ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರ ಆಡಿದ ತಮ್ಮ ಮೊದಲ ಪಂದ್ಯದಲ್ಲೇ ಮನೀಷ್ ಪಾಂಡೆ ಸೊಗಸಾದ ಶತಕ ಸಿಡಿಸಿದ್ರು.
ಬುಧವಾರ ಬೆಂಗಳೂರಿನಲ್ಲಿ ನಡೆದ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲೇ ಸೆಂಚುರಿ ದಾಖಲಿಸಿದ್ದಾರೆ. ನಾಲ್ಕನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಪಾಂಡೆ ಮೊದಲು ನಿಧಾನಗತಿ ಆಟಕ್ಕೆ ಮೊರೆ ಹೋದರು. ಇನ್ನಿಂಗ್ಸ್ ಮೊದಲ 13 ಓವರ್‌ಗಳಲ್ಲಿ ಕೇವಲ 74 ರನ್ ಗಳಿಸಿದ್ದ ಬೆಳಗಾವಿ ತಂಡ ನಂತರ ಪಾಂಡೆಯ ಆಬ್ಬರದ ಬ್ಯಾಟಿಂಗ್ ನೆರವಿನಿಂದ ಕೊನೆಯ 7 ಓವರ್‌ಗಳಲ್ಲಿ 106 ರನ್ ಕಲೆ ಹಾಕಿತು.
50 ಎಸೆತಗಳನ್ನೆದುರಿಸಿದ ಪಾಂಡೆ ಆಕರ್ಷಕ 7 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 102 ರನ್ಗಳಿಸಿ ಔಟಾಗದೆ ಉಳಿದರು.
ಆದರೆ 181 ರನ್ಗಳ ಗುರಿ ಬೆನ್ನತ್ತಿದ ವಿನಯ್ ಕುಮಾರ್ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ತಂಡ, ಇನ್ನೂ ಒಂದು ಎಸೆತ ಬಾಕಿ ಇರುವಂತೆ 181 ರನ್ಗಳಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.
ಪ್ರವೀಣ್ ದುಬೆ 18 ಎಸೆತಗಳಲ್ಲಿ 33, ಆರಂಭಿಕ ಬ್ಯಾಟ್ಸ್ಮನ್ ಮೊಹಮ್ಮದ್ ತಾಹ ಅವರ 75 ರನ್ಗಳ ನೆರವಿನಿಂದ ಜಯ ಸಾಧಿಸಿದ ಹುಬ್ಬಳ್ಳಿ, ಮನೀಷ್ ಏಕಾಂಗಿ ಹೋರಾಟವನ್ನು ವ್ಯರ್ಥಗೊಳಿಸಿತು.