ETV Bharat / sports

ಭಾರತ-ಬಾಂಗ್ಲಾ ಮೊದಲ ಅಹರ್ನಿಶಿ ಟೆಸ್ಟ್... ಗುಲಾಬಿ ಬಣ್ಣಕ್ಕೆ ತಿರುಗಿದ ಕೋಲ್ಕತ್ತಾ! - ಭಾರತ vs ಬಾಂಗ್ಲಾದೇಶ ಪಿಂಕ್ ಬಾಲ್ ಟೆಸ್ಟ್

ಮೊದಲ ಅಹರ್ನಿಶಿ ಟೆಸ್ಟ್​ ಪಂದ್ಯಕ್ಕೆ ಕೋಲ್ಕತ್ತಾ ಸಜ್ಜಾಗಿದ್ದು, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಕೋಲ್ಕತ್ತಾ ನಗರಕ್ಕೆ ಆಗಮಿಸಿದ್ದಾರೆ.

ಗುಲಾಬಿ ಬಣ್ಣಕ್ಕೆ ತಿರುಗಿದ ಕೋಲ್ಕತ್ತಾ
author img

By

Published : Nov 22, 2019, 12:54 PM IST

Updated : Nov 22, 2019, 3:44 PM IST

ಕೋಲ್ಕತ್ತಾ: ಇಂದು ಮಧ್ಯಾಹ್ನದಿಂದ ಅರಂಭವಾಗುವ ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ಅಹರ್ನಿಶಿ ಟೆಸ್ಟ್​​ ಪಂದ್ಯಕ್ಕೆ ಕೋಲ್ಕತ್ತಾ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಗರವೆಲ್ಲ ಪಿಂಕ್ ಬಣ್ಣಕ್ಕೆ ತಿರುಗಿದೆ.

ಮೊದಲ ಅಹರ್ನಿಶಿ ಟೆಸ್ಟ್​ ಪಂದ್ಯವನ್ನ ಪ್ರೋತ್ಸಾಹಿಸುವ ಸಲುವಾಗಿ ನಗರದ ಪ್ರಮುಖ ಕಟ್ಟಡ, ಮಾಲ್ ಮತ್ತು ಪ್ರಮುಖ ಸರ್ಕಲ್​ಗಳನ್ನ ಗುಲಾಬಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಇಷ್ಟೇ ಅಲ್ಲದೆ, ಗ್ರಾಹಕರನ್ನ ಸೆಳೆಯಲು ಪ್ರಮುಖ ಸ್ವೀಟ್ ತಯಾರಕರು ಕೂಡಾ ಪಿಂಕ್ ಬಣ್ಣದ ಸಿಹಿ ತಿನಿಸುಗಳನ್ನ ತಯಾರಿಸುತ್ತಿದ್ದಾರೆ. ಈ ಎಲ್ಲಾ ಫೋಟೋಗಳನ್ನ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮುಂದಿನ 5 ದಿನಗಳಿಗಾಗಿ ಬಿಸಿಸಿಐ ಮತ್ತು ಕೋಲ್ಕತ್ತಾ ಕ್ರಿಕೆಟ್ ಬೋರ್ಡ್​ ಎದುರು ನೋಡುತ್ತಿದೆ ಎಂದಿದ್ದಾರೆ.

ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ:
ಭಾರತ ಮತ್ತು ಭಾಂಗ್ಲಾ ನಡುವಿನ ಅಹರ್ನಿಶಿ ಟೆಸ್ಟ್​ ಪಂದ್ಯಕ್ಕೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಚಾಲನೆ ನೀಡಲಿದ್ದು, ಈಗಾಗಲೇ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಸುಭಾಶ್ ಚಂದ್ರ ಭೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶೇಖ್ ಹಸೀನಾ ಅವರನ್ನ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಸ್ವಾಗತಿಸಿದ್ದಾರೆ.

Intro:Body:Conclusion:
Last Updated : Nov 22, 2019, 3:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.