ETV Bharat / sports

ಕನ್ನಡಿಗ ಅನಿಲ್​ ಕುಂಬ್ಳೆ ನೇತೃತ್ವದಲ್ಲಿ ಬೌಂಡರಿ ಲೆಕ್ಕಾಚಾರ ನಿಯಮ ಕುರಿತು ಚರ್ಚಿಸಲಿರುವ ಐಸಿಸಿ..

author img

By

Published : Jul 29, 2019, 9:19 AM IST

ವಿಶ್ವ ಕಂಡ ಶ್ರೇಷ್ಠ ಸ್ಪಿನ್ನರ್​ ಅನಿಲ್​ ಕುಂಬ್ಳೆ ನೇತೃತ್ವದಲ್ಲಿ ಫೈನಲ್​ ಪಂದ್ಯದ ಸೂಪರ್​ ಓವರ್​ ಟೈ ಆದರೆ ವಿನ್ನರ್​ ಘೋಷಣೆಗೆ ಮೊರೆ ಹೋಗುತ್ತಿರುವ ಬೌಂಡರಿ ಲೆಕ್ಕಾಚಾರ ನಿಯಮದ ಬಗ್ಗೆ ಚರ್ಚಿಸಲು ಕಮಿಟಿ ರಚಿಸಿದ್ದು, ಅದರ ನೇತೃತ್ವವನ್ನು ಕನ್ನಡಿಗ ಅನಿಲ್​ ಕುಂಬ್ಳೆವಹಿಸಿಕೊಳ್ಳಲಿದ್ದಾರೆ.

anil kumble

ಮುಂಬೈ: ವಿಶ್ವ ಕಂಡ ಶ್ರೇಷ್ಠ ಸ್ಪಿನ್ನರ್​, ಭಾರತೀಯ ಮಾಜಿ ಆಟಗಾರ ಅನಿಲ್​ ಕುಂಬ್ಳೆ ನೇತೃತ್ವದಲ್ಲಿ ಫೈನಲ್​ ಪಂದ್ಯದ ಸೂಪರ್​ ಓವರ್​ ಟೈ ಆದರೆ ವಿನ್ನರ್​ ಘೋಷಣೆಗೆ ಮೊರೆ ಹೋಗುತ್ತಿರುವ ಬೌಂಡರಿ ಲೆಕ್ಕಾಚಾರ ನಿಯಮದ ಬಗ್ಗೆ ಚರ್ಚಿಸಲು ಕಮಿಟಿ ರಚಿಸಿದ್ದು, ಅದರ ನೇತೃತ್ವವನ್ನು ಕನ್ನಡಿಗ ಅನಿಲ್​ ಕುಂಬ್ಳೆವಹಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಮುಗಿದ ಐಸಿಸಿ ವಿಶ್ವಕಪ್​ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್​ ನಡುವಿನ​ ಪಂದ್ಯ ಟೈ ಆಗಿತ್ತು. ನಂತರ ನಡೆದ ಸೂಪರ್​ ಓವರ್​ ಕೂಡ ಟೈ ಆಗಿದ್ದರಿಂದ ಮೊದಲೇ ನಿರ್ಧರಿತವಾಗಿದ್ದ ಹೆಚ್ಚು ಬೌಂಡರಿಗಳಿಸಿದ ಇಂಗ್ಲೆಂಡ್​ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇಂಗ್ಲೆಂಡ್​ 22 ಬೌಂಡರಿ ಹಾಗೂ 2 ಸಿಕ್ಸರ್​ಗಳಿಸಿದ್ದರೆ, ಕಿವೀಸ್​ 17 ಬೌಂಡರಿಗಳಿಸಿತ್ತು.

ಆದರೆ, ಈ ನಿಯಮವನ್ನು ವಿಶ್ವದಾದ್ಯಂತ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದರು. ಹೀಗಾಗಿ ಈ ವಿಚಾರವನ್ನು ಐಸಿಸಿ ಕ್ರಿಕೆಟ್​ ಕಮಿಟಿ ಗಂಭೀರವಾಗಿ ತೆಗೆದುಕೊಂಡಿದ್ದು, 2020ರ ಮೊದಲ ಚತುರ್ಮಾಸದಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಈ ನಿಯಮದ ಬಗ್ಗೆ ಚರ್ಚೆ ನಡೆಸುವುದಾಗಿ ಹಾಗೂ ಈ ಚರ್ಚೆಯ ನೇತೃತ್ವವನ್ನು ಅನಿಲ್​ ಕುಂಬ್ಳೆವಹಿಸಿಕೊಳ್ಳುತ್ತಿದ್ದಾರೆ ಎಂದು ಐಸಿಸಿ ಜನರಲ್​ ಮ್ಯಾನೇಜರ್​ ಜಿಯೊಫ್​ ಜೆಫ್ ಅಲ್ಲಾರ್ಡೈಸ್ ತಿಳಿಸಿದ್ದಾರೆ.

2008ರ ಟಿ20 ವಿಶ್ವಕಪ್​ನಿಂದ ಟೈ ಆಗುವ ಐಸಿಸಿ ಇವೆಂಟ್​ಗಳಲ್ಲಿ ವಿಜೇತರನ್ನು ಘೋಷಿಸಲೇಬೇಕೆಂದು ನಿರ್ಣಯಿಸಿದ್ದು, ವಿಜೇತರಿಗಾಗಿ ಬಾಲ್ ಔಟ್​​ ನಿಯಮ ಅಳವಡಿಸಿಕೊಳ್ಳಲಾಗಿತ್ತು. ಆದರೆ, 2009ರಲ್ಲಿ ಈ ನಿಯಮವನ್ನು ಬದಲಿಸಿ ಸೂಪರ್​ ಓವರ್​ ಅಳವಡಿಸಿಕೊಳ್ಳಲಾಯಿತು. ಒಂದುವೇಳೆ ಇಲ್ಲೂ ಟೈ ಆದರೆ ಹೆಚ್ಚು ಬೌಂಡರಿಗಳಿಸಿದ ತಂಡವನ್ನು ವಿಜಯಿ ಎಂದು ತೀರ್ಮಾನಿಸುವಂತಾಯಿತು.

ಆದರೆ, ಪ್ರಸ್ತುತ ಈ ನಿಯಮ ಟೀಕೆಗೆ ಗುರಿಯಾಗಿರುವುದರಿಂದ ಮುಂದಿನ ಐಸಿಸಿ ಸಭೆಯಲ್ಲಿ ಈ ನಿಯಮದ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗುವುದು ಎಂದು ಅಲ್ಲಾರ್ಡೈಸ್​ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.