ETV Bharat / sports

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಸಿಸಿಬಿಯಿಂದ ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ವಿಚಾರಣೆ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ಅವರನ್ನು ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.

ಕೆ.ಸಿ.ಕಾರ್ಯಪ್ಪ
author img

By

Published : Nov 15, 2019, 7:09 PM IST

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ಐಪಿಎಲ್ ಆಟಗಾರ ಕೆ.ಸಿ. ಕಾರ್ಯಪ್ಪ ಅಲಿಯಾಸ್ ಕ್ಯಾರಿಯನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಕಾರ್ಯಪ್ಪ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದು, ಕೆಪಿಎಲ್​ನಲ್ಲಿ ವಿಜಾಪುರ ಬುಲ್ಸ್ ಪರ ಆಡಿದ್ದರು. ಸದ್ಯ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಗುಮಾನಿ ಮೇರೆಗೆ‌ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬಳ್ಳಾರಿ ಟಸ್ಕರ್ಸ್ ಆಟಗಾರನಾದ ಗೌತಮ್ ಅವರನ್ನು ಸಿಸಿಬಿ ಬಂಧಿಸಿತ್ತು. ವಿಚಾರಣೆ ವೇಳೆ ಗೌತಮ್ ಕೆಲ ಮಾಹಿತಿ ಬಿಚ್ಚಿಟ್ಟಿದ್ದು, ಈ ಮಾಹಿತಿ ಆಧರಿಸಿ ಕೆ.ಸಿ. ಕಾರ್ಯಪ್ಪ ಅವರನ್ನ ವಿಚಾರಣೆ ನಡೆಸುತ್ತಿದ್ದಾರೆ.

ಕೆ.ಸಿ. ಕಾರ್ಯಪ್ಪ 2015 ರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ ಬಿಕರಿಯಾಗಿದ್ದರು. 2016 ಹಾಗೂ 2017 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಟೀಂ ಸೇರಿದ್ದರು. 2019 ರಲ್ಲಿ ಕೋಲ್ಕತ್ತಾ ತಂಡ ಶಿವಂ ಬದಲಿಗೆ ಕಾರ್ಯಪ್ಪರನ್ನು ಕಣಕ್ಕಿಳಿಸಿತ್ತು. ಸದ್ಯ ಕೆಪಿಎಲ್ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿರುವ ಅನುಮಾನದ ಮೇರೆಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

Intro:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ
ಕೆಸಿ ಕಾರ್ಯಪ್ಪ @ ಕ್ಯಾರಿ ವಿಚಾರಣೆ ನಡೆಸಿದ ಸಿಸಿಬಿ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ಐಪಿಎಲ್ ಆಟಗಾರ ಕೆ.ಸಿ ಕಾರ್ಯಪ್ಪ @ ಕ್ಯಾರಿ ಯನ್ನ ಸಿಸಿಬಿ ವಿಚಾರಣೆ ನಡೆಸಿದ್ದಾರೆ. ಕಿಂಗ್ಸ್ ಇಲೆವೆನ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನ ಆಟಗಾರನಾಗಿದ್ದು
ಈ ಹಿಂದೆ ಕೆಪಿಎಲ್ ನ ಬಿಜಾಪುರ ಬುಲ್ಸ್ ಪರ ಆಡಿದ್ದು ಸದ್ಯ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಗುಮಾನಿ ಮೇರೆಗೆ‌ ಈತ ಏನಾದ್ರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾತ್ರವಿದ್ಯ ಅನ್ನೋದ್ರ ಬಗ್ಗೆ ತನಿಖೆ ಮುಂದುವರೆದಿದೆ .

ಇತ್ತಿಚ್ಚೆಗೆ ಬಳ್ಳಾರಿ ಟಸ್ಕರ್ಸ್ ಆಟಗಾರನಾದ ಗೌತಮ್ ನನ್ನ ಸಿಸಿಬಿ ಬಂಧಿಸಿತ್ತು . ಈತ ವಿಚಾರಣೆ ವೇಳೆ ಕೆಲ ಮಾಹಿತಿ ಬಿಚ್ಚಿಟ್ಟಿದ್ದು ಈ ಮಾಹಿತಿ ಯಾಧರಿಸಿ ಕೆ .ಸಿ ಕಾರ್ಯಪ್ಪ @ ಕ್ಯಾರಿಯನ್ನ ವಿಚಾರಣೆ ನಡೆಸುತ್ತಿದ್ದಾರೆ.

ಕೆ.ಸಿ ಕಾರ್ಯಪ್ಪ @ ಕ್ಯಾರಿ‌ ೨೦೧೫ ರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ೩.೫ ಲಕ್ಷ ಡಾಲರ್ ಗೆ ಬಿಕರಿಯಾಗಿದ್ದ ಆಟಗಾರ.
೨೦೧೬ ಹಾಗೂ ೨೦೧೭ ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಟೀಂಗೆ ಸೇರಿದ ಕಾರ್ಯಪ್ಪ೨೦೧೯ ರಲ್ಲಿ ಕೋಲ್ಕತ್ತಾ ಟೀಂನ ಶಿವಂ ಬದಲಿಗೆ ಕಾರ್ಯಪ್ಪನನ್ನ ಕಣಕ್ಕಿಳಿಸಲಾಗಿತ್ತು.ಸದ್ಯ ಕೆಪಿ ಎಲ್ ಹಗರಣದ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವ ಗುಮಾನಿ ಮೇರೆಗೆ ಸದ್ಯ ಸಿಸಿಬಿ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ

Body:kN_BNG_07-RACE_7204498Conclusion:kN_BNG_07-RACE_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.