ETV Bharat / sports

2ನೇ ಬಾರಿಯ ಕೊರೊನಾ​ ಪರೀಕ್ಷೆಯಲ್ಲೂ ಪಾಸಿಟಿವ್​.. ಆತಂಕದಲ್ಲಿ ಬಾಂಗ್ಲಾ ಕ್ರಿಕೆಟರ್!!​

ಮೊರ್ತಾಜಾ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದವರಿಗೆ ಸಹಾಯ ಮಾಡಲು ತಾವೂ 18 ವರ್ಷದಿಂದ ಇಟ್ಟುಕೊಂಡಿದ್ದ ಬ್ರಾಸ್​ಲೇಟ್​ ಒಂದನ್ನು ಹರಾಜಿಗಿಟ್ಟು ಬಂದ ಹಣವನ್ನು ದೇಣಿಗೆ ನೀಡಿದ್ದರು. ಆದರೆ, ಬ್ರಾಸ್​ಲೇಟ್​ ಕೊಂಡುಕೊಂಡಿದ್ದ ವ್ಯಕ್ತಿ ಮತ್ತೆ ಅದನ್ನು ನರೇಲಿ ಎಕ್ಸ್​ಪ್ರೆಸ್​ಗೆ ಗಿಫ್ಟ್​ ನೀಡಲು ನಿರ್ಧರಿಸಿದ್ದರು..

author img

By

Published : Jul 5, 2020, 7:50 PM IST

Mashrafe Mortaza tested positive
ಮುಶ್ರಫೆ ಮೊರ್ತಾಜಾಗೆ ಎರಡನೇ ಬಾರಿಯ ಪರೀಕ್ಷಯಲ್ಲೂ ಕೊರೊನಾ ಪಾಸಿಟಿವ್​

ಡಾಕಾ : ಬಾಂಗ್ಲಾ ತಂಡದ ಮಾಜಿ ನಾಯಕ ಹಾಗೂ ಸಂಸದ ಮುಶ್ರಫೆ ಮೊರ್ತಾಜಾಗೆ 2ನೇ ಬಾರಿಯ ಪರೀಕ್ಷೆಯಲ್ಲೂ ಕೊರೊನಾ ಪಾಸಿಟಿವ್​ ವರದಿ ಬಂದಿರೋದು ಆತಂಕಕ್ಕೀಡು ಮಾಡಿದೆ.

ಜೂನ್ 20ರಂದು ಮೊರ್ತಾಜಾ ಕೊರೊನಾ ಪತ್ತೆ​ ಪರೀಕ್ಷೆಗೆ ಒಳಪಟ್ಟಿದ್ದರು. ಆ ಸಂದರ್ಭದಲ್ಲಿ ಕೊರೊನಾ ವೈರಸ್​ ತಗುಲಿರುವುದು ಖಚಿತವಾಗಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ತಮ್ಮ ಮನೆಯಲ್ಲಿ ಸೆಲ್ಫ್​ ಐಸೋಲೇಷನ್​ಗೆ ಒಳಗಾಗಿದ್ದರು. ಈ ಸುದ್ದಿಯನ್ನು ತಾವಾಗಿಯೇ ತಿಳಿಸಿದ್ದ ಬಾಂಗ್ಲಾ ತಂಡದ ನಾಯಕ ತಮ್ಮ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸುವಂತೆ ತಮ್ಮ ಅಭಿಮಾನಿಗಳಿಗೆ ಕೋರಿಕೊಂಡಿದ್ದರು.

ಇದೀಗ 2ನೇ ಬಾರಿ ಪರೀಕ್ಷೆಯಲ್ಲೂ ಪಾಸಿಟಿವ್​ ವರದಿ ಬಂದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಮುಶ್ರಫೆ​ ಮೊರ್ತಾಜಾ ಅವರ ಸಹೋದರ ಮೊರ್ಸಲಿನ್​ ಮೊರ್ತಾಜಾ ಅವರಿಗೂ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಇಬ್ಬರು ಮನೆಯಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಮೊರ್ತಾಜಾ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದವರಿಗೆ ಸಹಾಯ ಮಾಡಲು ತಾವೂ 18 ವರ್ಷದಿಂದ ಇಟ್ಟುಕೊಂಡಿದ್ದ ಬ್ರಾಸ್​ಲೇಟ್​ ಒಂದನ್ನು ಹರಾಜಿಗಿಟ್ಟು ಬಂದ ಹಣವನ್ನು ದೇಣಿಗೆ ನೀಡಿದ್ದರು. ಆದರೆ, ಬ್ರಾಸ್​ಲೇಟ್​ ಕೊಂಡುಕೊಂಡಿದ್ದ ವ್ಯಕ್ತಿ ಮತ್ತೆ ಅದನ್ನು ನರೇಲಿ ಎಕ್ಸ್​ಪ್ರೆಸ್​ಗೆ ಗಿಫ್ಟ್​ ನೀಡಲು ನಿರ್ಧರಿಸಿದ್ದರು.

ಮೊರ್ತಾಜಾ ಕೆಲವು ಬಡ ಜನರಿಗೆ ಅಹಾರ ವ್ಯವಸ್ಥೆ ಮಾಡುವ ಮೂಲಕ ಸಂಸದನಾಗಿ ತಮ್ಮ ಕ್ಷೇತ್ರದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.