ನ್ಯಾಟಿಂಗ್ಹ್ಯಾಮ್: ವಿಶ್ವಕಪ್ನಲ್ಲಿ ಟೀಂ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್ ತಂಡ ಹೀನಾಯ ಸೋಲು ಕಂಡಿದ್ದು ಎಲ್ಲರಿಗೂ ಗೊತ್ತಿದೆ. ಪಂದ್ಯದ ನಂತರ ಸರ್ಫರಾಜ್ ಅಹ್ಮದ್ ನೇತೃತ್ವದ ತಂಡ ಸಿಕ್ಕಾಪಟ್ಟೆ ಟೀಕೆಗೂ ಸಹ ಒಳಗಾಗಿದೆ.
-
Mickey Arthur "last Sunday I wanted to commit suicide" #CWC19 pic.twitter.com/Xkb3IgD0QS
— Saj Sadiq (@Saj_PakPassion) June 24, 2019 " class="align-text-top noRightClick twitterSection" data="
">Mickey Arthur "last Sunday I wanted to commit suicide" #CWC19 pic.twitter.com/Xkb3IgD0QS
— Saj Sadiq (@Saj_PakPassion) June 24, 2019Mickey Arthur "last Sunday I wanted to commit suicide" #CWC19 pic.twitter.com/Xkb3IgD0QS
— Saj Sadiq (@Saj_PakPassion) June 24, 2019
ಇದರ ಮಧ್ಯೆ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್ ಗೆಲುವು ದಾಖಲು ಮಾಡಿದ್ದು ಸೆಮಿಫೈನಲ್ಗೆ ಲಗ್ಗೆ ಹಾಕುವ ಕನಸು ಜೀವಂತವಾಗಿಟ್ಟುಕೊಂಡಿದೆ. ಇದರ ಮಧ್ಯೆ ಪಾಕ್ ತಂಡದ ಕೋಚ್ ಮಿಕ್ಕಿ ಆರ್ಥರ್ ಸ್ಪೋಟಕ ಮಾಹಿತಿವೊಂದನ್ನ ಬಿಚ್ಚಿಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ದಾಖಲು ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಕ್ಕಿ, ಭಾರತ ವಿರುದ್ಧ ಸೋಲು ಕಂಡ ಬಳಿಕ ನಾವು ಬಹಳಷ್ಟು ಟೀಕೆಗೆ ಒಳಗಾಗಿದ್ದೇವೆ. ಇದರಿಂದ ನಾನು ತುಂಬಾ ಒತ್ತಡಕ್ಕೊಳಗಾಗಿ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಮ್ಮ ತಂಡ ಅತ್ಯುತ್ತಮ ಆಟ ಪ್ರದರ್ಶಿಸಿದೆ. ಪ್ರತಿಯೊಬ್ಬ ಪ್ಲೇಯರ್ ತಮ್ಮ ಕೊಡುಗೆ ನೀಡಿದ್ದರ ಫಲವಾಗಿ 49ರನ್ಗಳ ಗೆಲುವು ದಾಖಲು ಮಾಡಿದ್ದೇವೆ. ಮುಂದಿನ ಪಂದ್ಯಗಳಲ್ಲೂ ನಮ್ಮ ಪ್ಲೇಯರ್ಗಳಿಂದ ಇದೇ ರೀತಿಯ ಪ್ರದರ್ಶನ ಮೂಡಿ ಬರಲಿದ್ದು, ಖಂಡಿತವಾಗಿ ಸೆಮಿ ಫೈನಲ್ಗೆ ಲಗ್ಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.