ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ಐಸಿಸಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ 2ನೇ ಶ್ರೇಯಾಂಕದಲ್ಲಿ ಕಳೆದ ಎರಡು ವರ್ಷ ಕಳೆದಿದ್ದ ರೋಹಿತ್ ಶರ್ಮಾ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 56 ರನ್ ಗಳಿಸಿದ್ದ ಕೊಹ್ಲಿ 868 ರೇಟಿಂಗ್ ಅಂಕಗಳೊಂದಿಗೆ ಅಗಸ್ಥಾನದಲ್ಲಿದ್ದರೆ, 42 ಎಸೆತಗಳಲ್ಲಿ 28 ರನ್ಗಳಿಸಿದ್ದ ರೋಹಿತ್ ಶರ್ಮಾ(834) ಒಂದು ಸ್ಥಾನ ಕುಸಿದಿದ್ದಾರೆ. ಬಾಬರ್ ಅಜಮ್(837) 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
-
England's @jbairstow21 makes significant gains, enters top 10 in the latest @MRFWorldwide ICC Men's ODI Rankings for batting.
— ICC (@ICC) March 24, 2021 " class="align-text-top noRightClick twitterSection" data="
Full list: https://t.co/sipiRJgcGu pic.twitter.com/kK1QBUkYmV
">England's @jbairstow21 makes significant gains, enters top 10 in the latest @MRFWorldwide ICC Men's ODI Rankings for batting.
— ICC (@ICC) March 24, 2021
Full list: https://t.co/sipiRJgcGu pic.twitter.com/kK1QBUkYmVEngland's @jbairstow21 makes significant gains, enters top 10 in the latest @MRFWorldwide ICC Men's ODI Rankings for batting.
— ICC (@ICC) March 24, 2021
Full list: https://t.co/sipiRJgcGu pic.twitter.com/kK1QBUkYmV
ಭಾರತದೆದುರು ಸ್ಫೋಟಕ ಬ್ಯಾಟಿಂಗ್ ಮೂಲಕ 94 ರನ್ ಗಳಿಸಿದ್ದ ಜಾನಿ ಬೈರ್ಸ್ಟೋವ್ ಜೀವನ ಶ್ರೇಷ್ಠ 7ನೇ ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ. ಬೈರ್ಸ್ಟೋವ್ ಟಾಪ್ 10ರಲ್ಲಿರುವ ಏಕೈಕ ಇಂಗ್ಲೆಂಡ್ ಬ್ಯಾಟ್ಸ್ಮನ್ ಆಗಿದ್ದಾರೆ.
ಇದೇ ಪಂದ್ಯದಲ್ಲಿ 98 ರನ್ ಗಳಿಸಿದ್ದ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ 2 ಸ್ಥಾನ ಮೇಲೇರಿ 15ರಲ್ಲಿದ್ದಾರೆ. ರಾಹುಲ್ 31ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ 3ರಲ್ಲಿ ಮುಂದುವರೆದಿದ್ದಾರೆ. ಭುವನೇಶ್ವರ್ ಕುಮಾರ್ 20ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಇದನ್ನು ಓದಿ:ಐಸಿಸಿ ಟಿ-20 ರ‍್ಯಾಂಕಿಂಗ್: ಕುಸಿದ ರಾಹುಲ್, 4ನೇ ಸ್ಥಾನಕ್ಕೆ ಬಡ್ತಿ ಪಡೆದ ಕೊಹ್ಲಿ