ಮುಂಬೈ: ಭಾರತ ತಂಡದಲ್ಲಿ ಕಳೆದ 4 ವರ್ಷಗಳಿಂದ ಹೆಚ್ಚು ತಲೆನೋವಾಗಿರುವುದು ನಾಲ್ಕನೇ ಕ್ರಮಾಂಕ. ಈ ಕ್ರಮಾಂಕ್ಕೆ 10 ಕ್ಕೂ ಹೆಚ್ಚು ಆಟಗಾರರನ್ನೂ ಬದಲಾಯಿಸಲಾಯಿತು. ಆದರೆ ಇಲ್ಲಿ ಕಡಿಮೆ ಅವಕಾಶ ನೀಡದೆ ತಂಡದಿಂದ ಹೊರದೂಡಲ್ಪಟ್ಟವರಲ್ಲಿ ಮನೀಷ್ ಪಾಂಡ್ಯ ಕೂ ಒಬ್ಬರು.
ಮನೀಷ್ ಪಾಂಡೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಲಿಸ್ಟ್ ಎ ಕ್ರಿಕೆಟ್ನಲ್ಲಿ 4504 ರನ್ಗಳಿಸಿದ್ದಾರೆ . ಇದರಲ್ಲಿ 9 ಶತಕ 29 ಅರ್ಧಶತಕ ಸೇರಿದೆ. ಇವರ ಬ್ಯಾಟಿಂಗ್ ಸರಾಸರಿ 43,31 ಇದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವಕಾಶ ಸಿಕ್ಕಿದ್ದು ಮಾತ್ರ 3 ವರ್ಷಗಳಲ್ಲಿ 23 ಪಂದ್ಯದಲ್ಲಿ ಮಾತ್ರ. ಅದರಲ್ಲಿ ಬ್ಯಾಟಿಂಗ್ ಸಿಕ್ಕಿದ್ದು 18 ಇನ್ನಿಂಗ್ಸ್ನಲ್ಲಿ. ದುರಂತವೆಂದರೆ ಇದರಲ್ಲೂ ಇನ್ನಿಂಗ್ಸ್ ಮುಕ್ತಾಯದ ಕೊನೆಯಲ್ಲಿ ಮನೀಷ್ಗೆ ಬ್ಯಾಟಿಂಗ್ ಬಂದಿರುವುದೇ ಹೆಚ್ಚು.
ಆದರೆ ಸಿಕ್ಕ ಕೆಲವು ಅವಕಾಶಗಳಲ್ಲಿ ಮನೀಷ್ ಉತ್ತಮವಾಗಿ ಆಡಿದ್ದಾರೆ. 4ನೇ ಕ್ರಮಾಂಕದಲ್ಲಿ ವಿದೇಶದಲ್ಲಿ ಶತಕ ಸಿಡಿಸಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಯೂ ಮನೀಷ್ ಹೆಸರಿನಲ್ಲಿದೆ. ಆದರೆ ಮನೀಷ್ರನ್ನು ಆಯ್ಕೆ ಮಾಡಿರುವ ಸರಣಿಗಳಲ್ಲಿ ಬೆಂಚ್ ಕಾಯ್ದಿರುವುದೇ ಹೆಚ್ಚು. ಒಂದು ವೇಳೆ ಅವಕಾಶ ಸಿಕ್ಕಿದೆ ಎಂಬುವುದನ್ನು ಪರಿಗಣನೆಗೆ ತೆಗೆದುಕೊಂಡರೆ, ಆ ಸರಣಿಯನ್ನು ಭಾರತ ಗೆದ್ದನಂತರ ಔಪಚಾರಿಕ ಎಂದೆನಿಸುವ ಪಂದ್ಯಗಳಲ್ಲಿ ಮಾತ್ರ ಮನೀಷ್ಗೆ ಆಡುವ 11 ರಲ್ಲಿ ಬ್ಯಾಟಿಂಗ್ ಸಿಕ್ಕಿದೆ. ಅದರಲ್ಲಿ ಮನೀಷ್ ಅಲ್ಪ ಮೊತ್ತಕ್ಕೆ ಔಟಾಗಿರುವುದನ್ನು ಮಾತ್ರ ಆಯ್ಕೆ ಸಮಿತಿ ಪರಿಗಣನೆಗೆ ತೆಗೆದುಕೊಂಡಿದೆ.
ಮನೀಷ್ ಬ್ಯಾಟಿಂಗ್ ನಡೆಸಿರುವ 18 ಇನ್ನಿಂಗ್ಸ್ನಲ್ಲಿ 6 ಬಾರಿ ನಾಟೌಟ್ ಆಗಿದ್ದಾರೆ. ವೃತ್ತಿ ಜೀವನದಲ್ಲಿ ಬಾರಿಸಿರುವ ಎರಡು ಅರ್ಧಶತಕ ಹಾಗೂ ಒಂದು ಶತಕ ಕೂಡ ವಿದೇಶಗಳಲ್ಲಿ ನಡೆದ ಟೂರ್ನಿಯಲ್ಲಿ ಬಂದಿವೆ.
ಈಗಾಗಲೆ ಭಾರತ ತಂಡದಿಂದ ಹೊರಬಿದ್ದ ಮೇಲೆ ಭಾರತ ಎ ತಂಡದ ನಾಯಕತ್ವ ವಹಿಸಿಕೊಂಡಿರುವ ಮನೀಷ್ ಪಾಂಡೆ ಅದ್ಭುತ ಪಾರ್ಮ್ನಲ್ಲಿದ್ದು ಕಳೆದ ವರ್ಷ ನ್ಯೂಜಿಲ್ಯಾಂಡ್ ಎ ವಿರುದ್ಧ, ಆಸ್ಟ್ರೇಲಿಯಾ ಎ, ದಕ್ಷಿಣ ಆಫ್ರಿಕಾ ಎ ತಂಡಗಳನ್ನೊಳಗೊಂಡ ಚತುಷ್ಕೋನ ಏಕದಿನ ಸರಣಿ ಹಾಗೂ ಇದೀಗ ವಿಂಡೀಸ್ ಎ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಂದು ಸರಣಿಯಲ್ಲೂ ಪಾಂಡೆ ಶತಕ ದಾಖಲಿಸುತ್ತಿದ್ದಾರೆ. ಜೊತೆಗೆ ಕಳೆದ ಐಪಿಎಲ್ನಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿರುವ ಪಾಂಡೆ 4ನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರ ಎಂಬುವುದರಲ್ಲಿ ಎರಡು ಮಾತಿಲ್ಲ.
ಇದೀಗ ಧೋನಿ ನಿವೃತ್ತಿ ಹೊಂದುವ ಸಾಧ್ಯತೆಯಿದ್ದು ಮನೀಷ್ ಪಾಂಡೆಯಂತಹ ಅನುಭವಿ ಆಟಗಾರನನ್ನು ಮಧ್ಯಮ ಕ್ರಮಾಂಕಕ್ಕೆ ಸೇರ್ಪಡೆಗೊಂಡರೆ ನಿಜಕ್ಕೂ ಭಾರತ ತಂಡ ಬಲಿಷ್ಠವಾಗಲಿದೆ.