ಮ್ಯಾಂಚೆಸ್ಟರ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನದಾಟವು ಮಳೆಗೆ ಆಹುತಿಯಾಗಿದೆ.
-
Official: Play abandoned here at Emirates Old Trafford on Day 3.
— England Cricket (@englandcricket) July 18, 2020 " class="align-text-top noRightClick twitterSection" data="
We will come back tomorrow hoping for better weather.
Scorecard/Clips: https://t.co/CApAX5n8pG#ENGvWI pic.twitter.com/ggx6JYsLpO
">Official: Play abandoned here at Emirates Old Trafford on Day 3.
— England Cricket (@englandcricket) July 18, 2020
We will come back tomorrow hoping for better weather.
Scorecard/Clips: https://t.co/CApAX5n8pG#ENGvWI pic.twitter.com/ggx6JYsLpOOfficial: Play abandoned here at Emirates Old Trafford on Day 3.
— England Cricket (@englandcricket) July 18, 2020
We will come back tomorrow hoping for better weather.
Scorecard/Clips: https://t.co/CApAX5n8pG#ENGvWI pic.twitter.com/ggx6JYsLpO
ಮ್ಯಾಂಚೆಸ್ಟರ್ನಲ್ಲಿ ಶನಿವಾರ ಸುರಿದ ನಿರಂತರ ಮಳೆ ಹಿನ್ನೆಲೆ ಒಂದೂ ಎಸೆತಗಳಿಲ್ಲದೆ ಮೂರನೇ ದಿನ ಕೊನೆಗೊಂಡಿದೆ. ಮೊದಲ ಇನ್ನಿಂಗ್ಸ್ ಬೃಹತ್ ಮೊತ್ತ ಗಳಿಸಿದ್ದರಿಂದ, ವಿಂಡೀಸ್ ತಂಡವನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದ ಅತಿಥೇಯ ಇಂಗ್ಲೆಂಡ್ಗೆ ವರುಣ ಅಡ್ಡಿಪಡಿಸಿದ್ದಾನೆ. ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವತ್ತ ಚಿತ್ತಹರಿಸಿರುವ ಆಂಗ್ಲರಿಗೆ ನಿರಾಸೆ ಉಂಟಾಯಿತು.
ಸ್ಟೋಕ್ಸ್, ಡೊಮಿನಿಕ್ ಭರ್ಜರಿ ಶತಕ: ಇಂಗ್ಲೆಂಡ್ ಬೃಹತ್ ಮೊತ್ತ, ವಿಂಡೀಸ್ಗೆ ಆರಂಭಿಕ ಆಘಾತ!
ಡೊಮಿನಿಕ್ ಸಿಬ್ಲಿ (120) ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ (176) ಅವರ ಭರ್ಜರಿ ಶತಕಗಳ ನೆರವಿನಿಂದ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ನಲ್ಲಿ 459 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಅಲ್ಲದೆ ಎರಡನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ನ ಒಂದು ವಿಕೆಟ್ ಉರುಳಿಸಿ, ಮೂರನೇ ದಿನ ಪಂದ್ಯದ ಮೇಲೆ ಇನ್ನಷ್ಟು ಹಿಡಿತ ಸಾಧಿಸುವ ಯೋಜನೆ ಆಂಗ್ಲರದ್ದಾಗಿತ್ತು.
ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆಯಲ್ಲಿರುವ ಆಂಗ್ಲರಿಗೆ ಈ ಪಂದ್ಯ ಮಹತ್ವದ್ದಾಗಿದೆ. ಈ ಪಂದ್ಯ ಡ್ರಾ ಆದರೆ, ಸರಣಿ ಸಮಬಲ ಸಾಧಿಸುವುದಕ್ಕಾದರೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಪಡೆಗೆ ಗೆಲುವು ಸಾಧಿಸುವುದು ಅನಿವಾರ್ಯವಾಗಲಿದೆ.