ETV Bharat / sports

ಭಾರತೀಯ ಪಿಚ್ ಮತ್ತು ಪಿಂಕ್ ಬಾಲ್ ಬಳಕೆ... ಅಹರ್ನಿಶಿ ಟೆಸ್ಟ್ ಪಂದ್ಯದ ಮುಂದಿದೆ ಭಾರಿ ಸವಾಲು - ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಯೋಜನೆ

ಭಾರತದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅತ್ಯಂತ ಉತ್ಸುಕರಾಗಿದ್ದರೂ ಪ್ರಾಯೋಗಿಕವಾಗಿ ಒಂದಷ್ಟು ಸಮಸ್ಯೆಗಳಿವೆ.

ಅಹರ್ನಿಶಿ ಟೆಸ್ಟ್ ಪಂದ್ಯ
author img

By

Published : Oct 29, 2019, 1:03 PM IST

ನವದೆಹಲಿ: ಬಿಸಿಸಿಐ ಅಧ್ಯಕ್ಷ ಗಾದಿಗೇರಿದ ಬಳಿಕ ಭಾರಿ ಬದಲಾವಣೆಗೆ ಮುಂದಾಗಿರುವ ದಾದಾ ಸೌರವ್ ಗಂಗೂಲಿ ಆರಂಭದಲ್ಲೇ ಅಹರ್ನಿಶಿ ಟೆಸ್ಟ್ ಪಂದ್ಯ ಆಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ ಎನ್ನಲಾಗಿದ್ದು, ಈ ಬಗ್ಗೆ ಬಿಸಿಸಿಐ ಬಾಂಗ್ಲಾ ಬೋರ್ಡ್​ಗೆ ಮನವಿ ಮಾಡಿಕೊಂಡಿದೆ. ಬಾಂಗ್ಲಾ ಕ್ರಿಕೆಟ್ ಬೋರ್ಡ್​ ಗ್ರೀನ್ ಸಿಗ್ನಲ್ ನೀಡಿದಲ್ಲಿ ಟೀಂ ಇಂಡಿಯಾ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಭಾರತದ ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ಆಡಲಿದೆ.

ಅಹರ್ನಿಶಿ ಟೆಸ್ಟ್ ಮತ್ತು ಪಿಂಕ್ ಬಾಲ್ ಸಮಸ್ಯೆ:

ಭಾರತದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅತ್ಯಂತ ಉತ್ಸುಕರಾಗಿದ್ದರೂ ಪ್ರಾಯೋಗಿಕವಾಗಿ ಒಂದಷ್ಟು ಸಮಸ್ಯೆಗಳಿವೆ.

ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಪಿಂಕ್​ ಬಾಲ್​ ಬಳಕೆ ಅನಿವಾರ್ಯವಾಗಿದ್ದು, ಇದು ಭಾರತದ ಹವಾಮಾನಕ್ಕೆ ಪಿಂಕ್ ಬಾಲ್ ಬಳಕೆ ದೊಡ್ಡ ಸವಾಲು ಎನ್ನುತ್ತಾರೆ ಕ್ರಿಕೆಟ್ ತಜ್ಞರು.

ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಕೂಡಿಬಂತು ಕಾಲ...! ಯಾವಾಗ ಗೊತ್ತಾ..?

ವಿಫಲವಾದ ದಾದ ಪೈಲಟ್ ಪ್ರಾಜೆಕ್ಟ್..!

ಭಾರತೀಯ ಹವಾಮಾನದಲ್ಲಿ ಪಿಂಕ್ ಬಾಲ್ ಬಳಕೆಯ ಬಗ್ಗೆ 2016ರಲ್ಲೇ ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪೈಲಟ್ ಪ್ರಾಜೆಕ್ಟ್ ನಡೆಸಿದ್ದರು.

BCCI push for Day and Night Test match,ಹೊನಲು ಬೆಳಕಿನ ಟೆಸ್ಟ್ ಪಂದ್ಯದ ಲೇಟೆಸ್ಟ್ ಸುದ್ದಿ
ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ

ದುಲೀಪ್ ಟ್ರೋಫಿಯಲ್ಲಿ ಪಿಂಕ್ ಬಾಲ್ ಬಳಸಿ ಪ್ರಯೋಗ ಮಾಡಲಾಗಿತ್ತು. ಆದರೆ, ಈ ಪ್ರಯೋಗ ನಿರೀಕ್ಷಿತ ಫಲ ಕಾಣಲಿಲ್ಲ. ಭಾರತದಲ್ಲಿ ಭವಿಷ್ಯದ ಅಹರ್ನಿಶಿ( ಹಗಲು- ರಾತ್ರಿ) ಟೆಸ್ಟ್ ಪಂದ್ಯಗಳ ಆಯೋಜನೆ ನಿಟ್ಟಿನಲ್ಲಿ ಇದು ದೊಡ್ಡ ಹಿನ್ನಡೆಯಾಗಿತ್ತು.

ಭಾರತದ ಪಿಚ್ ಸಂಪೂರ್ಣ ಭಿನ್ನ..!

ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಪಿಚ್​ಗಳಿಗೆ ಹೋಲಿಕೆ ಮಾಡಿದಲ್ಲಿ ಭಾರತ ಪಿಚ್​ಗಳು ಅಷ್ಟೊಂದು ಮೃದುವಾಗಿಲ್ಲ. ಭಾರತದ ಪಿಚ್​ಗಳು ಅತ್ಯಂತ ಗಡಸಾಗಿದ್ದು 20-30 ಓವರ್​ ಬಳಿಕ ಚೆಂಡಿನ ಬಣ್ಣ ಹಾಗೂ ಸ್ವರೂಪವೇ ಬದಲಾಗುತ್ತದೆ.

ಹೊನಲು-ಬೆಳಕಿನ ಟೆಸ್ಟ್​​ ಪಂದ್ಯಕ್ಕೆ ಕೊಹ್ಲಿ ಗ್ರೀನ್​​ ಸಿಗ್ನಲ್​​!

ಅಭ್ಯಾಸ ಪಂದ್ಯಕ್ಕೇ 25ಕ್ಕೂ ಅಧಿಕ ಬಾಲ್ ಬಳಕೆ..!

ಪಂದ್ಯಕ್ಕೂ ಮುನ್ನ ತಂಡಗಳು ನೆಟ್ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತೇವೆ. ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಮುನ್ನ ನಡೆಯುವ ನೆಟ್ ಸೆಷನ್​ನಲ್ಲಿ 25ಕ್ಕೂ ಅಧಿಕ ಪಿಂಕ್ ಬಾಲ್ ಅಗತ್ಯ ಬೀಳಲಿದ್ದು, ಬದಲಿ ಚೆಂಡನ್ನು ಮೀಸಲಿರಿಸುವುದೂ ಬಿಸಿಸಿಐಗೆ ಸವಾಲಾಗಲಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ

ಈ ಎಲ್ಲ ಸವಾಲನ್ನೂ ಮೀರಿ ಬಿಸಿಸಿಐ ಅಹರ್ನಿಶಿ ಟೆಸ್ಟ್ ಪಂದ್ಯ ಯಶಸ್ವಿಯಾಗಿ ಆಯೋಜಿಸಿದಲ್ಲಿ ದೊಡ್ಡ ಸಾಧನೆಯೇ ಆಗಲಿದೆ ಎನ್ನುವುದು ಸುಳ್ಳಲ್ಲ. ಆದರೂ ಇಷ್ಟೊಂದು ಸವಾಲಿರುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯಗಳು ನಡೆಯುತ್ತಾ ಎನ್ನುವುದೂ ಪ್ರಶ್ನೆಯಾಗಿ ಉಳಿದಿದೆ.

Intro:Body:

ನವದೆಹಲಿ: ಬಿಸಿಸಿಐ ಅಧ್ಯಕ್ಷ ಗಾದಿಗೇರಿದ ಬಳಿಕ ಭಾರಿ ಬದಲಾವಣೆಗೆ ಮುಂದಾಗಿರುವ ದಾದ ಸೌರವ್ ಗಂಗೂಲಿ ಆರಂಭದಲ್ಲೇ ಅಹರ್ನಿಶಿ ಟೆಸ್ಟ್ ಪಂದ್ಯ ಆಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ ಎನ್ನಲಾಗಿದ್ದು, ಈ ಬಗ್ಗೆ ಬಿಸಿಸಿಐ ಬಾಂಗ್ಲಾ ಬೋರ್ಡ್​ಗೆ ಮನವಿ ಮಾಡಿಕೊಂಡಿದೆ. ಬಾಂಗ್ಲಾ ಕ್ರಿಕೆಟ್ ಬೋರ್ಡ್​ ಗ್ರೀನ್ ಸಿಗ್ನಲ್ ನೀಡಿದಲ್ಲಿ ಟೀಂ ಇಂಡಿಯಾ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಭಾರತದ ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ಆಡಲಿದೆ.

ಅಹರ್ನಿಶಿ ಟೆಸ್ಟ್ ಮತ್ತು ಪಿಂಕ್ ಬಾಲ್ ಸಮಸ್ಯೆ:

ಭಾರತದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅತ್ಯಂತ ಉತ್ಸುಕರಾಗಿದ್ದರೂ ಪ್ರಾಯೋಗಿಕವಾಗಿ ಒಂದಷ್ಟು ಸಮಸ್ಯೆಗಳಿವೆ.

ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಪಿಂಕ್​ ಬಾಲ್​ ಬಳಕೆ ಅನಿವಾರ್ಯವಾಗಿದ್ದು, ಇದು ಭಾರತದ ಹವಾಮಾನಕ್ಕೆ ಪಿಂಕ್ ಬಾಲ್ ಬಳಕೆ ದೊಡ್ಡ ಸವಾಲು ಎನ್ನುತ್ತಾರೆ ಕ್ರಿಕೆಟ್ ತಜ್ಞರು.

ವಿಫಲವಾದ ದಾದ ಪೈಲಟ್ ಪ್ರಾಜೆಕ್ಟ್..!

ಭಾರತೀಯ ಹವಾಮಾನದಲ್ಲಿ ಪಿಂಕ್ ಬಾಲ್ ಬಳಕೆಯ ಬಗ್ಗೆ 2016ರಲ್ಲೇ ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪೈಲಟ್ ಪ್ರಾಜೆಕ್ಟ್ ನಡೆಸಿದ್ದರು. 

ದುಲೀಪ್ ಟ್ರೋಫಿಯಲ್ಲಿ ಪಿಂಕ್ ಬಾಲ್ ಬಳಸಿ ಪ್ರಯೋಗ ಮಾಡಲಾಗಿತ್ತು. ಆದರೆ ಈ ಪ್ರಯೋಗ ನಿರೀಕ್ಷಿತ ಫಲ ಕಾಣಲಿಲ್ಲ. ಭಾರತದಲ್ಲಿ ಭವಿಷ್ಯದ ಅಹರ್ನಿಶಿ ಟೆಸ್ಟ್ ಪಂದ್ಯಗಳ ಆಯೋಜನೆ ನಿಟ್ಟಿನಲ್ಲಿ ಇದು ದೊಡ್ಡ ಹಿನ್ನಡೆಯಾಗಿತ್ತು.

ಭಾರತದ ಪಿಚ್ ಸಂಪೂರ್ಣ ಭಿನ್ನ..!

ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಪಿಚ್​ಗಳಿಗೆ ಹೋಲಿಕೆ ಮಾಡಿದಲ್ಲಿ ಭಾರತ ಪಿಚ್​ಗಳು ಅಷ್ಟೊಂದು ಮೃದುವಾಗಿಲ್ಲ. ಭಾರತದ ಪಿಚ್​ಗಳು ಅತ್ಯಂತ ಗಡಸಾಗಿದ್ದು 20-30 ಓವರ್​ ಬಳಿಕ ಚೆಂಡಿನ ಬಣ್ಣ ಹಾಗೂ ಸ್ವರೂಪವೇ ಬದಲಾಗುತ್ತದೆ. 

ಅಭ್ಯಾಸ ಪಂದ್ಯಕ್ಕೇ 25ಕ್ಕೂ ಅಧಿಕ ಬಾಲ್ ಬಳಕೆ..!

ಪಂದ್ಯಕ್ಕೂ ಮುನ್ನ ತಂಡಗಳು ನೆಟ್ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತವೆ. ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಮುನ್ನ ನಡೆಯುವ ನೆಟ್ ಸೆಷನ್​ನಲ್ಲಿ 25ಕ್ಕೂ ಅಧಿಕ ಪಿಂಕ್ ಬಾಲ್ ಅಗತ್ಯ ಬೀಳಲಿದ್ದು, ಬದಲಿ ಚೆಂಡನ್ನು ಮೀಸಲಿರಿಸುವುದೂ ಬಿಸಿಸಿಐಗೆ ಸವಾಲಾಗಲಿದೆ.

ಈ ಎಲ್ಲ ಸವಾಲನ್ನೂ ಮೀರಿ ಬಿಸಿಸಿಐ ಅಹರ್ನಿಶಿ ಟೆಸ್ಟ್ ಪಂದ್ಯ ಯಶಸ್ವಿಯಾಗಿ ಆಯೋಜಿಸಿದಲ್ಲಿ ದೊಡ್ಡ ಸಾಧನೆಯೇ ಆಗಲಿದೆ ಎನ್ನುವುದು ಸುಳ್ಳಲ್ಲ. ಆದರೂ ಇಷ್ಟೊಂದು ಸವಾಲಿರುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯಗಳು ನಡೆಯುತ್ತಾ ಎನ್ನುವುದೂ ಪ್ರಶ್ನೆಯಾಗಿ ಉಳಿದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.