ETV Bharat / sports

ಎಂಎಸ್​ ಧೋನಿ ಹೆಸರಿನಲ್ಲಿರುವ ಅಪರೂಪದ ವಿಶ್ವದಾಖಲೆಗಳು - ಎಂಎಸ್​ ಧೋನಿ ನಾಯಕನಾಗಿ ದಾಖಲೆಗಳು

ಭಾರತ ಕ್ರಿಕೆಟ್​ಅನ್ನು ವಿಶ್ವಮಟ್ಟದಲ್ಲಿ ಮೊದಲ ಸ್ಥಾನಕ್ಕೇರಿಸಿದ ಕೀರ್ತಿ ಹೊಂದಿರುವ ಧೋನಿ ಒಬ್ಬ ನಾಯಕನಾಗಿ, ವಿಕೆಟ್​ ಕೀಪರ್​ ಆಗಿ, ಒಬ್ಬ ಆಟಗಾರನಾಗಿ ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಇದರಲ್ಲಿ ಬಹುಪಾಲು ದಾಖಲೆಗಳು ಭವಿಷ್ಯದಲ್ಲೂ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಆ ದಾಖಲೆಗಳು ಈ ಸುದ್ದಿಯಲ್ಲಿವೆ.

ಎಂಎಸ್​ ಧೋನಿ ವಿದಾಯ
ಎಂಎಸ್​ ಧೋನಿ ವಿದಾಯ
author img

By

Published : Aug 16, 2020, 2:00 PM IST

Updated : Aug 17, 2020, 8:10 AM IST

ಮುಂಬೈ: ಕೂಲ್​ ಕ್ಯಾಪ್ಟನ್​, ಗೇಮ್​ ಫಿನಿಶರ್​, ಕ್ರಿಕೆಟ್​ ಚಾಣಕ್ಯ ಹೀಗೆಲ್ಲಾ ಕರೆಸಿಕೊಂಡಿದ್ದ ಎಂಎಸ್​ ಧೋನಿ ಇನ್ಮುಂದೆ ನೀಲಿ ಜರ್ಸಿಯಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳವುದಿಲ್ಲ ಎಂಬುದನ್ನು ನೆನೆಸಿಕೊಂಡರೆ ನಿಜಕ್ಕೂ ಅಭಿಮಾನಿಗಳ ಮನಸ್ಸು ಭಾರವಾಗುವುದಲ್ಲಿ ಸಂಶಯವಿಲ್ಲ.

ಭಾರತ ಕ್ರಿಕೆಟ್​ಅನ್ನು ವಿಶ್ವಮಟ್ಟದಲ್ಲಿ ಮೊದಲ ಸ್ಥಾನಕ್ಕೇರಿಸಿದ ಕೀರ್ತಿ ಹೊಂದಿರುವ ಧೋನಿ ಒಬ್ಬ ನಾಯಕನಾಗಿ, ವಿಕೆಟ್​ ಕೀಪರ್​ ಆಗಿ, ಒಬ್ಬ ಆಟಗಾರನಾಗಿ ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಇದರಲ್ಲಿ ಬಹುಪಾಲು ದಾಖಲೆಗಳು ಭವಿಷ್ಯದಲ್ಲೂ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಎಂಎಸ್​ಡಿ ಅವರ ಸಾರ್ವಕಾಲಿಕ ದಾಖಲೆಗಳು ಹೀಗಿವೆ.

ಏಕದಿನ ಕ್ರಿಕೆಟ್​ನಲ್ಲಿ 50+ ಸರಾಸರಿ

ಎಂಎಸ್​ ಧೋನಿ ಏಕದಿನ ಕ್ರಿಕೆಟ್​ನಲ್ಲಿ 350 ಪಂದ್ಯಗಳನ್ನಾಡಿದ್ದಾರೆ. ಅವರು 50ಕ್ಕು ಹೆಚ್ಚಿನ ಸರಾಸರಿಯಲ್ಲಿ 10 ಸಾವಿರ ರನ್​ಗಳಿಸಿದ ಬ್ಯಾಟ್ಸ್​ಮನ್​ ಆಗಿದ್ದಾರೆ. ವಿರಾಟ್​ ಕೊಹ್ಲಿ ಮೊದಲಿರುವ ವೇಗವಾಗಿ ಈ ಸಾಧನೆ ಮಾಡಿದ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಧೋನಿ 273 ಇನ್ನಿಂಗ್ಸ್​ಗಳಲ್ಲಿ 10 ಸಾವಿರ ರನ್​ ಪೂರೈಸಿದ್ದರು.

2004ರಿಂದ ಧೋನಿ 50.57ರ ಸರಾಸರಿಯಲ್ಲಿ 10773 ರನ್​ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಮೊದಲ 59.33 ಸರಾಸರಿ ಹೊಂದಿದ್ದು ಮೊದಲ ಸ್ಥಾನದಲ್ಲಿದ್ದಾರೆ.

2009ರಲ್ಲಿ ಟೆಸ್ಟ್​ ಚಾಂಪಿಯನ್​ ಮೇಸ್​
2009ರಲ್ಲಿ ಟೆಸ್ಟ್​ ಚಾಂಪಿಯನ್​ ಮೇಸ್​

ಅತಿಹೆಚ್ಚು ಟಿ20 ಗೆಲುವು ಪಡೆದ ನಾಯಕ

ಕ್ರಿಕೆಟ್​ನಲ್ಲಿ ಹಲವು ಬದಲಾವಣೆಗೆ ಕಾರಣನಾಗಿರುವ ಧೋನಿ, 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದರು. 25 ನೇ ವಯಸ್ಸಿಗೆ ನಾಯಕನಾದ ರಾಂಚಿ ಹುಡುಗ 1983ರ ನಂತರ ಭಾರತಕ್ಕೆ ಮೊದಲ ಐಸಿಸಿ ಟ್ರೋಫಿ ತಂದುಕೊಟ್ಟರು. ಧೋನಿ 2007ರಿಂದ 2017ರವರೆಗೆ 72 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 41 ಗೆಲುವು ಪಡೆದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

ಐಪಿಎಲ್​ನ ಯಶಸ್ವಿ ನಾಯಕ

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ನ ನಾಯಕ ರೋಹಿತ್​ ಶರ್ಮಾ 4 ಬಾರಿ ಟ್ರೋಫಿ ಗೆಲ್ಲಿಸಿಕೊಡುವ ಮೂಲಕ ಯಶಸ್ವಿನಾಯಕನಾಗಿರಬಹುದು. ಆದರೆ ಐಪಿಎಲ್​ ನಲ್ಲಿ ಹೆಚ್ಚು ಬಾರಿ ಫೈನಲ್(9)​ ಪ್ರವೇಶಿಸಿರುವ ಹಾಗೂ ಅತಿ ಹೆಚ್ಚು ಪಂದ್ಯಗಳಲ್ಲಿ ಗೆಲುವು ಪಡೆದಿರುವ ದಾಖಲೆ ಧೋನಿ ಹೆಸರಿನಲ್ಲಿದೆ. 2008ರಿಂದ 2019ರವರೆಗೆ ಧೋನಿ 66 ಗೆಲುವಿನ ಸರಾಸರಿಯಲ್ಲಿ 104 ಪಂದ್ಯಗಳನ್ನು ಗೆಲ್ಲಿಸಿಕೊಂಟ್ಟಿದ್ದಾರೆ. ಐಪಿಎಲ್​ನಲ್ಲಿ 100 ಗೆಲುವು ಪಡೆದ ಮೊದಲ ನಾಯಕ ಕೂಡ ಆಗಿದ್ದಾರೆ.

ಐಪಿಎಲ್​ನಲ್ಲಿ ಎಂಎಸ್​ ಧೋನಿ
ಐಪಿಎಲ್​ನಲ್ಲಿ ಎಂಎಸ್​ ಧೋನಿ

3 ಐಸಿಸಿ ಟ್ರೋಪಿಗಳ ವಿನ್ನರ್​

ವಿಶ್ವದಲ್ಲಿ ಐಸಿಸಿ ಆಯೋಜಿಸಿರುವ ಎಲ್ಲಾ ಟ್ರೋಫಿಗಳನ್ನು ಗೆದ್ದಿರುವ ಏಕೈಕ ನಾಯಕ ಎಂಎಸ್​ ಧೋನಿಯಾಗಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಹಾಗೂ 2013ರಲ್ಲಿ ಚಾಂಪಿಯನ್​ ಟ್ರೋಫಿಯನ್ನು ನಾಯಕನಾಗಿ ಭಾರತದ ಮುಡಿಗೇರಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ನಂಬರ್​ 1 ಸ್ಥಾನಕ್ಕೇರಿಸಿದ ಮೊದಲ ಭಾರತೀಯ ನಾಯಕ

ಧೋನಿ 2009ರಲ್ಲಿ ಟೆಸ್ಟ್​ ಕ್ರಿಕೆಟ್​ನ ನಾಯಕತ್ವ ವಹಿಸಿಕೊಂಡಿದ್ದರು. 2014-15ರಲ್ಲೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಧೋನಿ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಮೊದಲ ಬಾರಿಗೆ ವಿಶ್ವ ಟೆಸ್ಟ್​ ಚಾಂಪಿಯನ್​​ ಮೇಸ್​ ತಂದುಕೊಟ್ಟಿದ್ದು ಧೋನಿ ನಾಯಕತ್ವ. ಧೋನಿ 60 ಟೆಸ್ಟ್​ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 27 ಗೆಲುವು ಹಾಗೂ 18 ಸೋಲು ಕಂಡಿದ್ದಾರೆ.

ಕಡಿಮೆ ಇನ್ನಿಂಗ್ಸ್​ನಲ್ಲಿ ನಂಬರ್​ 1 ಶ್ರೇಯಾಂಕ ಪಡೆದ ಬ್ಯಾಟ್ಸ್​ಮನ್​

ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ನಂಬರ್​ ಒನ್​ ಬ್ಯಾಟ್ಸ್​ಮನ್​ ಆಗಿರುವ ದಾಖಲೆ ಇನ್ನು ಧೋನಿ ಹೆಸರಿನಲ್ಲಿಯೇ ಇದೆ. ಧೋನಿ ಪದಾರ್ಪಣೆ ಮಾಡಿ 48 ಇನ್ನಿಂಗ್ಸ್​ಗಳಲ್ಲೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆದಿದ್ದರು. ಇಷ್ಟು ವರ್ಷಗಳಾದರೂ ಅದು ಧೋನಿ ಹೆಸರಿನಲ್ಲಿಯೇ ಇದೆ.

2007ರ ಟಿ20 ವಿಶ್ವಕಪ್​
2007ರ ಟಿ20 ವಿಶ್ವಕಪ್​

ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚಿನ ನಾಟ್ ಔಟ್

ಎಂಎಸ್ ಧೋನಿ 84 ಏಕದಿನ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ, ಇದು ಅವರ ಮತ್ತೊದು ವಿಶ್ವ ದಾಖಲೆಯಾಗಿದೆ. ಎರಡನೆಯದು ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಶಾನ್ ಪೊಲಾಕ್ ಅವರ ಹೆಸರಿಗೆ 72 ನಾಟ್ ಔಟ್ ಆಗಿದ್ದಾರೆ. 84 ಬಾರಿ ಧೋನಿ ಏಕದಿನ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಇನ್ನು ಚೇಸಿಂಗ್​ನಲ್ಲಿ 51 ನಾಟೌಟ್​ ಆಗಿ ಉಳಿದಿದ್ದು, ಇದರಲ್ಲಿ 47 ಪಂದ್ಯಗಳಲ್ಲಿ ಭಾರತ ಗೆದ್ದಿದೆ ಎನ್ನುವುದು ವಿಶೇಷ. ಎರಡು ಪಂದ್ಯಗಳು ಡ್ರಾಗೊಂಡಿದ್ದರೆ, ಉಳಿದ ಎರಡು ಪಂದ್ಯಗಳಲ್ಲಿ ಭಾರತ ಸೋಲುಕಂಡಿದೆ.

2009ರಲ್ಲಿ ಟೆಸ್ಟ್​ ಚಾಂಪಿಯನ್​ ಮೇಸ್​
2009ರಲ್ಲಿ ಟೆಸ್ಟ್​ ಚಾಂಪಿಯನ್​ ಮೇಸ್​

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಸ್ಟಂಪಿಂಗ್(195)

ಧೋನಿ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಸ್ಟಂಪಿಂಗ್‌ಗಳನ್ನು ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ 120 ಸ್ಟಂಪಿಂಗ್ ಟೆಸ್ಟ್​ಕ್ರಿಕೆಟ್​ನಲ್ಲಿ 38 ಹಾಗೂ ಟಿ20ನಲ್ಲಿ 34 ಸ್ಟಂಪಿಂಗ್​ ಮಾಡಿದ್ದಾರೆ. ಒಟ್ಟಾರೆ ಹೆಚ್ಚು ಬಲಿ ಪಡೆದ ದಾಖಲೆಯಲ್ಲಿ ಧೋನಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಮತ್ತು ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ನಂತರದ ಸ್ಥಾನದಲ್ಲಿದ್ದಾರೆ.

ಧೋನಿ ಹೆಸರಿನಲ್ಲಿರುವ ಇತರೆ ದಾಖಲೆಗಳು:

ಎಂಎಸ್​ ಧೋನಿ
ಎಂಎಸ್​ ಧೋನಿ
  • ಏಕದಿನ ಕ್ರಿಕೆಟ್‌ನಲ್ಲಿ 5ನೇ ಮತ್ತು ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ (8324 ರನ್).
  • 20 ಬಾರಿ ಸಿಕ್ಸರ್‌ ಬಾರಿಸಿ ಪಂದ್ಯ ಗೆದ್ದುಕಟ್ಟ ಕೀರ್ತಿ
  • 7ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ(2)
  • 6ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್​(4031 ರನ್​)
  • 5 ವಿಭಿನ್ನ ಕ್ರಮಾಂದಲ್ಲಿ ಬ್ಯಾಟಿಂಗ್​ ನಡೆಸಿ ಅರ್ಧಶತಕ ಬಾರಿಸಿರುವ ಏಕೈಕ ಬ್ಯಾಟ್ಸ್​ಮನ್​

Last Updated : Aug 17, 2020, 8:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.