ಕೋಲ್ಕತ್ತಾ: ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯನ್ನ ಕ್ಲೀನ್ಸ್ವೀಪ್ ಮಾಡಿರುವ ಟೀಂ ಇಂಡಿಯಾ ಸತತವಾಗಿ 7 ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ನೂತನ ಮೈಲಿಗಲ್ಲು ಸ್ಥಾಪಿಸಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಾಲಿ ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿಯನ್ನ ಕೊಂಡಾಡಿದ್ದಾರೆ. ಅಂದು ದಾದಾ ಅವರು ತಂಡಕ್ಕೆ ಎದ್ದೇಳುವುದನ್ನ(ಗೆಲ್ಲುವುದು ಹೇಗೆ) ಕಲಿಸಿದ್ದರು. ಅದನ್ನೇ ನಾವು ಇಂದು ಅನುಸರಿಸುತ್ತಿದ್ದೇವೆ ಎಂದಿದ್ದಾರೆ.
- ' class='align-text-top noRightClick twitterSection' data=''>
ನಮ್ಮ ಬೌಲಿಂಗ್ ಶಕ್ತಿ ಬಲಗೊಂಡಿದ್ದು, ತಂಡವನ್ನ ಗೆಲ್ಲಿಸುವ ಶಕ್ತಿ ನಮ್ಮ ಬೌಲರ್ಗಳಿಗೆ ಇದೆ. ಯಾವುದೇ ಬ್ಯಾಟ್ಸ್ಮನ್ ಇರಲಿ, ಭಯವಿಲ್ಲದೆ ಬೌಲಿಂಗ್ ಮಾಡುವ ಸಾಮರ್ಥ್ಯ ನಮ್ಮವರಿಗಿದೆ. ಕಳೆದ 3-4 ವರ್ಷಗಳಲ್ಲಿ ಇದರ ಪ್ರತಿಫಲವನ್ನ ನಾವು ಕಾಣುತ್ತಿದ್ದೇವೆ ಎಂದು ಬೌಲರ್ಗಳ ಸಾಮರ್ಥ್ಯವನ್ನ ಸಹ ವಿರಾಟ್ ಹೊಗಳಿದ್ದಾರೆ.
ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತವಾಗಿ 6 ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇದೀಗ ಕೊಹ್ಲಿ ಆ ದಾಖಲೆಯನ್ನ ಬ್ರೇಕ್ ಮಾಡಿದ್ದು, ವಿರಾಟ್ ನಾಯಕತ್ವದಲ್ಲಿ ಭಾರತ ತಂಡ ಸತತವಾಗಿ 7 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.