ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿನ್ನೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಾಣುವ ಮೂಲಕ 13ನೇ ಆವೃತ್ತಿ ಐಪಿಎಲ್ನಿಂದ ಹೊರಬಿದ್ದಿದ್ದು, ಈ ಮೂಲಕ ತನ್ನ ಅಭಿಯಾನಕ್ಕೆ ಗುಡ್ ಬೈ ಹೇಳಿದೆ.
ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಚೊಚ್ಚಲ ಟ್ರೋಫಿಗಾಗಿ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ. ತಂಡದಲ್ಲಿನ ನನೆಪುಗಳು ಹಾಗೇ ಉಳಿದುಕೊಳ್ಳುತ್ತವೆ. ಎಲ್ಲರೂ ಒಟ್ಟಿಗೆ ಸಮಯ ಕಳೆದಿದ್ದೇವೆ. ಇಲ್ಲಿಯವರೆಗೆ ನಾವು ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಕಳೆದ ಐದು ಆವೃತ್ತಿಗಳಲ್ಲಿ ನಾವು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದರೆ ಇದೀಗ ನಾವು ಉತ್ತಮ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂಬ ಭಾವನೆ ನನ್ನಲ್ಲಿದೆ ಎಂದರು.
-
A memorable campaign came to a disappointing end, but the RCB players savour the final moments together in the dressing room before they fly out of Dubai.
— Royal Challengers Bangalore (@RCBTweets) November 7, 2020 " class="align-text-top noRightClick twitterSection" data="
PS: After about 80 consecutive days, this is our final 9 AM video for the #IPL#PlayBold #Dream11IPL #WeAreChallengers pic.twitter.com/BfZ5FrHWPH
">A memorable campaign came to a disappointing end, but the RCB players savour the final moments together in the dressing room before they fly out of Dubai.
— Royal Challengers Bangalore (@RCBTweets) November 7, 2020
PS: After about 80 consecutive days, this is our final 9 AM video for the #IPL#PlayBold #Dream11IPL #WeAreChallengers pic.twitter.com/BfZ5FrHWPHA memorable campaign came to a disappointing end, but the RCB players savour the final moments together in the dressing room before they fly out of Dubai.
— Royal Challengers Bangalore (@RCBTweets) November 7, 2020
PS: After about 80 consecutive days, this is our final 9 AM video for the #IPL#PlayBold #Dream11IPL #WeAreChallengers pic.twitter.com/BfZ5FrHWPH
ಮುಂದಿನ ವರ್ಷ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಇರಾದೆ ಜತೆ ನಾವು ಕಣಕ್ಕಿಳಿಯಬೇಕಾದ ಅನಿವಾರ್ಯತೆ ಇದ್ದು, ಅದಕ್ಕಾಗಿ ಈಗಿನಿಂದಲೇ ತಯಾರಿ ಅವಶ್ಯವಾಗಿದೆ ಎಂದಿದ್ದಾರೆ. ಟೂರ್ನಿ ವೇಳೆ ಎಲ್ಲರೂ ಇನ್ನೊಬ್ಬರನ್ನ ಅರ್ಥ ಮಾಡಿಕೊಂಡು ಒಂದು ಕುಟುಂಬದ ರೀತಿಯಲ್ಲಿ ಉಳಿದುಕೊಂಡಿದ್ದು ನಿಜಕ್ಕೂ ಅದ್ಭುತವಾಗಿತ್ತು. ಪಡಿಕ್ಕಲ್, ಸಿರಾಜ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.