ಆ್ಯಂಟಿಗೋವಾ: ಭಾರತದ ವಿರುದ್ಧ ತವರಿನಲ್ಲಿ ನಡೆದ ಏಕದಿನ ಹಾಗೂ ಟಿ20 ಸರಣಿ ಕಳೆದುಕೊಂಡಿರುವ ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಸರಣಿಯನ್ನಾದರೂ ಗೆಲ್ಲಬೇಕೆಂದು ನಿರ್ಧರಿಸಿದ್ದು ಮಾಜಿ ಆಟಗಾರರಾದ ಬ್ರಿಯಾನ್ ಲಾರಾ ಹಾಗೂ ರಾಮನರೇಶ್ ಸರವಣ್ರ ಮೊರೆ ಹೋಗಿದೆ.
ವೆಸ್ಟ್ ಇಂಡೀಸ್ ಭಾರತದ ವಿರುದ್ಧ 3-0ಯಲ್ಲಿ ಟಿ20 ಸರಣಿಯನ್ನು, 2-0ಯಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಆಗಸ್ಟ್ 22 ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು ವಿಂಡೀಸ್ ದಿಗ್ಗಜ ಬ್ಯಾಟ್ಸ್ಮನ್ಗಳಾದ ಲಾರಾ ಹಾಗೂ ಸರವಣ್ರನ್ನು ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಈ ಇಬ್ಬರು ಮಾಜಿ ಆಟಗಾರರು ಟೆಸ್ಟ್ ಸರಣಿಯ ಪೂರ್ವಭಾವಿ ಶಿಬಿರದಲ್ಲಿ ಆಟಗಾರರ ಜೊತೆ ಇದ್ದು, ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಲಾರಾ ಹಾಗೂ ಸರವಣ್ ಕ್ರಿಕೆಟ್ ಬಗ್ಗೆ ಇಂದಿಗೂ ಪ್ರೀತಿ ಹಾಗೂ ಉತ್ಸಾಹ ಇದೆ ಎಂಬುದು ನಮಗೆ ಗೊತ್ತಿರುವ ವಿಚಾರ. ಇವರಿಬ್ಬರಿಂದ ಯುವ ಪೀಳಿಗೆಯ ಆಟಗಾರರು ತುಂಬ ಕಲಿಯಲಿದ್ದಾರೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ಆ್ಯಡಮ್ಸ್ ತಿಳಿಸಿದ್ದಾರೆ.
ನಮ್ಮ ತಂಡದಲ್ಲಿ ಶೈ ಹೋಪ್ಮ ರಾಸ್ಟನ್ ಚೇಸ್, ಶಿಮ್ರಾನ್ ಹೆಟ್ಮೈರ್, ಜಾನ್ ಕ್ಯಾಂಪ್ಬೆಲ್, ಕ್ರೈಗ್ ಬ್ರಾಥ್ವೇಟ್ ಹಾಗೂ ಡೆರಾನ್ ಬ್ರಾವೋರಂತಹ ಆಟಗಾರರ ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿ ಗೆಲುವು ತಂದುಕೊಟ್ಟಿದ್ದರು. ಇದೀಗ ಬಲಿಷ್ಠ ಭಾರತದೆದರೂ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದ್ದು, ಲಾರಾ-ಸರ್ವನ್ ಮಾರ್ಗದರ್ಶನ ಅವರಿಗೆ ಮತ್ತಷ್ಟು ನೆರವಾಗಲಿದೆ ಎಂದು ಆ್ಯಡಮ್ಸ್ ಅಭಿಪ್ರಾಯಪಟ್ಟಿದ್ದಾರೆ.