ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮತ್ತೊಂದು ಶತಕ ಮೂಡಿ ಬಂದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮುಂಬೈ ತಂಡದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
-
KL RAHUL 🆚MI
— Kings XI Punjab (@lionsdenkxip) April 10, 2019 " class="align-text-top noRightClick twitterSection" data="
2⃣0⃣1⃣8⃣- 9⃣4⃣
2⃣0⃣1⃣9⃣- 1⃣0⃣0⃣*
Sadda Sher loves Wankhede! #SaddaPunjab #MIvKXIP #KXIP #VIVOIPL pic.twitter.com/AHvhdWaA04
">KL RAHUL 🆚MI
— Kings XI Punjab (@lionsdenkxip) April 10, 2019
2⃣0⃣1⃣8⃣- 9⃣4⃣
2⃣0⃣1⃣9⃣- 1⃣0⃣0⃣*
Sadda Sher loves Wankhede! #SaddaPunjab #MIvKXIP #KXIP #VIVOIPL pic.twitter.com/AHvhdWaA04KL RAHUL 🆚MI
— Kings XI Punjab (@lionsdenkxip) April 10, 2019
2⃣0⃣1⃣8⃣- 9⃣4⃣
2⃣0⃣1⃣9⃣- 1⃣0⃣0⃣*
Sadda Sher loves Wankhede! #SaddaPunjab #MIvKXIP #KXIP #VIVOIPL pic.twitter.com/AHvhdWaA04
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಗೇಲ್-ರಾಹುಲ್ ಜೋಡಿ ಎದುರಾಳಿ ಬೌಲರ್ಗಳನ್ನ ಸುಲಭವಾಗಿ ಎದುರಿಸಿದರು. ಹೀಗಾಗಿ ಮೊದಲ ವಿಕೆಟ್ನಷ್ಟಕ್ಕೆ 12.5 ಓವರ್ಗಳಲ್ಲೇ 116ರನ್ಗಳಿಕೆ ಮಾಡಿತು. ಈ ವೇಳೆ 63ರನ್ಗಳಿಕೆ ಮಾಡಿದ ಗೇಲ್ ವಿಕೆಟ್ ಒಪ್ಪಿಸಿದರು. ಇತ ಬ್ಯಾಟಿಂಗ್ನಲ್ಲಿ ತಮ್ಮ ಅಬ್ಬರ ಮುಂದುರೆಸಿದ ರಾಹುಲ್ ಕೇವಲ 64ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 6ಬೌಂಡರಿಗಳ ಸಹಾಯದಿಂದ ಅಜೇಯ 100ರನ್ಗಳಿಕೆ ಮಾಡಿದರು. ಉಳಿದಂತೆ ಮಿಲ್ಲರ್(7)ರನ್, ಕರುಣ್ ನಾಯರ್(5)ರನ್,ಕರ್ರನ್(8)ರನ್ ಹಾಗೂ ಮನ್ದೀಪ್ ಸಿಂಗ್ ಅಜೇಯ (7)ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ ನಿಗದಿತ 20 ಓವರ್ಗಳಲ್ಲಿ 4ವಿಕೆಟ್ನಷ್ಟಕ್ಕೆ 197ರನ್ಗಳಿಕೆ ಮಾಡಿದ್ದು, ಮುಂಬೈಗೆ 198ರನ್ಗಳ ಗೆಲುವಿನ ಟಾರ್ಗೆಟ್ ನೀಡಿದೆ.
ಕಳೆದ ವರ್ಷ 2018ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೆಎಲ್ ರಾಹುಲ್ 94ರನ್ಗಳಿಕೆ ಮಾಡಿದ್ದರು.ಇನ್ನು ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ತಾವು ಎಸೆದ 4ಓವರ್ಗಳಲ್ಲಿ 2ವಿಕೆಟ್ ಪಡೆದು ಬರೋಬ್ಬರಿ 57ರನ್ ನೀಡಿ ದುಬಾರಿ ಎಣಿಸಿದರು. ಈ ಹಿಂದೆ 2017ರಲ್ಲಿ ಮಲಿಂಗಾ 4ಓವರ್ಗಳಲ್ಲಿ 58ರನ್ ನೀಡಿದ್ದರು.