ETV Bharat / sports

13 ವಿಕೆಟ್​ಗಳಲ್ಲಿ ಅತ್ಯಂತ ನೆಚ್ಚಿನ ವಿಕೆಟ್​ ಯಾರು?.. ಸಿರಾಜ್​ ಹೇಳಿದ್ದು ಹೀಗೆ..! - ಬಾರ್ಡರ್ ಗವಾಸ್ಕರ್ ಟ್ರೋಫಿ

ಟೂರ್ನಿಯಲ್ಲಿ ಅಷ್ಟೂ ವಿಕೆಟ್​ಗಳಲ್ಲಿ ಮಾರ್ನಸ್​ ಲಾಬುಶೇನ್​ ನನ್ನ ನೆಚ್ಚಿನದ್ದಾಗಿದೆ. ಏಕೆಂದರೆ ಅದು ತಂಡಕ್ಕೆ ಅನಿವಾರ್ಯವಾಗಿದ್ದ ಸಂದರ್ಭದಲ್ಲಿ ಬಂದಿತ್ತು ಎಂದು ಮೊಹಮ್ಮದ್ ಸಮಿ​ ಬದಲು ತಂಡ ಸೇರಿಕೊಂಡಿದ್ದ ಸಿರಾಜ್ ಹೇಳಿದ್ದಾರೆ.

ಮೊಹಮ್ಮದ್ ಸಿರಾಜ್​
ಮೊಹಮ್ಮದ್ ಸಿರಾಜ್​
author img

By

Published : Jan 21, 2021, 7:21 PM IST

ಹೈದರಾಬಾದ್​: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲು ಈ ಹಿಂದೆ ಕೈಗೊಂಡಿದ್ದ ಇಂಡಿಯಾ ಎ ತಂಡದ ಪ್ರವಾಸಗಳು ತುಂಬಾ ನೆರವಾದವು ಎಂದು ಮೊಹಮ್ಮದ್ ಸಿರಾಜ್ ತಿಳಿಸದ್ದಾರೆ. ಜೊತೆಗೆ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್​ಮನ್ ಆಗಿರುವ ಮಾರ್ನಸ್ ಲಾಬುಶೇನ್ ತಮ್ಮ ನೆಚ್ಚಿನ ವಿಕೆಟ್​ ಎಂದು ತಿಳಿಸಿದ್ದಾರೆ.

ಟೂರ್ನಿಯಲ್ಲಿ ಅಷ್ಟೂ ವಿಕೆಟ್​ಗಳಲ್ಲಿ ಮಾರ್ನಸ್​ ಲಾಬುಶೇನ್​ ನನ್ನ ನೆಚ್ಚಿನದ್ದಾಗಿದೆ. ಏಕೆಂದರೆ ಅದು ತಂಡಕ್ಕೆ ಅನಿವಾರ್ಯವಾಗಿದ್ದ ಸಂದರ್ಭದಲ್ಲಿ ಬಂದಿತ್ತು ಎಂದು ಮೊಹಮ್ಮದ್ ಸಮಿ​ ಬದಲು ತಂಡ ಸೇರಿಕೊಂಡಿದ್ದ ಸಿರಾಜ್ ಹೇಳಿದ್ದಾರೆ.

ಬ್ರಿಸ್ಬೇನ್​ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಸಿರಾಜ್,​ ಅದ್ಭುತ ಫಾರ್ಮ್​ನಲ್ಲಿದ್ದ ಲಾಬುಶೇನ್ 25 ರನ್​ಗಳಿಸಿದ್ದ ವೇಳೆ ಔಟ್​ ಮಾಡಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಅವರ ವಿಕೆಟ್​ ತಂಡಕ್ಕೆ ಅಗತ್ಯವಿತ್ತು. ಸಿರಾಜ್ ಕೊನೆಗೂ ಲಾಬುಶೇನ್​ ಜೊತೆಗೆ ಸ್ಟೀವ್​ ಸ್ಮಿತ್​ ವಿಕೆಟ್​ ಪಡೆದು ಭಾರತದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.

ಇನ್ನು ಗಾಯದಿಂದ ಮರಳಿದ್ದ ಡೇವಿಡ್​ ವಾರ್ನರ್​ರನ್ನು ಬ್ರಿಸ್ಬೇನ್​ನಲ್ಲಿ ಮತ್ತು ಸಿಡ್ನಿಯಲ್ಲಿ ಸಿರಾಜ್​ ಆರಂಭದ ಓವರ್​ಗಳಲ್ಲೇ ಪೆವಿಲಿಯನ್​ಗಟ್ಟಿದ್ದರು. ಆದರೆ ಇದರಲ್ಲಿ ವಿಶೇಷ ಯೋಜನೆ ಏನಿರಲಿಲ್ಲ ಎಂದು ತಿಳಿಸಿದ್ದಾರೆ.

ಮೊಹಮ್ಮದ್ ಸಿರಾಜ್

"ಡೇವಿಡ್ ವಾರ್ನರ್​ ವಿರುದ್ಧ ವಿಶೇಷವಾದ ಯೋಜನೆಯೇನು ಹೊಂದಿರಲಿಲ್ಲ. ಅವರಿಗೆ ಐಪಿಎಲ್​ ವೇಳೆ ಪ್ರಯೋಗಿಸಿದ್ದ ಇನ್​ಸ್ವಿಂಗ್​ ಎಸೆತಗಳನ್ನು ಬಳಸಿದೆ. ಅಲ್ಲಿ ಚೆಂಡು ಸ್ವಿಂಗ್​ ಆಗಿ ಹೊರ ಹೋಗುತ್ತಿರುವುದನ್ನು ಅವರು ಆಡುತ್ತಾರೆಂದು ತಿಳಿದಿದ್ದರಿಂದ, ಟೆಸ್ಟ್​ ಪಂದ್ಯಗಳಲ್ಲೂ ಅದನ್ನೇ ಪುನರಾವರ್ತಿಸಿದೆ." ಎಂದು ಸಿರಾಜ್ ಹೇಳಿದ್ದಾರೆ.

ಆಸೀಸ್​ ಪ್ರವಾಸದಲ್ಲಿ ಯಶಸ್ವಿಯಾಗಲು ಹೇಗೆ ಸಾಧ್ಯವಾಯಿತು ಎಂದು ಕೇಳಿದ್ದಕ್ಕೆ, ಇಡೀ ತಂಡ ನನ್ನ ಮೇಲೆ ಅಪಾರ ನಂಬಿಕೆ ತೋರಿಸಿತ್ತು. ಒತ್ತಡದಲ್ಲಿದ್ದಾಗ ನನ್ನ ಮೇಲೆ ನಾನು ನಂಬಿಕೆಯಿಟ್ಟಿದ್ದೆ. ತಂಡದಲ್ಲಿ ಹಲವಾರು ಗಾಯಗಳಾಗಿದ್ದರಿಂದ ನನ್ನನ್ನೇ ಬೌಲಿಂಗ್ ವಿಭಾಗದ ನಾಯಕ ಎಂದು ಎಲ್ಲರೂ ಹೇಳಿದ್ದರು. ಈ ಜವಾಬ್ದಾರಿ ನನ್ನನ್ನು ಉತ್ತಮ ಪ್ರದರ್ಶನ ತೋರುವಂತೆ ಮಾಡಿತು ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೌಲಿಂಗ್ ಯಶಸ್ವಿಯಾಗಲೂ ಈ ಹಿಂದೆ ಎ ತಂಡದಲ್ಲಿ ಆಡಿದ್ದು ಬಹಳ ನೆರವಾಯಿತು. ನಾನು ಈ ಪ್ರವಾಸದಲ್ಲಿ ಎ ತಂಡಕ್ಕಾಗಿ ಆಡುತ್ತಿದ್ದೇನೆ ಎಂದೇ ಭಾವಿಸಿದ್ದೆ. ಏಕೆಂದರೆ ಭಾರತ ಸೀನಿಯರ್ ತಂಡಕ್ಕೆ ಆಡುತ್ತಿದ್ದೇನೆ ಎಂದು ಆಲೋಚಿಸಿದರೆ ನಾನು ಖಂಡಿತ ಒತ್ತಡಕ್ಕೆ ಒಳಗಾಗುತ್ತಿದ್ದೆ ಎಂದು 26 ವರ್ಷದ ಬೌಲರ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.