ಲಂಡನ್ : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಮೊದಲ ಟಿ20 ಪಂದ್ಯದಲ್ಲೇ ಲಕ್ಷೆಂಬರ್ಗ್ ಟೀಂ ಜೆಕ್ ಗಣರಾಜ್ಯ ತಂಡವನ್ನು ಬಗ್ಗು ಬಡಿದಿದೆ. ಶುಕ್ರವಾರ ಜೆಕ್ಗಣರಾಜ್ಯದ ವಿರುದ್ಧ ತವರಿನ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಲಕ್ಷೆಂಬರ್ಗ್ ತಂಡದ ನಾಯಕ ಜೆ ಮೀಸ್ ಅವರ 40 ರನ್, ಆರಂಭಿಕ ಜೆ ಬಾರ್ಕರ್ ಅವರ 39 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 164 ರನ್ಗಳಿಸಿತ್ತು.
-
Luxembourg won their first international match held on home soil, beating Czech Republic by 63 runs (DLS method) in the first T20I 👏
— ICC (@ICC) August 29, 2020 " class="align-text-top noRightClick twitterSection" data="
Ankush Nanda and Marcus Cope took three wickets each as Czech Republic were restricted to 89/9 after the hosts posted 164/7.
">Luxembourg won their first international match held on home soil, beating Czech Republic by 63 runs (DLS method) in the first T20I 👏
— ICC (@ICC) August 29, 2020
Ankush Nanda and Marcus Cope took three wickets each as Czech Republic were restricted to 89/9 after the hosts posted 164/7.Luxembourg won their first international match held on home soil, beating Czech Republic by 63 runs (DLS method) in the first T20I 👏
— ICC (@ICC) August 29, 2020
Ankush Nanda and Marcus Cope took three wickets each as Czech Republic were restricted to 89/9 after the hosts posted 164/7.
ಮಳೆಯ ಕಾರಣ ಜೆಕ್ ಗಣರಾಜ್ಯಕ್ಕೆ 16.5 ಓವರ್ಗಳಲ್ಲಿ 153 ರನ್ಗಳ ಗುರಿ ನೀಡಲಾಗುತ್ತು. ಆದರೆ, ಜೆಕ್ ತಂಡ ನಿಗದಿತ ಓವರ್ಗಳಲ್ಲಿ 89 ರನ್ಗಳನ್ನಷ್ಟೇ ಗಳಿಸಲು ಶಕ್ತವಾಗಿ 64 ರನ್ಗಳಿಂದ ಸೋಲನುಭವಿಸಿತು. ಲಕ್ಷೆಂಬರ್ಗ್ ತಂಡದ ಪರ ಅಂಕುಶ್ ನಂದ ಹಾಗೂ ಮಾರ್ಕಸ್ ಕೋಪ್ ತಲಾ ಮೂರು ವಿಕೆಟ್ ಪಡೆದು ಐತಿಹಾಸಿಕ ಗೆಲುವಿಗೆ ನೆರವಾದರು.
ಫುಟ್ಬಾಲ್ನಂತೆ ಕ್ರಿಕೆಟ್‌ಗೆ ಹೆಚ್ಚಿನ ದೇಶಗಳು ಆಸಕ್ತಿವಹಿಸುತ್ತಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಎರಡು ರಾಷ್ಟ್ರಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಇಂದು ಎರಡು ತಂಡಗಳು ತಮ್ಮ 2ನೇ ಪಂದ್ಯವನ್ನಾಡಲಿವೆ.