ETV Bharat / sports

ದ್ರಾವಿಡ್​ ಆಟವನ್ನು ನೋಡಿಕೊಂಡು ಬೆಳೆದ ನನಗೆ ಕ್ರಿಕೆಟಿಗನಾಗಲು ಅವರೇ ಸ್ಫೂರ್ತಿ

author img

By

Published : Apr 27, 2020, 12:50 PM IST

ನಾನು ಕ್ರಿಕೆಟಿಗನಾಗಲು ದ್ರಾವಿಡ್​ ಕಾರಣ, ಅವರ ಆಟವನ್ನು ನೋಡಿಕೊಂಡೇ ಬೆಳೆದೆ. 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್​ನಲ್ಲಿ​ ನಡೆದಿದ್ದ ಟೆಸ್ಟ್​ ನೋಡಿದ ಮೇಲೆ ದ್ರಾವಿಡ್​ರ ಅಭಿಮಾನಿಯಾಗಿಬಿಟ್ಟೆ ಎಂದು ಶಂಕರ್​ ಹೇಳಿಕೊಂಡಿದ್ದಾರೆ.

ರಾಹುಲ್​ ದ್ರಾವಿಡ್
ರಾಹುಲ್​ ದ್ರಾವಿಡ್

ಮುಂಬೈ: ಭಾರತ ತಂಡದ ಶ್ರೇಷ್ಠ ಕ್ರಿಕೆಟಿಗರಾದ ರಾಹುಲ್​ ದ್ರಾವಿಡ್​ ಅವರು ಸಾವಿರಾರು ಯುವ ಕ್ರಿಕೆಟಿಗರಿಗೆ ಗುರು, ಸ್ಫೂರ್ತಿಯಾಗಿದ್ದಾರೆ. ಹೊಡಿಬಡಿ ಆಟದ ನಡುವೆ ಟೆಸ್ಟ್​ನಂತಹ ದೀರ್ಘಾವಧಿ ಆಟ ಜೀವಂತವಾಗಿದೆಯೆಂದರೆ ಅದಕ್ಕೆ ದ್ರಾವಿಡ್​ರಂತಹ ದಿಗ್ಗಜ ಪ್ರಮುಖ ಕಾರಣ.

ಕಳೆದ ಮೂರು-ನಾಲ್ಕು ವರ್ಷಗಳಿಂದ ಭಾರತ ಎ, ಅಂಡರ್​ 19 ಕ್ರಿಕೆಟ್​ ತಂಡದ ಕೋಚ್​ ಆಗಿ ದ್ರಾವಿಡ್​ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಅವರ ಗರಡಿಯಲ್ಲಿ ಪಳಗಿರುವ ತಮಿಳುನಾಡಿನ ವಿಜಯ್​ ಶಂಕರ್​ ತಮ್ಮ ಇನ್ಸ್ಟಾಗ್ರಾಮ್​ ಲೈವ್​ ವೇಳೆ ದ್ರಾವಿಡ್​ ತಮ್ಮ ಕ್ರಿಕೆಟ್​ ಜೀವನಕ್ಕೆ ಸ್ಫೂರ್ತಿ ಎಂದಿದ್ದಾರೆ.

"ನಾನು ಕ್ರಿಕೆಟಿಗನಾಗಲು ದ್ರಾವಿಡ್​ ಕಾರಣ, ಅವರ ಆಟವನ್ನು ನೋಡಿಕೊಂಡೇ ಬೆಳೆದೆ. 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಅಡಿಲೇಡ್​ನಲ್ಲಿ ನಡೆದಿದ್ದ​ ಟೆಸ್ಟ್​ ನೋಡಿದ ಮೇಲೆ ದ್ರಾವಿಡ್​ರ ಅಭಿಮಾನಿಯಾಗಿಬಿಟ್ಟೆ" ಎಂದು ಶಂಕರ್​ ಹೇಳಿಕೊಂಡಿದ್ದಾರೆ.

2003ರಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್​ ನಡೆಸಿ ರಿಕಿ ಪಾಂಟಿಂಗ್​ 242 ರನ್​ಗಳ ಸಹಾಯದಿಂದ 556 ರನ್ ​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಭಾರತ ತಂಡ 84 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ಬ್ಯಾಟಿಂಗ್​ಗಿಳಿದಿದ್ದ ದ್ರಾವಿಡ್(233)​ ಮತ್ತು ಲಕ್ಷ್ಮಣ್​ 303 ರನ್​ಗಳ ಜೊತೆಯಾಟ ಆಡಿ 523 ರನ್​ಗಳನ್ನು ಪೇರಿಸಿದ್ದರು.

ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 196 ರನ್​ ಗಳಿಸಿತ್ತು. 220 ರನ್​ಗಳ ಗುರಿ ಬೆನ್ನತ್ತಿದ್ದ ಭಾರತ 6 ವಿಕೆಟ್​ ಕಳೆದುಕೊಂಡು ತಲುಪಿ ದಾಖಲೆಯ ಜಯ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲೂ ದ್ರಾವಿಡ್​ 72 ರನ್​ ಗಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.