ETV Bharat / sports

ಕೇದಾರ್ ಜಾಧವ್ ಕೈಬಿಟ್ಟು ಚಹಾಲ್​ಗೆ ಅವಕಾಶ ನೀಡಿ: ಹರ್ಭಜನ್ ​ಸಿಂಗ್ ಸಲಹೆ - ಯಜುವೇಂದ್ರ ಚಹಾಲ್

ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕೇದಾರ್ ಜಾಧವ್​ ಬದಲಿಗೆ ಯಜುವೇಂದ್ರ ಚಹಾಲ್​ಗೆ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.

Leave out Kedar Jadhav,ಕೇದಾರ್ ಜಾಧವ್ ಕೈಬಿಟ್ಟು ಚಹಾಲ್​ಗೆ ಅವಕಾಶ ನೀಡಿ
ಕೇದಾರ್ ಜಾಧವ್ ಕೈಬಿಟ್ಟು ಚಹಾಲ್​ಗೆ ಅವಕಾಶ ನೀಡಿ
author img

By

Published : Feb 6, 2020, 9:22 PM IST

ಹೈದರಾಬಾದ್: ಕಿವೀಸ್ ವಿರುದ್ಧದ ಏಕದಿನ ಸರಣಿಯ ಉಳಿದೆರಡು ಪಂದ್ಯದಲ್ಲಿ ಕೇದಾರ್​ ಜಾಧವ್ ಬದಲು ಯಜುವೇಂದ್ರ ಚಹಾಲ್​ಗೆ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ಆಟಗಾರರ ವೀಕ್ನೆಸ್​ ಬಗ್ಗೆ ಮಾತನಾಡಿರುವ ಬಜ್ಜಿ, ಕಿವೀಸ್ ಆಟಗಾರರು ವೇಗದ ಬೌಲಿಂಗ್​ಗೆ ಉತ್ತಮವಾಗಿ ಆಡಬಲ್ಲರು. ಆದರೆ ಸ್ಪಿನ್​ ಬೌಲರ್​ಗಳನ್ನ ಎದುರಿಸುವುದು ಕೊಂಚ ಕಷ್ಟ. ಹೀಗಾಗಿ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಯಜುವೇಂದ್ರ ಚಹಾಲ್​ಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ.

Leave out Kedar Jadhav,ಕೇದಾರ್ ಜಾಧವ್ ಕೈಬಿಟ್ಟು ಚಹಾಲ್​ಗೆ ಅವಕಾಶ ನೀಡಿ
ಯಜುವೇಂದ್ರ ಚಹಾಲ್

ಕಿವೀಸ್ ನೆಲದಲ್ಲಿ ಸ್ಪಿನ್​ ಬೌಲರ್​ಗಳು ವಿಕೆಟ್ ಪಡೆಯಬಲ್ಲರು, ಕೇದಾರ್​ ಬದಲಿಗೆ ಯಜುವೇಂದ ಚಹಾಲ್​ಗೆ ಅವಕಾಶ ನೀಡಬೇಕು. ಕುಲ್ದೀಪ್ ಯಾದವ್ ಮತ್ತು ಚಹಾಲ್ ಇಬ್ಬರು ಸ್ಪಿನ್ನರ್​ಗಳೂ ಕಣಕ್ಕಿಳಿಯಬೇಕು ಎಂದಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟ್ ಬೀಸಿದ್ದ ಕೇದಾರ್ ಜಾಧವ್ 15 ಎಸೆತಗಳಲ್ಲಿ 26 ರನ್​ ಸಿಡಿಸಿದ್ದರು. ಆದರೆ ಬೌಲಿಂಗ್ ಮಾಡುವ ಅವಕಾಶ ನೀಡಿರಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.