ತುವನ್ನು ಉಪಯೋಗಿಸುವ ಮೊದಲು ಮನೆಯಲ್ಲಿ ಸಾಕಷ್ಟು ಬಾರ ತಯಾರಿ ನಡೆಸುತ್ತಿದ್ದೆ. ಇನ್ನು ನಾನು ಸದಾ ಈ ಬ್ಯಾಟ್​ ಉಪಯೋಗಿಸುತ್ತಿರಲಿಲ್ಲ. ಅದನ್ನು ಬಳಸಲು ನಾನು ಸಿದ್ದ ಎಂದಾಗ, ಕೆಲವು ಸಮಯ ಪಂದ್ಯದ ಮಧ್ಯದಲ್ಲಿ ಬಳಸುತ್ತಿದ್ದೆ ಎಂದು ಹೇಡನ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.