ಮುಂಬೈ: ಭಾನುವಾರ ರಾತ್ರಿ ವೇಳೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಂಡವನ್ನು ಗೆಲ್ಲಿಸಿದ್ದ ಕನ್ನಡಿಗ ಮನೀಷ್ ಪಾಂಡೆ ಇಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉದಯೋನ್ಮುಖ ಆಟಗಾರ ಮನೀಷ್ ಪಾಂಡೆ ನಟಿ ಆಶ್ರಿತಾ ಶೆಟ್ಟಿಯನ್ನು ವರಿಸಿದ್ದಾರೆ.
ತುಳುವಿನ ತೆಲಿಕೆದ ಬೊಳ್ಳಿ(2012) ಸಿನಿಮಾದ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಆಶ್ರಿತಾ ನಂತರದಲ್ಲಿ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ನಟನೆಯ ಉದಯಂ ಎನ್ಹೆಚ್4, ಒರು ಕನ್ನಿಯುಂ ಮೂನು ಕಲಾವನಿಕಳುಂ, ಇಂದ್ರಜಿತ್ ಹಾಗೂ ನಾನ್ ದಾನ್ ಶಿವ ಚಿತ್ರಗಳಲ್ಲಿ ನಟಿಸಿದ್ದಾರೆ.
ಟೀಂ ಇಂಡಿಯಾದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೆಲ ಪಂದ್ಯಗಳನ್ನು ಆಡಿರುವ ಮನೀಷ್ ಪಾಂಡೆ ಸದ್ಯ ದೇಶೀಯ ಕ್ರಿಕೆಟ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿ ಗೆಲುವಿನ ಮರುದಿನವೇ ವಿವಾಹಕ್ಕೊಳಗಾಗಿದ್ದು, ಡಬಲ್ ಸಂಭ್ರಮದಲ್ಲಿದ್ದಾರೆ.