ETV Bharat / sports

ಐಸಿಸಿ ಟೆಸ್ಟ್​ ಶ್ರೇಯಾಂಕ: 4ನೇ ಸ್ಥಾನ ಉಳಿಸಿಕೊಂಡ ಕೊಹ್ಲಿ, 6ಕ್ಕೇರಿದ ಪೂಜಾರ

ಕೊಹ್ಲಿ(862)ಯನ್ನು ಹೊರತು ಪಡಿಸಿದರೆ. ಪೂಜಾರ(760) ಒಂದು ಸ್ಥಾನ ಮೇಲೇರಿ 6ನೇ ಸ್ಥಾನದಲ್ಲಿ ಮತ್ತು ರಹಾನೆ(748) ಒಂದು ಸ್ಥಾನ ಏರಿಕೆ ಕಂಡು 8ನೇ ಸ್ಥಾನಕ್ಕೇರಿದ್ದಾರೆ. ಇನ್ನು ಯುವ ವಿಕೆಟ್​ ಕೀಪರ್ ರಿಷಭ್ ಪಂತ್ 13 ಮತ್ತು ಆರಂಭಿಕ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ 18ರಲ್ಲಿದ್ದಾರೆ.

author img

By

Published : Jan 30, 2021, 5:39 PM IST

ಐಸಿಸಿ ಟೆಸ್ಟ್​ ಶ್ರೇಯಾಂಕ
ಐಸಿಸಿ ಟೆಸ್ಟ್​ ಶ್ರೇಯಾಂಕ

ದುಬೈ: ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿಯ ನಂತರ ಐಸಿಸಿ ನೂತನ ಟೆಸ್ಟ್ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿ ಭದ್ರವಾಗಿದ್ದರೆ.

ಕೊಹ್ಲಿ(862)ಯನ್ನು ಹೊರತು ಪಡಿಸಿದರೆ. ಪೂಜಾರ(760) ಒಂದು ಸ್ಥಾನ ಮೇಲೇರಿ 6ನೇ ಸ್ಥಾನದಲ್ಲಿ ಮತ್ತು ರಹಾನೆ(748) ಒಂದು ಸ್ಥಾನ ಏರಿಕೆ ಕಂಡು 8ನೇ ಸ್ಥಾನಕ್ಕೇರಿದ್ದಾರೆ. ಇನ್ನು ಯುವ ವಿಕೆಟ್​ ಕೀಪರ್ ರಿಷಭ್ ಪಂತ್ 13 ಮತ್ತು ಆರಂಭಿಕ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ 18ರಲ್ಲಿದ್ದಾರೆ.

ನ್ಯೂಜಿಲ್ಯಾಂಡ್​ ಕೇನ್​ ವಿಲಿಯಮ್ಸನ್(919), ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್(891)​ ಮತ್ತು ಮಾರ್ನಸ್ ಲಾಬುಶೇನ್(878) ಅಗ್ರ ಮೂರು ಸ್ಥಾನಗಳಲ್ಲಿದ್ದರೆ, ಇಂಗ್ಲೆಂಡ್ ನಾಯಕ ಜೋ ರೂಟ್( 823) 5ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಗಮನಾರ್ಗ ಪ್ರದರ್ಶನ ತೋರಲು ವಿಫಲರಾದ ಬಾಬರ್ ಅಜಮ್(755) ಒಂದು ಸ್ಥಾನ ಕುಸಿದು 7ನೇ ಸ್ಥಾನ ಪಡೆದಿದ್ದಾರೆ.

ಬೌಲರ್​ಗಳ ಪೈಕಿ ರವಿಚಂದ್ರನ್​ ಅಶ್ವಿನ್(760) ಮತ್ತು ವೇಗಿ ಜಸ್ಪ್ರೀತ್ ಬುಮ್ರಾ(757) ಕ್ರಮವಾಗಿ 8 ಮತ್ತು 9ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್(908), ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್(839) ಮತ್ತು ಕಿವೀಸ್ ವೇಗಿ ನೈಲ್ ವ್ಯಾಗ್ನರ್​(825) ಮೊದಲ 3 ಸ್ಥಾನದಲ್ಲಿದ್ದಾರೆ.

ಇದನ್ನು ಓದಿ:ಕೊಹ್ಲಿ vs ರೂಟ್​.. ನಾಯಕರ ನಡುವಿನ ಕಾದಾಟದಲ್ಲಿ ಗೆಲ್ಲೋರ್ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.