ಅಬುಧಾಬಿ: ಪ್ಲೇ ಆಫ್ ಕನಸಿನಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಆರ್ಸಿಬಿ ವಿರುದ್ಧ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ರಸೆಲ್ ಮತ್ತು ಶಿವಂ ಮಾವಿ ಬದಲಿಗೆ ಬಾಂಟನ್ ಹಾಗೂ ಪ್ರಸಿದ್ ಕೃಷ್ಣ ತಂಡಕ್ಕೆ ಮರಳಿದ್ದಾರೆ. ಆರ್ಸಿಬಿ ಮೊಹಮ್ಮದ್ ಶಬಾಜ್ ಬದಲಿಗೆ ಸಿರಾಜ್ಗೆ ಅವಕಾಶ ನೀಡಿದೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಆಡಿದ 9 ಪಂದ್ಯಗಳ ಪೈಕಿ 6ರಲ್ಲಿ ಜಯ ಗಳಿಸಿದ್ದು, 3 ಪಂದ್ಯಗಳನ್ನು ಕೈಚೆಲ್ಲಿದೆ. ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ತಂಡ ಆಡಿದ 9 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಜಯಗಳಿಸಿದ್ರೆ, 4 ಪಂದ್ಯಗಳಲ್ಲಿ ಸೋಲು ಕಂಡಿದೆ.
-
#KKR have won the toss and they will bat first against #RCB.#Dream11IPL pic.twitter.com/mJdzd1erji
— IndianPremierLeague (@IPL) October 21, 2020 " class="align-text-top noRightClick twitterSection" data="
">#KKR have won the toss and they will bat first against #RCB.#Dream11IPL pic.twitter.com/mJdzd1erji
— IndianPremierLeague (@IPL) October 21, 2020#KKR have won the toss and they will bat first against #RCB.#Dream11IPL pic.twitter.com/mJdzd1erji
— IndianPremierLeague (@IPL) October 21, 2020
ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಬೆಂಗಳೂರು ಮತ್ತು ಕೋಲ್ಕತ್ತಾ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಕೆಕೆಆರ್ ತಂಡ 15ರಲ್ಲಿ ಗೆಲುವು ದಾಖಲಿಸಿದ್ರೆ, ಆರ್ಸಿಬಿ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್(ವಿ.ಕೀ), ಗುರುಕಿರತ್ ಸಿಂಗ್ ಮನನ್, ವಾಷಿಂಗ್ಟನ್ ಸುಂದರ್, ಕ್ರಿಸ್ ಮೊರಿಸ್, ಮೊಹಮ್ಮದ್ ಸಿರಾಜ್, ಇರುಸ್ ಉದಾನ್, ನವದೀಪ್ ಸೈನಿ,ಚಹಾಲ್.
ಕೋಲ್ಕತ್ತಾ ನೈಟ್ ರೈಡರ್ಸ್: ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೊನ್ ಮೋರ್ಗಾನ್ (ನಾಯಕ), ಟಾಮ್ ಬಾಂಟನ್, ದಿನೇಶ್ ಕಾರ್ತಿಕ್ (ವಿ,ಕೀ), ಪ್ಯಾಟ್ ಕಮ್ಮಿನ್ಸ್, ಪ್ರಸಿದ್ ಕೃಷ್ಣ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ