ಅಬುಧಾಬಿ: ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಲಸಿತ್ ಮಲಿಂಗಾ ಟಿ-20 ವಿಶ್ವಕಪ್ ನಂತರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು.
ಕಳೆದ ಮಾರ್ಚ್ನಲ್ಲಿ ನಿವೃತ್ತಿ ಕುರಿತು ಮಾತನಾಡಿದ್ದ ಮಲಿಂಗಾ, ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಶ್ರೀಲಂಕಾ ಟಿ-20 ತಂಡದ ನಾಯಕನಾಗಿರುವ ಅವರು, ವಿಶ್ವಕಪ್ ನಂತರವೂ ತಾವು ಟಿ-20 ಕ್ರಿಕೆಟ್ನಲ್ಲಿ ಮುಂದುವರಿಯುವುದಾಗಿ ಹೇಳಿಕೆ ನೀಡುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದಾರೆ.
"ಟಿ-20 ಕೇವಲ ನಾಲ್ಕು ಓವರ್ ಮಾಡುವುದರಿಂದ ನಾನು ನನ್ನ ಕೌಶಲ್ಯಗಳನ್ನು ಉಪಯೋಗಿಸಿ ವಿಶ್ವಕಪ್ ನಂತರವೂ 2 ವರ್ಷ ಟಿ-20 ಆಡಬಲ್ಲೆ. ಏಕೆದರೆ ಈಗಾಗಲೇ ವಿಶ್ವದ ಎಲ್ಲಾ ಟಿ-20 ಲೀಗ್ಗಳಲ್ಲಿ ಆಡಿರುವುದರಿಂದ ನಾನು ನಿವೃತ್ತಿ ನಿರ್ಧಾರದ ಬಗ್ಗೆ ಈಗಲೇ ತಲೆ ಕೆಡಿಸಿಕೊಂಡಿಲ್ಲ" ಎಂದು ಹೇಳಿದ್ದಾರೆ.
ಲಸಿತ್ ಮಲಿಂಗಾ ಸದ್ಯ ಅಬುಧಾಬಿ ಟಿ-10 ಲೀಗ್ನಲ್ಲಿ ಆಡುತ್ತಿದ್ದಾರೆ. ಮುಂಬರುವ ವಿಶ್ವಕಪ್ನಲ್ಲೂ ಶ್ರೀಲಂಕಾ ತಂಡವನ್ನು ತಾವೇ ಮುನ್ನಡೆಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.