ETV Bharat / sports

ಐಸಿಸಿ ಟೆಸ್ಟ್​ ರ‍್ಯಾಕಿಂಗ್: ಭಾರೀ ಏರಿಕೆ ಕಂಡ ಶಾನ್​ ಮಸೂದ್​, ಕ್ರಿಸ್​ ವೋಕ್ಸ್​ - ಐಸಿಸಿ

ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ​ ಆಲ್​ರೌಂಡರ್​ ಕ್ರಿಸ್ ವೋಕ್ಸ್ ಬ್ಯಾಟಿಂಗ್ ವಿಭಾಗದಲ್ಲಿ ಬಡ್ತಿ ಪಡೆದಿದ್ದಾರೆ. ಶನಿವಾರ ಅಂತ್ಯಗೊಂಡ ಪಂದ್ಯದಲ್ಲಿ ಅಜೇಯ 84 ರನ್ ಪೇರಿಸಿದ ವೋಕ್ಸ್ ಬ್ಯಾಟಿಂಗ್ ವಿಭಾಗದಲ್ಲಿ 18 ಸ್ಥಾನ ಏರಿಕೆ ಕಂಡು 78ನೇ ಸ್ಥಾನ ಪಡೆದಿದ್ದಾರೆ. ಆಲ್​ರೌಂಡರ್ ವಿಭಾಗದಲ್ಲಿ ವೋಕ್ಸ್ 7ನೇ ಸ್ಥಾನಕ್ಕೇರಿದ್ದಾರೆ. ಇದೇ ತಂಡದ ಸ್ಟೋಕ್ಸ್​ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಐಸಿಸಿ ಟೆಸ್ಟ್​ ರ‍್ಯಾಕಿಂಗ್
ಶಾನ್​ ಮಸೂದ್
author img

By

Published : Aug 10, 2020, 1:01 PM IST

ದುಬೈ: ಪಾಕಿಸ್ತಾನದ ಬ್ಯಾಟ್ಸ್​ಮನ್​ ಶಾನ್​ ಮಸೂದ್​ ಹಾಗೂ ಇಂಗ್ಲೆಂಡ್​ ಆಲ್​ರೌಂಡರ್​ ಕ್ರಿಸ್​ ವೋಕ್ಸ್​ ನೂತನ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರೀ ಏರಿಕೆ ಕಂಡಿದ್ದಾರೆ.

ಶಾನ್​ ಮಸೂದ್​ ಮೊದಲ ಇನ್ನಿಂಗ್ಸ್​ನಲ್ಲಿ 156 ರನ್​ ಸಿಡಿಸಿದ್ದರು. ಇದರಿಂದ ಪಾಕಿಸ್ತಾನ 107 ರನ್​ಗಳ ಮುನ್ನಡೆ ಸಾಧಿಸಿತ್ತು. ​ಭಾನುವಾರ ಬಿಡುಗಡೆಯಾಗಿರುವ ನೂತನ ರ್ಯಾಂಕಿಂಗ್​ನಲ್ಲಿ ಶಾನ್​ ಮಸೂದ್​ 14 ಸ್ಥಾನ ಏರಿಕೆ ಕಂಡಿದ್ದಾರೆ. ಅವರು ತಮ್ಮ ವೃತ್ತಿ ಜೀವನದ ಶ್ರೇಷ್ಠ 19ನೇ ಸ್ಥಾನಕ್ಕೇರಿದ್ದಾರೆ. ಬಾಬರ್​ ಅಜಮ್(6) ಬಿಟ್ಟರೆ ಟಾಪ್​ 20ರಲ್ಲಿರುವ ಪಾಕಿಸ್ತಾನದ ಏಕೈಕ ಬ್ಯಾಟ್ಸ್​ಮನ್​ ಆಗಿದ್ದಾರೆ.

ಕ್ರಿಸ್​ ವೋಕ್ಸ್​
ಕ್ರಿಸ್​ ವೋಕ್ಸ್​

ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್​ರೌಂಡರ್​ ಕ್ರಿಸ್ ವೋಕ್ಸ್ ಬ್ಯಾಟಿಂಗ್ ವಿಭಾಗದಲ್ಲಿ ಬಡ್ತಿ ಪಡೆದಿದ್ದಾರೆ. ಶನಿವಾರ ಅಂತ್ಯಗೊಂಡ ಪಂದ್ಯದಲ್ಲಿ ಅಜೇಯ 84 ರನ್ ಪೇರಿಸಿದ ವೋಕ್ಸ್ ಬ್ಯಾಟಿಂಗ್ ವಿಭಾಗದಲ್ಲಿ 18 ಸ್ಥಾನ ಏರಿಕೆ ಕಂಡು 78ನೇ ಸ್ಥಾನ ಪಡೆದಿದ್ದಾರೆ. ಆಲ್​ರೌಂಡರ್ ವಿಭಾಗದಲ್ಲಿ ವೋಕ್ಸ್ 7ನೇ ಸ್ಥಾನಕ್ಕೇರಿದ್ದಾರೆ. ಇದೇ ತಂಡದ ಸ್ಟೋಕ್ಸ್​ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಜೋಸ್​ ಬಟ್ಲರ್​
ಜೋಸ್​ ಬಟ್ಲರ್​

ಮೊದಲ ಇನ್ನಿಂಗ್ಸ್​ನಲ್ಲಿ 38 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 75 ರನ್​ಗಳಿಸಿದ ಜೋಸ್​ ಬಟ್ಲರ್​ 44ರಿಂದ 30ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಒಲ್ಲಿ ಪೋಪ್​ 46ರಿಂದ 36ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಪಾಕಿಸ್ತಾನದ ಬೌಲರ್​ ಯಾಸಿರ್​ ಶಾ 24ರಿಂದ 22ಕ್ಕೆ, ಶಬಾದ್​ ಖಾನ್​ 69ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇಂಗ್ಲೆಂಡ್​ನ ಸ್ಟುವರ್ಟ್​ ಬ್ರಾಡ್​ 3ನೇ ಸ್ಥಾನದಲ್ಲಿ ಮುಂದುವರೆದಿದ್ದು, ಎರಡನೇ ಸ್ಥಾನದಲ್ಲಿರುವ ಕಿವೀಸ್​ ಲ್ಯಾಗ್ನರ್​​ಗೆ ಕೇವಲ 7 ಅಂಕಗಳ ಹಿಂದಿದ್ದಾರೆ. ಮೊದಲ ಸ್ಥಾನದಲ್ಲಿ ಕಮ್ಮಿನ್ಸ್​ ಇದ್ದಾರೆ.

ವಿಶ್ವಚಾಂಪಿಯನ್​ಶಿಪ್​ನ ಅಂಕಪಟ್ಟಿಯಲ್ಲಿ 30 ಅಂಕ ಪಡೆದ ಇಂಗ್ಲೆಂಡ್​ 266 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕಿಂತ ಕೇವಲ 30 ಅಂಕಗಳ ಅಂತರ ಕಾಯ್ದುಕೊಂಡಿದೆ. ಭಾರತ ತಂಡ 360 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.