ETV Bharat / sports

'ವಿರಾಟ್​, ಅಶ್ವಿನ್​, ಮುರಳಿ ವಿಜಯ್ ನನ್ನ ಅವಧಿಯ ಟಾಪ್​ 3 ಪ್ಲೇಯರ್ಸ್'​ - Virat Kohli

2011ರ ವಿಶ್ವಚಾಂಪಿಯನ್​ ತಂಡವನ್ನು ಆಯ್ಕೆ ಮಾಡಿದ್ದ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದ್ದ ಕೆ. ಶ್ರೀಕಾಂತ್​ ತಮ್ಮ ಅಧಿಕಾರವಧಿಯಲ್ಲಿ ಆಯ್ಕೆ ಮಾಡಿದ ಟಾಪ್​ ಮೂರು ಆಟಗಾರರಾಗಿ ವಿರಾಟ್​ ಕೊಹ್ಲಿ, ಮುರಳಿ ವಿಜಯ್​ ಹಾಗೂ ಆರ್.ಅಶ್ವಿನ್ ಅವ​ರನ್ನು ಹೆಸರಿಸಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : May 31, 2020, 4:37 PM IST

ಮುಂಬೈ: ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಅಧಿಕಾರಾವಧಿಯಲ್ಲಿ ಆಯ್ಕೆ ಮಾಡಿದ್ದ ಪ್ರಮುಖ ಮೂರು ಆಟಗಾರರ ಹೆಸರನ್ನು ಬಹಿರಂಗಗೊಳಿಸಿದ್ದಾರೆ.

ವಿರಾಟ್​ ಕೊಹ್ಲಿ ಭಾರತ ತಂಡದ ನಾಯಕನಾಗಿ ಹಾಗೂ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ ಆಗಿ ಬೆಳೆದು ನಿಂತಿದ್ದಾರೆ. ಅವರು ಮೂರು ಮಾದರಿಯ ಕ್ರಿಕೆಟ್​ನಲ್ಲಿ 50ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್​ ಗಳಿಸಿದ್ದಾರೆ. ಅಶ್ವಿನ್​ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 300 ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. ಅವರು ಒಟ್ಟಾರೆ 365 ವಿಕೆಟ್​ ಪಡೆದಿದ್ದಾರೆ. ಇನ್ನು ವಿಜಯ್​ ಕೂಡ ಉತ್ತಮ ಟೆಸ್ಟ್​ ಬ್ಯಾಟ್ಸ್​ಮನ್ ಆಗಿದ್ದರೂ ಕೂಡ ಖಾಯಂ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

Kris Shrikanth
ಕೆ.ಶ್ರೀಕಾಂತ್​

ಈ ಬಗ್ಗೆ ಮಾತನಾಡಿರುವ ಶ್ರೀಕಾಂತ್, ನನ್ನ ಅಧಿಕಾರವಧಿಯಲ್ಲಿ ಆಯ್ಕೆ ಮಾಡಿದ ಈ ಮೂವರು ಆಟಗಾರರು ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ನಮಗೆ ಗೌರವ ತಂದುಕೊಟ್ಟಿದ್ದಾರೆ. ಈ ಆಟಗಾರರು ಬೆಳೆದ ರೀತಿಗೂ ಮತ್ತು ಬೆಳೆಯುತ್ತಿರುವುದಕ್ಕೂ ನಾನು ಸಂತಸಗೊಂಡಿದ್ದೇನೆ. ಅವರು ಸಚಿನ್​, ಧೋನಿ ಹಾಗೂ ಹರ್ಭಜನ್​ಸಿಂಗ್​ ಹಾಗೂ ಸೆಹ್ವಾಗ್​ರಂತೆ ಭಾರತ ತಂಡದ ಯಶಸ್ಸಿನ ಭಾಗವಾಗಿದ್ದಾರೆ ಎಂದು ಸ್ಟಾರ್​ ಸ್ಫೋರ್ಟ್ಸ್​ ಶೋನಲ್ಲಿ ಅವರು ಹೇಳಿಕೊಂಡಿದ್ದಾರೆ.

ಶ್ರೀಕಾಂತ್​ ಅವರ ನೇತೃತ್ವದ ಆಯ್ಕೆ ಸಮಿತಿಯ ಆಯ್ಕೆ ಮಾಡಿದ್ದ ಭಾರತ ತಂಡ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ನಲ್ಲಿ ಹೀನಾಯವಾಗಿ ಟೆಸ್ಟ್​ ಸರಣಿ ಕಳೆದುಕೊಂಡರೂ 2011ರಲ್ಲಿ ಏಕದಿನ ವಿಶ್ವಕಪ್​ ಗೆದ್ದುಕೊಡುವಲ್ಲಿ ಯಶಸ್ವಿಯಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.