ETV Bharat / sports

ಮತ್ತೊಂದು ವಾರಕ್ಕೆ ಮುಂದೂಡಲ್ಪಟ್ಟ ಲಂಕಾ ಪ್ರೀಮಿಯರ್ ಲೀಗ್​ - ಐಪಿಎಲ್ 2020

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಭಾಗವಹಿಸುವ ಆಟಗಾರರಿಗೆ ಎಲ್​ಪಿಎಲ್​ನಲ್ಲೂ ಆಡಲು ಅವಕಾಶ ನೀಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಲಂಕಾ ಪ್ರೀಮಿಯರ್ ಲೀಗ್​
ಲಂಕಾ ಪ್ರೀಮಿಯರ್ ಲೀಗ್​
author img

By

Published : Sep 30, 2020, 6:52 PM IST

ಕೊಲೊಂಬೊ: ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಕ್ವಾರಂಟೈನ್​ ವ್ಯವಸ್ಥೆ ಪೂರೈಸಲು ಸಾಕಷ್ಟು ಸಮಯದ ಅಗತ್ಯ ಇರುವುದರಿಂದ ಶ್ರಿಲಂಕಾ ಕ್ರಿಕೆಟ್​ ಮಂಡಳಿ, ಎಲ್​ಪಿಎಲ್​ ಟೂರ್ನಮೆಂಟ್​ ಅನ್ನು ನವೆಂಬರ್ 14 ರಿಂದ ನವೆಂಬರ್​ 21ಕ್ಕೆ ಮುಂದೂಡಲು ನಿರ್ಧರಿಸಿದೆ.

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಭಾಗವಹಿಸುವ ಆಟಗಾರರಿಗೆ ಎಲ್​ಪಿಎಲ್​ನಲ್ಲೂ ಆಡಲು ಅವಕಾಶ ನೀಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

"ಐಪಿಎಲ್ ನವೆಂಬರ್ 10 ರವರೆಗೆ ನಡೆಯುವುದರಿಂದ, ಐಪಿಎಲ್‌ನಲ್ಲಿ ಭಾಗವಹಿಸಿರುವ ಆಟಗಾರರಿಗೆ ಮತ್ತು ಎಲ್​ಪಿಎಲ್​ನ ಭಾಗವಾಗಲು ಬಯಸುವ ಆಟಗಾರರಿಗೆ ಟೂರ್ನಿಯಲ್ಲಿ ಭಾಗವಹಿಸಲು ಕೆಲವು ಅವಕಾಶಗಳನ್ನು ನೀಡಲು ನಾವು ಯೋಚಿಸಿದ್ದೇವೆ" ಎಂದು ಎಸ್ಎ​ಲ್​ಸಿ ನಿರ್ದೇಶಕ ರವಿನ್ ವಿಕ್ರಮರತ್ನ ಎಸ್​ಎಲ್​ಸಿ ಬಿಡುಗೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಕ್ಟೋಬರ್​ 1ರಂದು ನಡೆಯಬೇಕಿದ್ದ ಆಟಗಾರರ ಹರಾಜು ಪ್ರಕ್ರಿಯೆಯನ್ನ ಅಕ್ಟೋಬರ್​ 9ಕ್ಕೆ ಮುಂದೂಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಲ್​ಪಿಎಲ್​ 5 ಫ್ರಾಂಚೈಸಿಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಫ್ರಾಂಚೈಸಿ 6 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ. ಈ ಟೂರ್ನಿ ಆಗಸ್ಟ್​ 28ರಂದೇ ಆರಂಭವಾಗಬೇಕಿತ್ತು, ಆದರೆ, ಕೋವಿಡ್​ 19 ಬಿಕ್ಕಟ್ಟಿನಿಂದ ಮುಂದೂಡಲ್ಪಟ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.